ಬುಧವಾರ, 6 ಏಪ್ರಿಲ್ 2022
ಶಾಲಿನಿ ಗ್ರೌಂಡ್ಸ್, ಜಯನಗರ, ಬೆಂಗಳೂರು.
ಸ್ವದೇಶಿ ಉತ್ಪನ್ನಗಳ ಮಾರುಕಟ್ಟೆಗೆ ವೇದಿಕೆಯನ್ನು ಏರ್ಪಡಿಸಲು "ಸ್ವದೇಶಿ ಜಾಗರಣ ಮಂಚ್" ಅವರು 6-ದಿನಗಳ "ಸ್ವದೇಶಿ ಮೇಳ" ವನ್ನು ಆಯೋಜಿಸಿರುತ್ತಾರೆ.
"ಸ್ವಾಭಿಮಾನ, ಸ್ವಾವಲಂಬನೆ, ಸಾರ್ವಭೌಮತ್ವ" ಮೇಳದ ಉದ್ದೇಶವಾಗಿರುತ್ತದೆ.
ಜಯನಗರದ ವಿಶಾಲವಾದ ಆಟದ ಮೈದಾನದಲ್ಲಿ ಅಧುನಿಕ ಬೃಹತ್ ಟೆಂಟ್ ಗಳನ್ನು ಅಳವಡಿಸಿ, ಮಳಿಗೆಯವರಿಗೆ ಹಾಗು ಗ್ರಾಹಕರಿಗೆ ಸುಲಭವಾಗಿ ವೀಕ್ಷಿಲು, ಕೊಂಡುಕೊಳ್ಳಲು ಸುಲಭವಾಗುವಂತೆ ವ್ಯವಸ್ತೆಯನ್ನು ಮಾಡಿರುತ್ತಾರೆ.
ಸಾಲು ಸಾಲಾಗಿ ಮಳಿಗೆಗಳು, ಸ್ವದೇಶಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಭರದಿಂದ ಸಾಗುತ್ತಿದೆ.
ಇಂದು ಮೊದಲನೇ ದಿನವಾದ್ದರಿಂದ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಮುಖ್ಯ ಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು, ಸುತ್ತೊರು ಸ್ವಾಮಿಜಿ ಯವರು ಬಂದಿದ್ದರು.
ವಿಧ ವಿಧದ ಸರಕುಗಳು, ಸೀರೆಗಳು, ಸಿರಿಧಾನ್ಯ, ಕುತ್ತಿಗೆ, ಕಿವಿಗೆ ಹಾಕುವ ಕೃತಕ ಆಭರಣಗಳು, ತೋಟಗಾರಿಕೆ ಬೇಕಾಗುವ ಸಾಮಾನುಗಳು, ಕರ್ನಾಟಕ ಪ್ರವಾಸೋದ್ಯಮ, ಇತ್ಯಾದಿ ನೂರಾರು ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಲು ತಮ್ಮದೇ ಆದ ವಿಧಾನವನ್ನು ಅನುಸರಿಸುತಿದ್ದರು.
ಒಂದು ಅತ್ಯಂತ ಆಕರ್ಷಕವಾದ ಪ್ರದರ್ಶನವು "ಮಡಿಕೆ ತಯಾರಿಸುವಿಕೆ"
ಪದ್ಮಾವತಿ, ಭಾಗ್ಯವತಿ ಅವರು ಈ ಪ್ರದರ್ಶನವನ್ನು ನಳಿನಿಯವರಿಗೆಮಾಡಿ ತೋರಿಸಿದ್ದು ಮುಖ್ಯ ಅತಿಥಿಗಳ ಗಮನವನ್ನು ಸೆಳೆಯಿತು. ವೀಡಿಯೊ ವೀಕ್ಷಿಸಿ.
ಸುಮಾರು ಮೂರು ಗಂಟೆಗಳ ಕಾಲ ಪ್ರದರ್ಶನದಲ್ಲಿ ತಿರುಗಿ, ಮೂರು ಸಾವಿರಕ್ಕೂ ಹೆಚ್ಹಿನ ವಸ್ತುಗಳನ್ನು ಖರೀದಿಸಿ, ಸುಸ್ತಾಗಿ ವಾಪಸ್ಸು ಹೊರಟೆವು.
ಬರೆದಿರುವುದು, ಶುಕ್ರವಾರ, 8 ಏಪ್ರಿಲ್ 2022
Swadeshi Mela 2024: Bridging India and America – A Spectacle of Trade and Culture at Chicago's Mall of India
ReplyDeleteJoin us at Swadeshi Mela 2024 in Chicago for an unparalleled trade and cultural fiesta, showcasing the best of India and America. Connect, explore, and celebrate the spirit of collaboration at the Mall of India.
Swadeshi Mela 2024: A Confluence of Indian and American Commerce and Culture
An Invitation to Connect and Celebrate. We are excited to extend a warm invitation to the Swadeshi Mela 2024, a vibrant showcase of trade and cultural exchange between India and America. This event is proudly organized by the DTribals Foundation, with a mission to foster business relationships and cultural understanding between these two great nations.