Monday, July 18, 2022

ಜುಲೈ ಕಾರ್ಯಕ್ರಮ - ಅರ್ಜುನ್ ಭಾರಧ್ವಾಜ್

 ಭಾನುವಾರ. 17 ಜುಲೈ 2022 

ತರಳಬಾಳು ಕೇಂದ್ರ ಗ್ರಂಥಾಲಯ , ಅರ್.ಟಿ. ನಗರ, ಬೆಂಗಳೂರು.


ಅರ್ಜುನ್ ಭಾರಧ್ವಾಜ್ 


ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ ಕಾರ್ಯಕ್ರಮವು, ಶ್ರೀ ಅರ್ಜುನ್ ಭಾರಧ್ವಾಜ್ ಅವರ ಬಹಳ ಸ್ವಾರಸ್ಯಕರವಾದ  ಉಪನ್ಯಾಸ "ಕೃಷ್ಣ ಕರ್ಣಾಮೃತದ ರಸ ಪದ್ಯಗಳು" ಎಂಬ ವಿಷಯದಿಂದ ಸಂಪನ್ನ ಗೊಂಡಿತು.


ಕುಮಾರಿ ಚಿತ್ತಶ್ರೀ 

ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಶ್ರೀಮತಿ ದೀಪ ಫಡ್ಕೆ ಅವರಿಂದ ಸ್ವಾಗತ, ಮುಖ್ಯ ಅತಿಥಿ ಅರ್ಜುನ್ ಭಾರಧ್ವಾಜ್ ಅವರ ಪರಿಚಯ ನಡೆಯಿತು.

ರಘುರಾಮ 


ಶ್ರೀಮತಿ ದೀಪಾ ಫಡ್ಕೆ 

ಸುಮಾರು 50 ನಿಮಿಷಗಳ ಕಾಲ ಮಾತನಾಡಿದ ಶ್ರೀ ಭಾರಧ್ವಾಜ್ ಅವರು ಕೃಷ್ಣ ಬಾಲ್ಯದ ಲೀಲೆಗಳು , ಸಾಕು ತಾಯಿ ಯಶೋದೆಯೊಂದಿಗೆ ಸರಸ, ಮುನಿಸು, ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನ ವಿಶ್ವ ರೂಪ ದರ್ಶನ, ಇತ್ಯಾದಿ ಸಂದರ್ಭಗಳ ಬಗ್ಗೆ ಸಂಸ್ಕೃತದಲ್ಲಿ ಇರುವ ಕಾವ್ಯವನ್ನುಕನ್ನಡದಲ್ಲಿ ರಸವತ್ತಾಗಿ ಬಣ್ಣಿಸಿದರು.





ಸಹ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅವರು ಧನ್ಯವಾದ ಸಮರ್ಪಣೆ ಮಾಡಿದರು.

ಶಶಿಕಲಾ 
ನಾಂಕ :17-07-2022
ಸಂಜೆ: 4ಗಂಟೆಗೆ
ಆರ್ ಟಿ ನಗರ, ಬೆಂಗಳೂರು-32

ಶಿವರಾಮ ಕಾರಂತ ವೇದಿಕೆ (ರಿ), ತರಳಬಾಳು ಕೇಂದ್ರ, ಆರ್ ಟಿ ನಗರ, ಇಲ್ಲಿ  ಜುಲೈ ತಿಂಗಳ ಸಾಹಿತ್ಯ ಕಾರ್ಯಕ್ರಮ ಜರುಗಿತು

ವೇದಿಕೆಯ ಸಂಸ್ಥಾಪಕರು, ಹಿರಿಯರು, ಕಾರ್ಯಾಧ್ಯಕ್ಷರಾದ ಶ್ರೀ ಪಾ. ಚಂದ್ರಶೇಖರ ಚಡಗರವರ ಮಾರ್ಗದರ್ಶನದಲ್ಲಿ  ಶ್ರೀಮತಿ ದೀಪಾ ಪಡ್ಕೆಯವರ ಅಧ್ಯಕ್ಷತೆಯಲ್ಲಿ. ಶ್ರೀ ವೀರಶೇಖರ ಸ್ವಾಮಿ  ಉಪಾಧ್ಯಕ್ಷರು, ಶ್ರೀ ಜಯರಾಮ್ ಸೋಮಯಾಜಿ, ಕೋಶಾಧಿಕಾರಿ , ಇವರ ಸಾರಥ್ಯದಲ್ಲಿ
ಶ್ರೀ ಸಿ.ಆರ್ ಸತ್ಯರವರು ವಿಜ್ಞಾನಿ ಇವರುಗಳ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ
ವೇದಿಕೆಯ ಅತಿಥಿಗಳು:* :: ಉಪನ್ಯಾಸಕರು, ಪ್ರೇಕ್ಫಾ ಅಂತರ್ಜಾಲ ಪತ್ರಿಕೆಯ ಸಹ ಸಂಪಾದಕರು,
ವಿದ್ವಾಂಸರು ಅರ್ಜುನ ಭಾರಧ್ವಾಜ್ ರವರು 
ಉಪನ್ಯಾಸದ ವಿಷಯ: 
 ಕೃಷ್ಣ ಕರ್ಣಾಮೃತದ ರಸ ಪದ್ಯಗಳು 

ಬೆಣ್ಣೆ ತುಂಟ ಕೃಷ್ಣನಿಂದ ಭಕ್ತವತ್ಸಲ ಕೃಷ್ಣನವರಿಗೂ ರಸವತ್ತಾದ ಪದ್ಯಗಳ ವಾಚನ ಮತ್ತು ವಿಸ್ತೃತ ವಿವರಣೆಯೊಂದಿಗೆ ಇಡೀ ಸಭೆಯನ್ನು ಕೃಷ್ಣ ಬ್ರಹ್ಮಾಂಡಕ್ಕೆ ಕೊಂಡೊಯ್ದರು ವಿದ್ವಾನ್ ಅರ್ಜುನ್ ಭಾರಧ್ವಾಜ್ ರವರು. ಪಾನಕ ಕುಡಿಯುತ್ತಾ ಮತ್ತೂ ಬೇಕು ಎನ್ನುವಂತೆ ರಸಾನಂದದಲ್ಲಿ ಪ್ರೇಕ್ಷಕರು ಕುಳಿತಿರುವಾಗ ವೇದಿಕೆಯ ನಿಯಮದಂತೆ ಸಮಯ ಮುಗಿದಿತ್ತು.
ಧನ್ಯೋಸ್ತಿ - ಇಂಥ ರಸ ಗಳಿಗೆಗೆ ಸಾಕ್ಷಿಯಾಗಲು ಅವಕಾಶ ಸಿಕ್ಕಿದ್ದಕ್ಕೆ ಎನ್ನುವ ಭಾವಪರವಶತೆ ನಮ್ಮದಾಗಿತ್ತು.

ಪ್ರಾರ್ಥನೆ: ಕುಮಾರ ರಘುರಾಮ
ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ: ದೀಪಾ ಪಡ್ಕೆ, ವೇದಿಕೆ ಅಧ್ಯಕ್ಷರು
ನಿರೂಪಣೆ:ಕುಮಾರಿ ಚಿತ್ತಶ್ರೀ
ವಂದನಾರ್ಪಣೆ: ಶಶಿಕಲಾ ಆರ್

ಭಾಗವಹಿಸಿದ ಎಲ್ಲರಿಗೂ
ಧನ್ಯವಾದಗಳು

ಶಶಿಕಲಾ ಆರ್,
 ಸಹ ಕಾರ್ಯದರ್ಶಿ
ಶಿವರಾಮಕಾರಂತ ವೇದಿಕೆ ಪರವಾಗಿ


No comments:

Post a Comment