Sunday, December 18, 2022

ಡಿಸೆಂಬರ್ ಕಾರ್ಯಕ್ರಮ - ಕುವೆಂಪು ಸ್ಮರಣೆ

ಭಾನುವಾರ  18 ದಶಂಬರ, 2022 

ತರಳಬಾಳು ಗ್ರಂಥಾಲಯ, ಅರ್.ಟಿ.ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ದಶಂಬರ ಕಾರ್ಯಕ್ರಮವನ್ನು "ಕುವೆಂಪು ಸ್ಮರಣೆ" ಎಂದು ಹಮ್ಮಿಕೊಂಡಿದ್ದು, ಶ್ರೀ ಕೆ ವೈ. ನಾರಾಯಣಸ್ವಾಮಿಯವರಿಂದ ಅದ್ಭುತವಾದ ಉಪನ್ಯಾಸ " ಕುವೆಂಪು ಅವರ ನಾಟಕ ಲೋಕ" ಎಂಬ ವಿಷಯದೊಂದಿಗೆ ಸಂಪನ್ನ ಗೊಂಡಿತು.

ಶ್ರೀ ಕೆ ವೈ ನಾರಾಯಣ ಸ್ವಾಮಿ 

ವೇದಿಯ ಹಾಜರಿದ್ದ ಸಮಿತಿ ಸದಸ್ಯರು 

ಕಾರ್ಯಕ್ರಮವು ಶ್ರೀಮತಿ ಮಂಜುಳಾ ಭಾರ್ಗವಿ ಯವರಿಂದ ಪ್ರಾರ್ಥನೆ ಯೊಂದಿಗೆ ಶುಭಾರಂಭ ವಾಗಿದ್ದು, ಶ್ರೀ ವಿರಶೇಖರ ಸ್ವಾಮಿಯವರಿಂದ ಸ್ವಾಗತ ಭಾಷಣವಾಯಿತು.

ಶ್ರೀಮತಿ ಮಂಜುಳಾ ಭಾರ್ಗವಿ 





ಶ್ರೀ ವೀರಶೇಖರ ಸ್ವಾಮಿ 
ಶ್ರೀಯುತ ಕೆ.ವೈ ನಾರಾಯಣ ಸ್ವಾಮಿಯವರು ತಮ್ಮ ಸುಮಾರು ಒಂದು ಗಂಟೆಯ ಉಪನ್ಯಾಸದಲ್ಲಿ ಕುವೆಂಪು ಅವರ ನಾಟಕ ಲೋಕದಲ್ಲಿಯ ಭಾವನೆಗಳು, ಚಿಂತನೆಗಳನ್ನು ಅನಾವರಣ ಮಾಡಿದರು. 


ಶ್ರೀಯುತ ಶಿವರಾಮ ಕಾರಂತರು ಸಾಹಿತ್ಯ ಲೋಕದ ಉತ್ಸವ ಮೂರ್ತಿಯಾಗಿದ್ದರೆ ಶ್ರೀ ಕುವೆಂಪು ಅವರು ತಮ್ಮ ಮನೆಯಿಂದಲೇ ಅದ್ಭುತವಾದ ಸಾಹಿತ್ಯ ಲೋಕವನ್ನು ಸ್ರಷ್ಟಿಸಿದರು ಎಂದು ಬಣ್ಣಿಸಿದರು.





ಉತ್ತಮ ಹಾಡುಗಾರ ಶ್ರೀ ಚಿದಂಬರ ಕೋಟೆ ಯವರು ಕುವೆಂಪು ಅವರ ಹಾಡನ್ನು ಪ್ರಸ್ತುತ ಪಡಿಸಿದರು.

ಶ್ರೀಮತಿ ಡಾ ದೀಪಾ ಫಡ್ಕೆ 

ಶ್ರೀ ಚಿದಂಬರ ಕೋಟೆ 


ವೇದಿಕೆಯ ಅಧ್ಯಕ್ಷೆ ಶ್ರೀಮತಿ ಡಾ ದೀಪಾ ಫದ್ಕೆಯವರು ಎಲ್ಲರನ್ನೂ ವಂದಿಸಿ ಅತಿಥಿಗಳಿಗೆ ಹೂಗುಸ್ಚ, ಸ್ಮರಣಿಕೆಗಳನ್ನು ನೀಡಲಾಯಿತು. 

ಶ್ರೀಮತಿ ಛಾಯ ಉಪಾದ್ಯ 

ಶ್ರೀಮತಿ ಛಾಯ ಉಪಾದ್ಯಅವರು  ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.

ಬರೆದಿರುವುದು 19/12/2022 


No comments:

Post a Comment