3rd August 2024
From WhatsApp
ಹಳೆಯ ಗೆಳೆಯ(ರು)
Worth Reading and worth following 😊
ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ, ...ನಿಧಾನಕ್ಕೆ ನಡೆಯುತ್ತಿದ್ದಾರೆ ... ನನ್ನ ಹಾಗೇ…
ಹರೆಯದಲ್ಲಿ ಮಿಂಚುತ್ತಿದ್ದ ಪಟ್ಟುಗಳೆಲ್ಲ ಮಾಯವಾಗಿವೆ.
ಯಾರಿಗೋ ಬೊಜ್ಜು ಬಂದಿದೆ... ಇನ್ಯಾರಿಗೋ ... ಕೂದಲು ಹಣ್ಣಾಗುತ್ತಿವೆ.
ಎಲ್ಲರ ತಲೆಯ ಮೇಲೆ ಜವಾಬ್ದಾರಿ ಎಲ್ಲರಿಗೂ ಸಣ್ಣ ಪುಟ್ಟ ಅಜಾರಿ..
ಯಾರಿಗೋ ದೇಹದ ನೋವು ಯಾರಿಗೋ ಮನದ ಅಳಲು ದಿನವಿಡೀ ಓಡುತ್ತಿದ್ದವರು
ಈಗ ನಡೆಯುವಾಗಲೂ ದಣಿವಾರಿಸಿಕೊಳ್ಳುತ್ತಿದ್ದಾರೆ.
ಯಾರಿಗೂ ಸಮಯವಿಲ್ಲ ಎಲ್ಲರ ಕಣ್ಣಲ್ಲೂ ನೋವಿನ ಛಾಯೆ ಛಾಯೆ…
ಎಲ್ಲರಿಗೂ ಅನ್ನಿಸುವುದು ಅಪ್ಪನನ್ನು ಇನ್ನಷ್ಟು ಆರೈಕೆ ಮಾಡಬೇಕಿತ್ತು.!! ಕೊನೆಯ ದಿನಗಳಲ್ಲಿ
ಅಮ್ಮನ ಸೇವೆ ಮಾಡಬೇಕಿತ್ತು.!!
ಕಲವರಿಗೆ ಪಶ್ಚಾತ್ತಾಪ..ಹೆಂಡತಿಯನ್ನ ಇನ್ನೂ ಪ್ರೀತಿಸಬೇಕಿತ್ತು.. ಅವಳೊಂದಿಗೆ ಹೆಚ್ಚು ಸಮಯ ಕಳೆಯಬೇಕಿತ್ತು
ಮಕ್ಕಳಿಗೆ..ಸಮಯ ಕೊಡಬೇಕಿತ್ತು ಮಿತ್ರನೊಂದಿಗೆ ..ಜಗಳ ಮಾಡಬಾರದಿತ್ತು.....
ಎಂಬ ಏನೇನೋ ಹಳೇ ನೆನಪು ಕಾಡುತ್ತವೆ.!?.
ಅಂತೂ ಇಷ್ಟಾದರೂ ಸಾಧಿಸಿದೆನಲ್ಲ...ಎಂಬ ನೆಮ್ಮದಿಯೂ ಇದೆ ..!!!
ಹಳೆಯ ಭಾವಚಿತ್ರಗಳ ನೋಡಿ , ನೋಡಿ, ನೋಡಿ.. ಈಗಲೂ … ಮನಸ್ಸು ತುಂಬಿ ಬ ರು ತ್ತ ದೆ .
ಈ ಸಮಯವೂ ಎಂಥ ವಿಚಿತ್ರ ನೋಡಿ!ಹೇಗೆ ಸವೆದು ಹೋಗುತ್ತದೆ !?!
ನಿನ್ನೆಯ ನ. ವ. ಯು. ವ. ಕ .ನನ್ನ ಮಿತ್ರ ಇಂದು ವೃದ್ಧನಂತೆ ಕಾಣುತ್ತಾನೆ.
ಒಂದೊಮ್ಮೆ (ಮರೀಚಿಕೆ) ಕನಸು ಕಾಣುತ್ತಿದ್ದವರು ಗತಿಸಿದ ದಿನಗಳಲ್ಲಿ ಕಳೆದು ಹೋಗಿದ್ದಾರೆ
(ಹೋಗುತ್ತಲೂ ಇದ್ದಾರೆ)..
ಆದರೆ ಇದು ಪರಮ ಸತ್ಯ ! ಸತ್ಯ.ಎಲ್ಲಾ ಮಿತ್ರರೂ ನೋಡ ನೋಡುತ್ತಲೇ ಹಣ್ಣಾಗುತ್ತಿದ್ದಾರೆ.! ಕೆಲವ್ರು ಹಣ್ ಹಣ್
ಕೂಡ ಆಗ್ತಾ ಇದ್ದಾರೆ..!!!
ಮಿತ್ರರೇ , ಮುಂದೆ ಸಮಯದ ಲಯ ಇನ್ನೂ ತೀವ್ರವಾಗಲಿದೆ. ! ?ಈಗ ಉಳಿದ ಬದುಕೇ ಒಂದು ದೊಡ್ಡ
' ಬ ಹು ಮಾ ನ ‘
ಆದ್ದರಿಂದ, ಮಾಡುವುದನ್ನು ಮಾಡಿ ಮುಗಿಸಿ ಕೊಡುವುದನ್ನು ಕೊಟ್ಟು ಮುಗಿಸಿ ಮನಸಿನ ಆಸೆಗಳನ್ನು
ಬಚ್ಚಿಟ್ಟು ಕೊರಗದಿರಿ ನಿರಾಳ ಮನಸ್ಸಿನಿಂದ ಬದುಕಿ.!!
ಪ್ರತಿಯೊಬ್ಬ ಹಳೆಯ ಮಿತ್ರನೂ ಒಂದು ಕೊ ಹಿ ನೂ ರ್ ವಜ್ರ!!!ಹಳೆಯ ಮಿತ್ರರೊಂದಿಗೆ
ಬದುಕಿನ ಕೊನೆಯ ತುಣುಕು ಸದಾ ಮೆಲುಕುತ್ತಾ ನಗು ನಗು ನಗುತ್ತ ಕಳೆಯಿರಿ.
ಎಲ್ಲಾ ಮಿತ್ರರಿಗೂ ಸಮರ್ಪಣೆ..
No comments:
Post a Comment