ಭಾನುವಾರ, ಆಗೋಸ್ಟ್ 4, 2024
ರವಿಂದ್ರ ಕಲಾಕ್ಷೇತ್ರ, ಬೆಂಗಳೂರು.
ಜತೆಗಿರುವನು ಚಂದಿರ - ಕನ್ನಡ ನಾಟಕ
ಅದೊಂದು ಎರಡೂವರೆ ಗಂಟೆ ಕಾಲದ ದೀರ್ಘವಾದ ಕನ್ನಡ ನಾಟಕ. ಸಂಕಲ್ಪ ಮೈಸೂರು ತಂಡ ಅರ್ಪಿಸಿದ , ಜಯಂತ್ ಕಾಯ್ಕಿಣಿ ರೂಪಾಂತರ ಮಾಡಿದ, ಹಾಗೂ ವಿನ್ಯಾಸ, ನಿರ್ದೇಶನ, ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಹುಲುಗಪ್ಪ ಕಟ್ಟಿಮನಿ ಅವರ ಹಾಸ್ಯ/ಗಂಭೀರ ನಾಟಕ.
ಭಾರತದ ವಿಭಜನೆಯ ಸಂದರ್ಭದಲ್ಲಿ, ಮುಸುಲ್ಮಾನ ಕುಟುಂಬದ ನೋವಿನ ಕಥೆ, ವ್ಯಥೆ, ನೋವು, ನಲಿವು.
ಬೇಕರಿ ವ್ಯಾಪಾರದ ಬಡೇ ಮಿಯಾ, ಕುಟುಂಬದ ಮುಖ್ಯಸ್ಥ, ಮಡದಿ, ಮೂರು ಹೆಣ್ಣು ಮಕ್ಕಳೊಡನೆ ಸಂಸಾರ,. ಊರಿನಲ್ಲಿ ಎಲ್ಲರೂ ಇಷ್ಟ ಪಡುವ ವ್ಯಕ್ತಿ, ಕುಟುಂಬ.
ಹಬ್ಬ ಹರಿದಿನಗಳಲ್ಲಿ ಊರಿನವರೊಡನೆ ಸಂಭ್ರಮ, ನೃತ್ಯ, ಹಾಡು ಇತ್ಯಾದಿ.
ನಾಟಕದಲ್ಲಿ ಎಲಾ ಕಲಾವಿದರ ಅಭಿನಯ , ವೇಷ ಭೂಷಣ, ಸಂಭಾಷಣೆ ಉತ್ತಮವಾಗಿತ್ತು.
ಕಥೆಯ ಕೆಲವು ಭಾಗದಲ್ಲಿ ನಾಟಕವು ನೀರಸವಾಗಿ ಬೇಸರ ತರಿಸುವಂತಿತ್ತು.
ಸಂಗೀತ, ಹಾಡುಗಳು ತಾಳಕ್ಕೆ ಸರಿಯಾಗಿ ನೃತ್ಯ, ರಂಗ ಸಂಜ್ಜಿಕೆ ಎಲ್ಲವೂ ಚೆನ್ನಾಗಿತ್ತು.
ನಾಟಕ ತಂಡದವರಿಗೆ ಅಭಿನಂದನೆಗಳು.
Posted 5/8/2024
No comments:
Post a Comment