ಭಾನುವಾರ, 20 ಏಪ್ರಿಲ್ 2025
ತರಳಬಾಳು ಕೇಂದ್ರ ಸಭಾಂಗಣ. ಅರ್. ಟಿ. ನಗರ, ಬೆಂಗಳೂರು.
"ಶಿವದೂತ ಗುಳಿಗ" - ಕನ್ನಡ ನಾಟಕ
ಕಲಾವಿದರು.
ಶಿವದೂತ ಗುಳಿಗ -ಅದೊಂದು ಸುಮಾರು ೨ ಗಂಟೆಗಳ ಕಾಲ ಕಿವಿ ಚುಚ್ಚುವ ಶಬ್ದ ದೊಂದಿಗೆ ಚೀರಾಟ, ಹಾರಾಟ, ಕೂಗಾಟ ದೊಂದಿಗೆ ಅಬ್ಬರಿಸಿದ ಕನ್ನಡ ನಾಟಕ.
![]() |
| ಕಲಾವಿದರು |
ಕಲಾ ಸಂಗಮದ ಎಲಾ ಸದಸ್ಯರ ಅಭಿನಯ, ಹಾವ ಭಾವ, ನೃತ್ಯ, ಸಂಭಾಷಣೆ ಎಲ್ಲವೂ ಅದ್ಭುತ.
ರಣಗ ಸಜ್ಜಿಕೆ,ಅದ್ದೂರಿಯ ದೃಶ್ಯ ಸಂಯೋಜನೆ, ಪಾತ್ರಗಳ ರಂಗ ಪ್ರವೇಶ, ಸಂಗೀತ, ಬೆಳಕು ಎಲ್ಲವೂ ಉತ್ತಮವಾದ ನಿರ್ವಹಣೆ. ಮೂರು ಕಲಾವಿದರು ಗುಳಿಗನ ಪಾತ್ರವನ್ನು ಅತ್ಯುತ್ತಮ ವಾಗಿ ನಿರ್ವಹಿಸಿ ಸಭಿಕರ ಮೆಚ್ಚುಗೆಯನ್ನು ಪಡೆದಿದ್ದಾರೆ.
ಅದೊಂದು ಮುಖ್ಯವಾಗಿ ಕರಾವಳಿ ಭಾಗದ ಜನರ ದೈವಾರದನೆಯ ಕಥೆ. ಕೈಲಾಸದಲ್ಲಿ ಶಿವನ ಭಸ್ಮ ಮತ್ತು ಬೆವರಿನ ಗುಳಿಗೆಯಿಂದ ಹುಟ್ಟಿದವನೇ "ಗುಳಿಗ", ಅತ್ಯಂತ ಬಲಶಾಲಿ, ಹಸಿವು, ಬಾಯಾರಿಕೆಯಿಂದ ಅಬ್ಬರಿಸುತ್ತಾನೆ.
ನಂತರ ಶಿವನು ಅವನನ್ನು ವಿಷ್ಣುವಿನ ವೈಕುಂಟ ಕ್ಕೆ ಹಸಿವಿನ ಕಳುಹಿಸುತ್ತಾನೆ. , ವಿಷ್ಣುವು ಗುಳಿಗ ಶಪಿಸಿ ಭೂಮಿಯಲ್ಲಿ ರಾಕ್ಷಸಿ "ನೆಲವುಲ್ಲ ಸಂಖೆ"ಯ ಉದರದಲ್ಲಿ ಜನಿಸಿ ಅವಳನ್ನೇ ತಿಂದು ಬಿಡುತ್ತಾನೆ.
ಹಾಗೆಯೇ ಕಥೆ ಮುಂದುವರಿದು ಗುಳಿಗ , ಬ್ರಾಹ್ಮಣ ಊರು, ಚಾಮುಂಡಿ, ಬಬ್ಬುರಾಯ ಬ್ರಹ್ಮ ರಾಕ್ಷಸನ್ನು ಕೊಂದು ವಿವಿಧ ಸ್ಥಳಗಳಿಗೆ ಹೋಗಿ ಸ್ಥಾಪನೆಯಾಗಿ ಒಳ್ಳೆಯವರಿಗೆ ಒಳ್ಳೆಯವನು, ದುಷ್ಟರಿಗೆ ಕೆಟ್ಟವನಾಗಿ ಮುಂದುವರಿಯುತ್ತಾನೆ.
ಎಲ್ಲ ಸನ್ನಿವೇಶಗಳ ರಂಗ ಸಜ್ಜಿಕೆ ಸೂಪರ್ (ಅದ್ಭುತ)
ತುಂಬಿದ ಸಭಾಂಗಣ ದಲ್ಲಿ ಸಭಿಕರು ಮಂತ್ರ ಮುಗ್ಧರಾಗಿ ಕುಳಿತಿರುವುದು ನಾಟಕದ ವಿಶೇಷ.
ನಾಟಕದ ಚಿತ್ರೀಕರಣ ಮಾಡುವುದು ನಿಷೇಧಿಸಿದ್ದರಿಂದ ವೀಡಿಯೋ ತೆಗೆಯಲಾಗಲಿಲ್ಲ.
ಹೊಸ ಪೀಳಿಗೆಯ ಜನಾಂಗಕ್ಕೆ ಒಳ್ಳೆಯ ಸಂಸ್ಕಾರ, ಪರಂಪರೆಯನ್ನು ತಿಳಿಸಿಕೊಡುವ ನಾಟಕ.
ಕಲಾ ಸಂಗಮ ತಂಡದ ಎಲ್ಲ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು.
Posted 22/4/2025





-01.jpeg)


No comments:
Post a Comment