Tuesday, April 8, 2025

SHOBHA AT CHANDANA SHUBHODAYA PROGRAM

 Tuesday, 8th April 2025

CHANDANA TV Channel, Bengaluru.



It was pleasure to watch Our Shobha Madam of Hongirana School of Excellence, Amatekoppa, Sagara, at the Chandana DooraDarshana, at Shubhodaya Program

Interview - Part 1

Shobha has narrated beautifully about her childhood days , Parents, Familly and her interest when she was growing, her father Padmanabha Somayaji/s support and continuing her education etc, etc....

Interview Part 2

Continuing further, Shobha explained her personal life, her marriage with K G Ravindra, and her husband family support, and her experience at Navodaya School for 15 years, which made her start HONGIRANA SCHOOL.

Interview Part 3

Further, she said about her School, Hongirana School of Excellence at Amatekoppa, Sagara, on 12 acres of Land, difficulties she has to face , support from from people, and how it is different from other schools.


Well done Shobha, and Congratulations, that was an exccelent presentaion and the Interviewer Dhananjay.


Shobha's wrting in Facebook, about her tension, before the program:

ದೂರದರ್ಶನ ಚಂದನವಾಹಿನಿಯಲ್ಲಿ ಏಪ್ರಿಲ್ 8ರಂದು ಒಂದು ಗಂಟೆಯ ಅವಧಿಯ ನನ್ನ ಲೈವ್ ಸಂದರ್ಶನ ಪ್ರಸಾರವಾಯಿತು. ಇದಕ್ಕೆ ಹತ್ತು ದಿನಗಳ ಹಿಂದೆ ನನ್ನ ಆತ್ಮೀಯರೂ ಹಾಗೂ ಹಿತೈಷಿಗಳೂ ಆದ ಸಂಗೀತ ಕಲಾವಿದೆ ಹಾಗೂ ಯೋಗತಜ್ಞರಾದ ಶಿವಮೊಗ್ಗದ ಶ್ರೀಮತಿ ಶಾಂತಾ ಶೆಟ್ಟಿಯವರ ಮೂಲಕ ವಿಷಯ ನನಗೆ ತಿಳಿಯಲ್ಪಟ್ಟಿತು. ವಿಷಯ ತಿಳಿದು ಖುಷಿಯಾಗುವುದಕ್ಕಿಂತ ಹೆಚ್ಚು ತಲೆಬಿಸಿ ಆಯಿತು. ನಾನು ಬಹಳ ಕ್ಯಾಮೆರಾ ಕಾನ್ಶಿಯಸ್ ಆಗಿರುವವಳು ಹಾಗೂ ನನ್ನ ಬಗ್ಗೆ ಹಾಗೂ ನಾನು ಮಾಡಿದ್ದರ ಬಗ್ಗೆ ನಾನೇ ಮಾತನಾಡುವುದು ಎಷ್ಟು ಸೂಕ್ತ ಎನ್ನುವ ಜಿಜ್ಞಾಸೆ ನನ್ನೊಳಗೆ ಇಟ್ಟುಕೊಂಡವಳು! ಯಾವಾಗಲೂ ನಾವು ಮಾಡಿದ ಕೆಲಸ ನಮ್ಮ ಬಗ್ಗೆ ತಿಳಿಸಬೇಕೇ ವಿನಃ ನಾವೇ ಹೇಳಿಕೊಳ್ಳುವುದು ಒಂದು ರೀತಿಯ ‘ಸ್ವಪ್ರೇಮದ’ ಕುರುಹು ಎನ್ನುವುದು ನನ್ನ ನಿಲುವು. ಆದರೆ ಶಾಂತಾ ಶೆಟ್ಟಿಯವರು ಸುಮ್ಮನೆ ಇರುವವರಲ್ಲ. ಅಂತೂ ಇಂತೂ ನನ್ನ ಮನವೊಲಿಸುವುದರಲ್ಲಿ ಯಶಸ್ವಿಯಾದರು. ನಮ್ಮ ಸಂಸ್ಥೆಯ ಸೆಕ್ಷನ್ ಹೆಡ್ಸ್, ನನ್ನ ಮಕ್ಕಳು ಎಲ್ಲಾ ‘ನಾನು ಇದಕ್ಕೆ ಒಪ್ಪಿಕೊಳ್ಳಲೇಬೇಕು’ ಎಂಬ ಒತ್ತಡ ತಂದರು ಹಾಗೂ ಒತ್ತಾಸೆ ಕೊಟ್ಟರು. ದೂರದರ್ಶನದವರು ಕರೆ ಮಾಡಿ ನನ್ನ ಪರಿಚಯದ ಮಾಹಿತಿ ಕಳಿಸಲು ಹೇಳಿದಾಗ ಅದನ್ನು ಕಳಿಸಿಕೊಟ್ಟೆ. ಇಷ್ಟೆಲ್ಲಾ ಆದ ಮೇಲೆ ಶುರುವಾಯಿತು ನೋಡಿ ನನ್ನ ಹೊಟ್ಟೆಯೊಳಗೆ ತಳಮಳ! ಏನು ಮಾತನಾಡುವುದು? ಹೇಗೆ ಮಾತನಾಡುವುದು? ಮಾತನಾಡುವ ವಿಷಯಗಳು ಕಲಸುಮೇಲೋಗರವಾದರೆ ಏನು ಗತಿ? ಒಂದು ರೀತಿಯಲ್ಲಿ ಎಲ್ಲಾ ತರಹದ ಪ್ರಶ್ನೆಗಳು ಜೇನು ಹುಳುಗಳಂತೆ ಗುಂಯ್ ಗುಡುತ್ತಾ ಅನವರತ ನನ್ನನ್ನು ಮುತ್ತಿ ಕಾಡುತ್ತಿದ್ದವು. ‘ನಾನು ಏಕಾದರೂ ಒಪ್ಪಿಕೊಂಡೆ’ ಎಂದು ನನ್ನನ್ನು ನಾನೇ ಹಳಿಯುತ್ತಿದ್ದೆ. ಆದರೆ ಸಮಯ ನಿಲ್ಲುತ್ತದೆಯೆ? ರೋಹಿತ್, ಸಾದಿಕ್ ಮತ್ತು ನನ್ನ ಮಗಳು ವಿಭಾ ಒಂದಿಷ್ಟು ಫೋಟೊಗಳನ್ನು ಒಟ್ಟು ಮಾಡಿ ಪೆನ್ ಡ್ರೈವ್ ಗೆ ಹಾಕಿ ಕೊಟ್ಟರು. ಆಂಕರಿಂಗ್ ಮಾಡುವ ಧನಂಜಯ ಅವರು ತಾನೇನು ಪ್ರಶ್ನೆಗಳನ್ನು ಕೇಳುತ್ತೇನೆ ಎಂದು ಫೋನಿನಲ್ಲಿ ತಿಳಿಸಿದರು.
ನನ್ನ ಮಗ ವಿಜೇತ ಏಪ್ರಿಲ್ ಏಳರ ಬೆಳ್ಳಂಬೆಳಗಿನ ರೈಲಿಗೆ ಟಿಕೆಟ್ ಬುಕ್ ಮಾಡಿದ್ದ. ವಿಭಾ ಆ ದಿನ ನನ್ನನ್ನು ರೈಲ್ವೆ ನಿಲ್ದಾಣದಲ್ಲಿ ಇಳಿಸಿ ಹೋದಳು. ಆ ಆರು ಗಂಟೆಯ ಪ್ರಯಾಣವಿಡೀ ನಾನು ಹೆಚ್ಚು ಕಮ್ಮಿ ಕಣ್ಣು ಮುಚ್ಚಿಕೊಂಡೇ ಕುಳಿತಿದ್ದೆ. ಪಕ್ಕದಲ್ಲಿದ್ದ ಪುಟಾಣಿ ಪಾಪುವನ್ನು ಕೆಲವು ಕಾಲ ಆಟವಾಡಿಸಿದರೂ ಮನಸ್ಸೆಲ್ಲಾ ‘ನಾಳೆ ನಾನು ಹೇಗೆ ಮಾತನಾಡುತ್ತೇನೆ’ ಎಂಬ ಯೋಚನೆಯಲ್ಲೇ ಮುಳುಗಿತ್ತು. ನನ್ನ ಅತ್ತಿಗೆ ಅಭಿಲಾಷಳಿಗೆ ಫೋನಿಸಿದಾಗ ಅವಳೊಂದಿಷ್ಟು ಮಾರ್ಗದರ್ಶನ ಕೊಟ್ಟಳು ಹಾಗೂ ನಾನು ಮಾತನಾಡಬೇಕೆಂದಿರುವ ವಿಷಯವನ್ನು ಪಾಯಿಂಟ್ ಪಾಯಿಂಟ್ ಆಗಿ ಬರೆಯಲು ತಿಳಿಸಿದಳು. ಯಶವಂತಪುರ ನಿಲ್ದಾಣದಲ್ಲಿ ನನ್ನನ್ನು ಕರೆದೊಯ್ಯಲು ನನ್ನ ತಂಗಿ ಶೈಲಾ ಬಂದಿದ್ದಳು. ಸ್ವಲ್ಪ uneasiness ಇದ್ದ ಕಾರಣ ಅವಳ ಮನೆಗೆ ಹೋಗಿ ಉಂಡವಳು ಒಂದು ಮಾತ್ರೆ ತಗೊಂಡು ಒಂದು ಗಂಟೆಯ ಕಾಲ ಮಲಗಿಬಿಟ್ಟೆ. ನಂತರದಲ್ಲಿ ಎದ್ದವಳು ತಂಗಿ ಕೊಟ್ಟ ಟೀ ಕುಡಿದು ಒಂದೆರಡು ಗಂಟೆಗಳ ಕಾಲ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ನಾನು ಮಾತನಾಡಬೇಕಾಗಿರುವ ವಿಷಯಗಳನ್ನೆಲ್ಲ ಬರೆದೆ. ಮನಸ್ಸು ಸ್ವಲ್ಪ ನಿರಾಳವಾಯಿತು. ನಾನು ಸಮರ್ಪಕವಾಗಿ ಮಾತನಾಡಬಲ್ಲೆ ಎನ್ನುವ ವಿಶ್ವಾಸ ಮೂಡಿತು. ರಾತ್ರಿ ಮಗ ಅಲ್ಲಿಗೆ ಬಂದಾಗ ದೂರದರ್ಶನಕ್ಕೆ ಒದಗಿಸಬೇಕಾದ ಫೋಟೊಗಳನ್ನು ಪುನಃ ನೀಟಾಗಿ ಫೋಲ್ಡರ್ ವೈಸ್ ಜೋಡಿಸಿದ.
ಬೆಳಿಗ್ಗೆ ಅವರು ಹೇಳಿದ ಸಮಯಕ್ಕೆ ಮುಂಚಿತವಾಗಿಯೇ ದೂರದರ್ಶನ ಕೇಂದ್ರಕ್ಕೆ ಹೋಗಿ ಮೇಕಪ್ ಮಾಡಿಸಿಕೊಂಡು 7.50ರ ಹೊತ್ತಿಗೆ ಸ್ಟುಡಿಯೋದ ಒಳಗೆ ಕುಳಿತಾಗ ಯಾವುದೇ ಒತ್ತಡವಿಲ್ಲದೆ ನಿರಾಳತೆಯಿಂದ ಇದ್ದೆ. ಕಾರ್ಯಕ್ರಮ ಶುರುವಾಗುವ ಮೊದಲಿನ ಹತ್ತು ನಿಮಿಷಗಳಲ್ಲಿ ಧನಂಜಯರವರು ತಮ್ಮ ಮೃದು ಮಾತುಗಳಿಂದ ನನಗೆ ಬಹಳ ಚೆನ್ನಾಗಿ ಮಾರ್ಗದರ್ಶನ ನೀಡಿದರು. ಒಮ್ಮೆ ಸಂದರ್ಶನ ಶುರುವಾದ ತಕ್ಷಣ ಅವರ ಪ್ರಶ್ನೆಗಳಿಗೆ ನನ್ನೊಳಗಿನಿಂದ ವಿಚಾರಗಳು ಸರಾಗವಾಗಿ, ಸಹಜವಾಗಿ ಹರಿದು ಬಂದವು. ಮಾತನಾಡುವಾಗ ನಾನೊಂದು ಬೇರೆಯದೇ ಆದ ಭಾವವಲಯದೊಳಗೆ ಹೊಕ್ಕಿ ಹೋಗಿದ್ದೆ. ಧನಂಜಯ ಅವರು ಕೂಡ ಬಹಳ ಸಹಜವಾಗಿ, ಆಪ್ತವಾಗಿ, ಸೂಕ್ತವಾಗಿ ಪ್ರಶ್ನೆಗಳನ್ನು ಕೇಳುತ್ತಾ ನನ್ನನ್ನು ಟ್ರ್ಯಾಕ್ ತಪ್ಪದಂತೆ ಮುನ್ನಡೆಸಿದರು. ಸಂದರ್ಶನ ಮುಗಿದು ಹೊರ ಬಂದಾಗ ಎಲ್ಲರ ಮೆಚ್ಚುಗೆಯ ಮಾತುಗಳನ್ನು ಕೇಳಿ ಸಂಭ್ರಮಿಸಿದೆ.


Posted 9/4/2025





No comments:

Post a Comment