Thursday, September 3, 2026
ಶೋಭಾ
ಇವತ್ತು ನನಗೆ ಅರವತ್ತು ತುಂಬಿತು. ನನ್ನ ಪ್ರಾಂಶುಪಾಲ ಪದವಿಯಿಂದ ನಿವೃತ್ತಿ ಕೂಡಾ ತಗೊಳ್ಳುತ್ತಿರುವ ಕಾರಣ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆಲ್ಲರಿಗೂ ನಾನೇ ಒಳ್ಳೆಯ ಊಟ ಹಾಕಿಸಬೇಕೆನ್ನುವ ಯೋಚನೆ ಬಂದಾಗ ನಮ್ಮ ಟ್ರಸ್ಟಿಗಳು ಸಂಸ್ಥೆಯ ವತಿಯಿಂದ ಊಟ ಹಾಕಿಸುವುದಾಗಿ ತೀರ್ಮಾನಿಸಿ ಇವತ್ತು ನೀಚಡಿ ಪ್ರಕಾಶ ಭಟ್ಟರ ಕೈಚಳಕದ ರುಚಿಕರ ಊಟದ ವ್ಯವಸ್ಥೆ ಮಾಡಲಾಯಿತು. ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ನಾನು ಅಸೆಂಬ್ಲಿಗೆ ಬರಬೇಕೆಂದು ಒತ್ತಾಯ ಬಂದರೂ ನಿರಾಸಕ್ತಿ ತೋರಿಸಿ ಅಸೆಂಬ್ಲಿಗೆ ಹೋಗಲಿಲ್ಲ. ನಂತರದಲ್ಲಿ ನನ್ನ ಯೂಶುವಲ್ ಟೈಮ್ ನಲ್ಲಿ ಶಾಲೆಯ ಕಡೆಗೆ ಹೋದೆ. ಅಲ್ಲಿ ನನಗಾಗಿ ಅನೇಕ ಅಚ್ಚರಿಗಳು ಒಂದರ ಮೇಲೊಂದರಂತೆ ಕಾಯುತ್ತಿದ್ದವು. ಸೆಕ್ಷನ್ ವೈಸ್ ಟೀಚರ್ಸ್ ಬಂದು ನನಗೆ ವಿಶ್ ಮಾಡಿ, ಗಿಫ್ಟ್ ಕೊಟ್ಟರು. ಕ್ಲಾಸ್ ವೈಸ್ ಮಕ್ಕಳ ರೆಪ್ರೆಸೆಂಟೆಟಿವ್ ಗಳು ಬಂದು ಅವರೇ ಕೈಯ್ಯಾರೆ ಮಾಡಿದ, ಅವರ ಭಾವನಾತ್ಮಕ ಬರಹಗಳಿಂದ ತುಂಬಿದ ಬಣ್ಣ ಬಣ್ಣದ ಗ್ರೀಟಿಂಗ್ಸ್ ಗಳನ್ನು ಕೊಟ್ಟರು. ಆ ಪುಟ್ಟ ಪುಟ್ಟ ಬರಹಗಳನ್ನು ಹಾಗೂ ಸಾಲುಗಳನ್ನು ಓದಿದಾಗ “ಮಕ್ಕಳು ನಮ್ಮನ್ನು ಇಷ್ಟೆಲ್ಲಾ ಗಮನಿಸಿ ಅಸೆಸ್ ಮಾಡ್ತಾರಾ” ಅಂತ ಆಶ್ಚರ್ಯ ಆಯಿತು. ಮನತಟ್ಟುವ ಪ್ರಾಮಾಣಿಕ ಸಾಲುಗಳು ಅವರದಾಗಿದ್ದವು. ಅವರ ಮುಗ್ಧ ಭಾವನೆಗಳು ನನ್ನ ಮನಸ್ಸನ್ನು ಬಹಳ ತಟ್ಟಿದವು. ನಾನು ಬಹಳ ಭಾವಪರವಶಳಾದೆ. ಇಂಗ್ಲಿಷ್ ನಲ್ಲಿ ಹೇಳ್ತಾರಲ್ವಾ overwhelming ಅಂತ ಹಾಗೆ! ನಾನು ಇವು ಯಾವನ್ನೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಎಲ್ಲರೂ ತೋರಿಸಿದ ನಿಷ್ಕಪಟ ಪ್ರೀತಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೆಂದೆನಿಸಿತು.
Posted 4/9/2026







No comments:
Post a Comment