Tuesday, October 30, 2012

ಮನೆಯಂಗಳದಲ್ಲಿ ಸಾಹಿತ್ಯ

27TH OCTOBER 2012
BIRTHI, SALEKERI


ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಹೋಬಳಿ ಘಟಕದ "ಮನೆಯಂಗಳದಲ್ಲಿ ಸಾಹಿತ್ಯ" ಕಾರ್ಯಕ್ರಮವೊಂದು ಸಾಲಿಕೇರಿ ಬಿರ್ತಿ ಮನೆಯ ಅಂಗಳದಲ್ಲಿ ಶನಿವಾರ ತಾ. ೨೭, ಅಕ್ಟೋಬರ್ ೨೦೧೨ ರಂದು ಸಂಜೆ ೪.೩೦ ಗಂಟೆಗೆ ನಡೆಯಿತು.
ಘಟಕದ ಕಾರ್ಯದರ್ಶಿ ಶ್ರೀಮತಿ ಅಭಿಲಾಷಾ.ಎಸ್.  ನೆರೆದಿದ್ದ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿ, ಅನೌಪಚಾರಿಕವಾದ ಸಾಹಿತ್ಯ ಸಂವಾದವು ಪ್ರಥಮ ಪ್ರಯತ್ನವೆಂದೂ, ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.


ಘಟಕದ ಅಧ್ಯಕ್ಷ ಶ್ರೀ. ಸುರೆಂದ್ರ ಅಡಿಗ ಅವರು ಮಾತನಾಡುತ್ತ ಕನ್ನಡ ಸಾಹಿತ್ಯವನ್ನು ಮನೆಗೆ ಮನೆಗೆ ತಲುಪಿಸಿ ಕನ್ನಡದ ಸೇವೆಯನ್ನು ಮಾಡುವ ಈ ಪ್ರಯತ್ನಕ್ಕೆ ಎಲ್ಲರು ಸಕ್ರಿಯವಾಗಿ ಪ್ರೋತ್ಸಾಹಿಸಬೇಕು ಎಂದು ಬಿನ್ನವಿಸಿದರು.
ಬಹುಮುಖ ಪ್ರತಿಭೆಯ ಕಲಾವಿದ ಸುಜಯೀಂದ್ರ ಹಂದೆಯವರು ಕನ್ನಡದ ಸಾಹಿತ್ಯ ಬೆಳವಣಿಗೆಯನ್ನು ಪ್ರಾರಂಭಿಸುತ್ತಾ ಕವಿಗಳಾದ ಪಂಪ, ರನ್ನ, ಜನ್ನರ ಕೊಡುಗೆಗಳನ್ನು ವಿವರಿಸಿದರು.

ಗಾಯಕ ಚಂದ್ರಶೇಖರ ಕೆದಿಲಾಯ ಅವರು ಕೆಲವೊಂದು ಕವನಗಳನ್ನು ತಮ್ಮ ಸುಮಧುರ ಕಂಠದಿಂದ ಹಾಡಿ ಮನರಂಜಿಸಿದರು. ಹಾಗೇ ಮುಂದುವರಿಯುತ್ತಾ ಹರಿಹರ, ರಾಘವಾಂಕ, ಗದುಗಿನ ನಾರಣಪ್ಪ, ವಚನ ಸಾಹಿತಿ ಬಸವಣ್ಣ, ಸರ್ವಜ್ನ, ಅವರ ಕೊಡುಗೆಗಳನ್ನು ರಸವತ್ತಾಗಿ ಭಟ್ಟಿ ಇಳಿಸಿದರು. ಕೆದಿಲಾಯರು ಇನ್ನೂ ಹಲವಾರು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮತ್ತೂ ಮುಂದುವರಿಸಿ ಇತ್ತೀಚಿನ ಕವಿಗಳಾದ ಸಂತ ಶಿಶುನಾಳ ಶರೀಫ಼, ದಾಸ ಸಾಹಿತ್ಯವನ್ನು ಶ್ರೀಮಂತಿಸಿದ ಪುರಂದರದಾಸ, ಕನಕದಾಸರ ಕವನಗಳನ್ನು ಹಾಡಿ ಸ್ಮರಿಸಿದರು. ಶ್ರೀಯುತ ಶ್ರೀಧರ ಹಂದೆ, ಶಮಾ ಸೋಮಯಾಜಿ, ಕಾವ್ಯ ಹಂದೆ ಹಾಗೂ ಮತ್ತಿತರು ಕವನಗಳನ್ನು ಹಾಡಿ ಮನರಂಜಿಸಿದರು.
ಇತರ ಇತ್ತೀಚಿನ ಕವಿಗಳಾದ ಡಿ.ವಿ.ಜಿ., ನಿಸಾರ ಅಹಮದ್, ಬೇಂದ್ರೆ, ಗೊಪಾಲಕೃಷ್ಣ ಅಡಿಗ, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ಕುವೆಂಪು, ಶಿವರಾಮ ಕಾರಂತರ ಕೊಡುಗೆಗಳನ್ನು ನೆನಪಿಸಿದರು.

ಹಲವಾರು ಸಾಹಿತ್ಯಾಭಿಮಾನಿಗಳು.... ಉಪೇಂದ್ರ ಸೋಮಯಾಜಿ, ರಾಘವೇಂದ್ರ ಭಟ್, ಶ್ರೀಧರ ಹಂದೆ, ಗಿಲ್ಬರ್ಟ್, ಡಿಸಿಲ್ವ, ಆರೂರು ಮಂಜುನಾಥ ರಾವ್, ಜಯರಾಮ ಸೋಮಯಾಜಿ, ನಳಿನಿ ಸೋಮಯಾಜಿ, ಎನ್. ಶಂಕರನಾರಾಯಣ ಅಡಿಗ, ಹಾಗೂ ಇನ್ನೂ ಹಲವಾರು ಗಣ್ಯರು ಭಾಗವಹಿಸಿದ್ದರು.
ಮೊದಲಿಗೆ, ಶಮಾ ಸೋಮಯಾಜಿ ಹಾಡಿದ "ಹಣತೆ ಹಚ್ಚುವೆನು ನಾನು" ಎಂಬ ಗೀತೆಯೊಂದಿಗೆ ಗಣ್ಯರು ದೀಪವನ್ನು ಹಚ್ಚಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ಕೊನೆಯಲ್ಲಿ ಅಭಿಲಾಷ ಅವರಿಂದ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರ‍ಮ ಸುಮಾರು ೮ ಗಂಟೆಗೆ ಮುಕ್ತಾಯಗೊಂಡಿತು.
ನೆರೆದಿದ್ದ ಸಭಿಕರು ಸಾಹಿತ್ಯದ ರಸಾಸ್ವಾದವನ್ನು ಅನುಭವಿಸಿ ಲಘು ಉಪಹಾರವನ್ನು ಸೇವಿಸಿ ನಿರ್ಗಮಿಸಿದರು.

No comments:

Post a Comment