Wednesday, October 31, 2012

ಕನ್ನಡ ರಾಜ್ಯೋತ್ಸವ ೨೦೧೨


ಕನ್ನಡ ಸಾಹಿತ್ಯ ಪರಿಷತ್ತಿನ ಬ್ಯಾಟರಾಯಪುರ ಘಟಕವು ನವಂಬರ್ ಒಂದರ ಬೆಳಿಗ್ಗೆ ಕಾಫಿ ಬೋರ್ಡ್ ಬಡಾವಣೆಯ ಉದ್ಯಾನವನದ ಕನ್ನಡ ಕಟ್ಟೆಯ ಕಛೇರಿಯಲ್ಲಿ ನೆರವೇರಿಸಿತು. ಕಟ್ಟೆಯ ಹೊರಗೆ ಜಿಟಿ ಜಿಟಿ ಮಳೆಯೊಂದಿಗೆ ಎತ್ತರದ ದ್ವಜ ಸ್ತಂಭದಲ್ಲಿ ಕನ್ನಡದ ಬಾವುಟವನ್ನು ಹಾರಿಸಿದ ನಂತರ ಕಟ್ಟೆಯ ಕಛೇರಿಯಲ್ಲಿ ಸಭೆ ನಡೆಯಿತು. ಘಟಕದ ಅಧ್ಯಕ್ಷ ಶ್ರೀ ರೇಣುಕ ಹೆಗಡೆಯವರು ಸ್ವಾಗತಿಸದ ನಂತರ ರ‍ಾಜ್ಯೋತ್ಸವದ ಬಗ್ಗೆ ಪುಟ್ಟ ಸ್ವಾಮಿಯವರು, ಚ. ರಮೇಶ್ ಅವರು ಶಾಲಾ ಕಾಲೇಜುಗಳಲ್ಲಿ ಕನ್ನಡದ ಬಗ್ಗೆ ತಿರಸ್ಕಾರ, ಸಾರ್ವಜನಿಕರು ಇತರ ರಾಜ್ಯದ ಭಾಷೆಯನ್ನು ಉಪಯೋಗಿಸುವುದರ ಬಗ್ಗೆ ಮಾತನಾಡಿದರು.

ಅಧ್ಯಕ್ಷರು ತಾ. ೨೪ರಂದು ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆಯೂ, ಘಟಕದ ಸಾಹಿತ್ಯ ಪರಿಷತ್ತಿನ ಸಮಿತಿ ಸದಸ್ಯರ ಹೆಸರುಗಳನ್ನು ತಿಳಿಸಿದರು.
ಕಾಫಿ, ಬಿಸ್ಕತ್ ನೊಂದಿಗೆ ಕಾರ್ಯಕ್ರಮ ಮುಗಿಯಿತು.

No comments:

Post a Comment