ಶನಿವಾರ, ಏಪ್ರಿಲ್ 3, 2021
ಸಂಸ ಬಯಲು ರಂಗಮಂದಿರ, ಬೆಂಗಳೂರು.
ಅದು ಶಿವಸಂಚಾರ ನಾಟಕೋತ್ಸವದ ಎರಡನೇ ದಿನದ ನಾಟಕ- "ಜೀವ ಇದ್ದರೆ ಜೀವನ"
ಕನ್ನಡ ಪ್ರಾದಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ಸಮಾರೋಪ ಭಾಷಣದ ನಂತರ ನಾಟಕ ಪ್ರಾರಂಭವಾಯಿತು.
ಕೊರೋನ ವೈರಸ್ ಹಾಗೂ ಕೊವಿಡ್ 19 ಖಾಯಿಲೆಯ ಜನಜಾಗೃತಿ ಮಾಡಲು ನಾಟಕವು ಯಶಸ್ವಿಯಾಗಿದೆ.
ಹಳ್ಳಿಯ ವಾತಾವರಣ, ವೈರಸ್ ಬಗ್ಗೆ ಜನರ ತಿರಸ್ಕಾರ, ಅವರು ಪಾಲಿಸಬೇಕಾದ ನಿಯಮಗಳು, ಲಕ್ಷಾಂತರ ಜನರ ಸಾವಿಗೀಡಾದ ಇ ರೋಗ, ಹೇಗೆ ಅದನ್ನು ಸಮರ್ಥವಾಗಿ ಎದುರಿಸಬಹುದು ಎಂಬುದನ್ನು ಕ್ರಿಯಾತ್ಮಕವಾಗಿ ರಂಗದಲ್ಲಿ ತೊಡಗಿಸಿರುವುದು ಅಭಿನಂದನಾರ್ಹ.
ಸಂಭಾಷಣೆ, ಅಭಿನಯ, ಸಂಗೀತ ಎಲ್ಲವೂ ಚೆನ್ನಾಗಿದ್ದು, ಮಳೆಯ ಕಾರಣದಿಂದಾಗಿ, ಅದೂ ಬಯಲು ರಂಗ ವೇದಿಕೆ ಆದ್ದರಿಂದ ನಾವು ಅರ್ಧದಲ್ಲೇ ಬಿಟ್ಟು ಬರುವಂತಾಯಿತು.
ನಾಟಕ ಬರೆದ, ಅಭಿನಯಿಸಿದ ಎಲ್ಲಾ ಕಲಾವಿದರಿಗೆ ಅಭಿನಂದನೆಗಳು.
ಬರೆದಿರುವುದು ಏಪ್ರಿಲ್. 04, 2021
No comments:
Post a Comment