Saturday, January 4, 2025

ಮಾಗಧ - ಐತಿಹಾಸಿಕ ಕಾದಂಬರಿ

 ಶನಿವಾರ, ಜನವರಿ 4, 2025

ಮಾಗಧ- ಕಾದಂಬರಿ 



ಶ್ರೀಮತಿ ಸಹನಾ ವಿಜಯಕುಮಾರ್ ಅವರ  ಅಶೋಕ ಚಕ್ರವರ್ತಿಯ ಐತಿಹಾಸಿಕ ಕಾದಂಬರಿ "ಮಾಗಧ " ವನ್ನು ಓದಿದ್ದಾಯಿತು. ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿತ್ತು.

770 ಪುಟಗಳ ಬೃಹತ್ ಕಾದಂಬರಿಯು  ಮಗಧ ಸಮ್ರಾಜ್ಯದ "ದೇವಾನಂ ಪ್ರಿಯದರ್ಶಿ ರಾಜ ಅಶೋಕನ" 
ಅದ್ಭುತವಾದ ಕಥೆಯು ರೋಚಕವಾಗಿತ್ತು.
ರೂ 915 ಗಳ ಪುಸ್ತಕವನ್ನು ಪುಸ್ತಕ ಸಂತೆಯಲ್ಲಿ ಖರೀದಿಸಿ, ಸಹನಾ ವಿಜಯಕುಮಾರ್ ಅವರನ್ನು ಭೇಟಿಯಾಗಿ ಕೆಲಹೊತ್ತು ಸಂವಾದ ವನ್ನೂ ಮಾಡಿದೆವು.
https://jsomayaji.blogspot.com/2024/11/blog-post_17.html

ದಂತಪುರದ ಬುದ್ಧ ಬಿಕ್ಕುಗಳ ಕಥೆಯು ತುಂಬಾ ವಿವರವಾಗಿದ್ದು ಸ್ವಲ್ಪ ನೀರಸವಾಗಿತ್ತು.
ಕೊನೆಯಲ್ಲಿ ಮಗಧದ ರಾಜ ಅಶೋಕ ಹಾಗೂ ಕಳಿಂಗದ ರಾಜ ಗುಣಕೀರ್ತಿ ಯೊಡನೆ ಸಂವಾದದ ವಿವರಣೆ ನಮ್ಮನ್ನು ಆವರಿಸಿ ಕೊಳ್ಳುತಿತ್ತು .

ಶತಾವಧಾನಿ  ಡಾ. ಗಣೇಶ್ ಅವರು ತಮ್ಮ ಬೆನ್ನುಡಿಯಲ್ಲಿ ಬರೆದಂತೆ " ಸುಧೀರ್ಘವಾದ ಈ ಕಾದಂಬರಿಯಲ್ಲಿ ಆವರಿಸಿಕೊಳ್ಳುವ ಹಲವು ಪಾತ್ರಗಳು ಸಹನಾ ಅವರದೇ ಸೃಷ್ಠಿ. ಈ ಮೂಲಕ ಅವರ ಸತ್ಯ ವಿಮುಖವಲ್ಲದ ಸೌಂದರ್ಯ ಸಿದ್ದಿ ಮೆಚ್ಚುವಂತಿದೆ"

ಸಹನಾ ಅವರು ಹೇಳಿದಂತೆ ಸುಮಾರು ನಾಲ್ಕು ವರ್ಷಗಳ ಕಾಲ ಶ್ರಮ ವಹಿಸಿ ಬರೆದ ಕಾದಂಬರಿ.
ಹಾರ್ದಿಕ ಅಭಿನಂದನೆಗಳು.

ಬರೆದಿರುವುದು 5/1/2025



No comments:

Post a Comment