Sunday, 31st August 2025
Godrej Woodsman Estate, Ebony, Hebbal, Bengaluru.
Grand lunch followed in the Community Hall of the apartment building.
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Sunday, 31st August 2025
Godrej Woodsman Estate, Ebony, Hebbal, Bengaluru.
Saturday, 30th August 2025
Kenneth George School, DasaraHalli Main Road, Bhuvaneshwarinagara, Bengaluru.
29 August 2025
ನಿನ್ನೆ ಅಚಾನಕ್ಕಾಗಿ ಲಿಂಗನಮಕ್ಕಿ ಅಣೆಕಟ್ಟನ್ನು ದರ್ಶಿಸುವ ಅವಕಾಶ ಸಿಕ್ಕಿತು. ಹನ್ನೊಂದೂ ಗೇಟುಗಳನ್ನು ತೆಗೆದಿದ್ದಾರೆ ಎಂದು ಗೊತ್ತಾದ ತಕ್ಷಣ ಕಾರ್ಗಲ್ ನ ನಮ್ಮ ಪಾಲಕರಾದ ಹಾಗೂ ವೃತ್ತಿಯಲ್ಲಿ ವರದಿಗಾರರಾದ ಶ್ರೀ ರಾಧಾಕೃಷ್ಣ ಅವರಿಗೆ ಫೋನಾಯಿಸಿ “ಪಾಸ್” ಕೊಡಿಸಲು ಆಗುತ್ತದೆಯಾ” ಎಂದು ಕೇಳಿದಾಗ ಅವರು ಎರಡು ಮಾತನಾಡದೆ ಖುದ್ದಾಗಿ ಜೋಗಕ್ಕೆ ಹೋಗಿ ನಮಗೆಲ್ಲ ಪಾಸ್ ವ್ಯವಸ್ಥೆ ಮಾಡಿದ್ದಲ್ಲದೆ ಅವರ ಪತ್ನಿಯ ಜೊತೆಗೂಡಿ ನಮ್ಮೊಡನೆ ಲಿಂಗನಮಕ್ಕಿಗೆ ಬಂದದ್ದು ಅವರ ಆತಿಥ್ಯಕ್ಕೆ ಉತ್ತಮ ನಿದರ್ಶನವಲ್ಲದೆ ಮತ್ತೇನು?
ರಾಧಾಕೃಷ್ಣ ದಂಪತಿಗಳೊಡನೆ ವಿಭಾ, ಮೇದಿನಿ, ನಾನು, ಅನಿರುದ್ಧ, ಕಿಟ್ಟಣ್ಣ, ಸುಶೀಲಕ್ಕ ಹಾಗೂ ಮಂಜು - ಇಷ್ಟು ಜನರು ಲಿಂಗನಮಕ್ಕಿ ಅಣೆಕಟ್ಟಿಗೆ ಹೋದ ತಕ್ಷಣ ಅಲ್ಲಿ ಮಂಜು ಮುಸುಕಿದ ವಾತಾವರಣದಲ್ಲಿ ಬಲ ಭಾಗದಲ್ಲಿ ಕಾಣುತ್ತಿದ್ದ ವಿಶಾಲವಾದ ನೀರಿನ ಹರವು ಬೇರೆಯದೇ ಲೋಕದ ದರ್ಶನ ಮಾಡಿಸಿತು. “ಕೆಳಗೆ ನೀರು ಬೀಳುವಲ್ಲಿ ಹೋಗಿ ನೋಡಿದರೆ ಚೆನ್ನಾಗಿರುತ್ತದೆ” ಎಂದು ರಾಧಾಕೃಷ್ಣ ಅವರು ಹೇಳಿದ್ದೇ ನಮ್ಮ ಕಾರುಗಳು ಹಸಿರಿನ ಗರ್ಭವನ್ನು ಸೀಳಿದಂತಿದ್ದ ರಸ್ತೆಯಲ್ಲಿ ಸಾಗಿ ಕೆಳಗೆ ಹೋದಾಗ ಅಲ್ಲಿ ಕಂಡಿದ್ದು ರುದ್ರ ರಮಣೀಯ ದೃಶ್ಯ. ಎದೆ ನಡುಗಿಸುವ ರಭಸದಲ್ಲಿ ನೊರೆ ನೊರೆಯಾದ ಜಲರಾಶಿ ಕೆಳಗೆ ಬಿದ್ದು ಮಗುಚಿ ಮೋಡದ ಹನಿಯೋಪಾದಿಯಲ್ಲಿ ಅಷ್ಟೇ ರಭಸದಲ್ಲಿ ಮೇಲೆ ಬಂದು ಹಾರುತ್ತಿದ್ದುದನ್ನು ನೋಡಲು ಎಂಟೆದೆ ಬೇಕು. ಅದರ ರಭಸ, ಅದರ ಭೋರ್ಗರೆತ, ಅದರ ಅದಮ್ಯ ಶಕ್ತಿಯನ್ನು ಬಣ್ಣಿಸುವುದು ಕಷ್ಟ. ಅದರ ಮೊದಲ ನೋಟ ಅಧೀರಗೊಳಿಸಿದರೂ ನಂತರದಲ್ಲಿ ಅದು ತನ್ನೆಡೆಗೆ ನಮ್ಮನ್ನು ಸೆಳೆಯುತ್ತಿದ್ದಂತೆ ಅನಿಸುತ್ತಿತ್ತು. ಕಬ್ಬಿಣದ ಬೇಲಿಯಾಚೆ ಗಾಳಿಗೆ ಆಗಾಗ್ಗೆ ಬಂದು ರಭಸವಾಗಿ ಹೊಡೆಯುತ್ತಿದ್ದ ನೀರ ಹನಿಗಳಲ್ಲಿ ನಾವು ಮಿಂದೆದ್ದು ಆನಂದಿಸಿದೆವು. ಅದು ‘ರಪಕ್ಕನೆ’ ಬಂದು ಹೊಡೆಯುವಾಗ ಉಸಿರು ಕಟ್ಟುವುದರ ಜೊತೆಗೆ ಎದೆ ಝಲ್ಲೆನಿಸುತ್ತಿತ್ತು. ಒಂಟಿಯಾಗಿ ಅಲ್ಲಿಗೆ ಹೋಗಲು ನನ್ನಂತವರಿಗೆ ಧೈರ್ಯ ಸಾಲದೇನೊ ಅಂತನಿಸಿದ್ದು ನಿಜ.
ಎಂತಹ ವಿಚಿತ್ರ ನೋಡಿ! ಒಂದು ಭಾಗದಲ್ಲಿ ನೀರನ್ನು ರಭಸವಾಗಿ ಚಿಮ್ಮಿಸುವ ಅಣೆಕಟ್ಟು ತನ್ನ ಇನ್ನೊಂದು ಭಾಗದಲ್ಲಿ ಶಾಂತ, ಸ್ನಿಗ್ಧವಾದ ಅಪಾರ ಜಲರಾಶಿಯನ್ನು ತಡೆದು ನಿಲ್ಲಿಸಿದೆ. ನಾವೂ ಹಾಗೆ ತಾನೆ? ಮನಸ್ಸಿನೊಳಗೆ ರಭಸವಾಗಿ ನೂರೆಂಟು ಆಲೋಚನೆಗಳನ್ನು ಹರಿಯಬಿಟ್ಟು ಹೊರ ಜಗತ್ತಿಗೆ ಸಂದರ್ಭೋಚಿತವಾಗಿ “ಜರಡಿ ಮಾಡಿ ಶೋಧಿಸಿದ” ಭಾವನೆಗಳನ್ನು ಮಾತ್ರ ಪ್ರಕಟ ಪಡಿಸುತ್ತೇವಲ್ಲವೆ? ಹಾಗಾದರೆ ನಾವು ನಮ್ಮ ಭಾವನೆಗಳಿಗೆ ಲಗಾಮು ಹಿಡಿಯುವ ಅಣೆಕಟ್ಟಿನ ಪಾತ್ರ ವಹಿಸುತ್ತೇವೆಯೆ?
ಅದೇನೆ ಇರಲಿ, ಲಿಂಗನಮಕ್ಕಿ ಅಣೆಕಟ್ಟಿನ ಭೇಟಿ, ಅಲ್ಲಿನ ಅನುಭವ ನಮ್ಮ ಬದುಕಿನ ಸ್ಮರಣೀಯ ಅನುಭವಗಳಲ್ಲಿ ಸೇರಿ ಒಂದಾದ ಧನ್ಯತಾ ಭಾವ ನಮ್ಮೆಲ್ಲರಲ್ಲಿದೆ.
30/8/2025
Thursday, 28th August 2025
Sunandi Oldage Care Home, KodigeHalli, Bengaluru.
Another divine session of Bhajan and Satsang completed at Sunandi Vraddhashrama, for the benefit of inmates.
Wednesday, 27th August 2025
Most Hindus celebrating Ganesha Festival, with keeping Ganesha Idol, Pooja, Laddu, Modaka, KaiKadubu, Chakkuli etc forNaivedya, exchanging greetings.
CREATIONS - BIRTHIMANE
Saturday, August 23, 2025
ZOOM ONLINE
HOST : RAJANI RAMACHANDRA UDUPA at UDUPI
Sugama Bhajane online for the month of August 2025, completed successfully.
The session concluded with "Bhagyada Lakhmi Baaramma, by Udupa Family,
Shankaraya.... by Nalini Jayarama Somayaji
Mangala song by Udupa family.
Ashok complimented members who are celebrating Birthdays and Wedding Anniversary,
It was divine session, all Blessed.
LOKAA SAMASTHAA SUKHINO BHAVANTHU....
GOD BLESS ALL.
ನಮಸ್ಕಾರದ ಪ್ರಾಮುಖ್ಯತೆ
ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .
"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"
ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -
ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ ಶ್ರೀ ಕೃಷ್ಣ ದ್ರೌಪದಿ ಗೆ, ಈಗ ನನ್ನೊಂದಿಗೆ ಬಾ -ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮಹನ ಶಿಬಿರವನ್ನು ತಲಿಪಿದನು -
ಶಿಬಿರದ ಹೊರಗೆ ನಿಂತು ದ್ರೌಪದಿ ಗೆ – “ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದರು
ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ - "ಅಖಂಡ ಸೌಭಾಗ್ಯವತಿ ಭವ" ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!
"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ ಕರೆತಂದಿದ್ದಾರಾ"?
ಆಗ ದ್ರೌಪದಿ ಹೀಗೆ ಹೇಳಿದಳು -
"ಹೌದು,ಅವರು ಕೋಣೆಯ ಹೊರಗೆ ನಿಂತಿದ್ದಾರೆ" ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. "ನನ್ನ ಒಂದು ವಚನವನ್ನು ನನ್ನ ಇನ್ನೊಂದು ವಚನದಿಂದ ಮುರಿದು ಹಾಕಲು ಶ್ರೀ ಕೃಷ್ಣನಿಂದ ಮಾತ್ರ ಸಾಧ್ಯ" ಭೀಷ್ಮ ಪಿತಾಮಹ ಹೀಗೆ ಹೇಳಿದನು.
ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು -
"ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದಕ್ಕೇ, ನಿನ್ನ ಪತಿಯಂದಿರಿಗೆ ಜೀವನ ಸಿಕ್ಕಿದೆ".
"ಇನ್ನು ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿ ಹಿರಿಯರಿಗೆ ಪ್ರತಿದಿನ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷ್ಯಾಸನಾದಿಗಳ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ"
ಅಂದರೆ ,
ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -
"ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ"
"ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲಾ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"
ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಈ ರಕ್ಷಾಕವಚವನ್ನು ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ.
"ವಿನಯದಿಂದ ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಪಾಲಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ ಆ ಮನೆ ಸ್ವರ್ಗವಾಗುತ್ತದೆ."
ಏಕೆಂದರೆ ,
ನಮಸ್ಕಾರ ಪ್ರೀತಿ,
ನಮಸ್ಕಾರ ಶಿಸ್ತು
ನಮಸ್ಕಾರ ಶೀತಲತೆ.
ನಮಸ್ಕಾರ ಗೌರವವನ್ನು ಕಲಿಸುತ್ತವೆ.
ನಮಸ್ಕಾರದಿಂದ ಸುವಿಚಾರ ಬರುತ್ತದೆ.
ನಮಸ್ಕಾರ ಬಾಗುವುದನ್ನು ಕಲಿಸುತ್ತದೆ.
ನಮಸ್ಕಾರ ಕೋಪವನ್ನು ಅಳಿಸುತ್ತದೆ.
ನಮಸ್ಕಾರ ಅಹಂ ಅನ್ನು ಅಳಿಸುತ್ತದೆ.
ನಮಸ್ಕಾರ ನಮ್ಮ ಸಂಸ್ಕೃತಿ
ನಮಸ್ಕಾರ ನಮ್ಮ ಸಂಸ್ಕಾರವನ್ನು ತಿಳಿಸುತ್ತದೆ...
From WhatApp forwarded 25/8/2025
Sunday, 24th August 2025
JP AC Party Hall, RajaRajeshwarinagara, Bengaluru.