Monday, January 26, 2026

REPUBLIC DAY 2026

 Monday, 26th January 2026

CoffeeBoard Park, Kempapura, Bengaluru.



ಆತ್ಮೀಯರೆ ಎಲ್ಲರಿಗು ೭೭ನೇ ಗಣರಾಜ್ಯೋ ತ್ಸವದ ಹಾರ್ದಿಕ ಶುಭಾಷಯಗಳು. ತಮ್ಮಗಳಲ್ಲಿ ಮತ್ತೊಮ್ಮೆ ಮನವಿ, ಇಂದು ಕ ಸಾ ಪ ವತಿಯಿಂದ ನಡೆಯಲಿರುವ ಗಣರಾಜ್ಯೋ ತ್ಸವ ಪ್ರಯಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೆ ದೇಶಾಭಿಮಾನಿಗಳಾದ ತಾವು ದಯವಿಟ್ಟು ಬಿಡುವು ಮಾಡಿಕೊಂಡು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ತಮ್ಮೆಲ್ಲರಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ.ಇದು ನಿಮಗೆ ವಯಕ್ತಿಕ ಮನವಿ ಎಂದು ಪರಿಗಣಿಸಿ ಭಾಗವಹಿಸಬೇಕಾಗಿ ಮನವಿ ಮಾಡುತ್ತಿದ್ದೇನೆ.

ಸ್ಥಳ:ಕಾಫೀ ಬೋರ್ಡ್ ಉದ್ಯಾನವನ

ದಿನಾಂಕ: 26/01/2026

ಸಮಯ: ಬೆಳಿಗ್ಗೆ 7.45 ಗೆ  ಇಂತಿ ನಿಮ್ಮವ, ರೇಣುಕ ಹೆಗ್ಗಡೆ



ಇಂದು ಬೆಳಿಗ್ಗೆ 8.10 ಗಂಟೆಗೆ ಕಾಫಿಬೋರ್ಡ್ ಉದ್ಯಾನವನದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಿವಕುಮಾರ್ ಅವರು ಧ್ವಜಾರೋಹಣ ಮಾಡುವುದರೊಂದಿಗೆ 77 ನೆ ಗಣರಾಜ್ಯೋತ್ಸವ ದಿನಾಚರಣೆ ಸಂಪನ್ನ ಗೊಂಡಿತು. 



ಡಿ ಐ ಜಿ ಪಿ ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ ಭಾರತದ "ರಾಮರಾಜ್ಯ" ಕನಸನ್ನು ಸಾಕರಗೊಳಿಸಲು ಇಂದಿನ ಯುವ ಜನಾಂಗ ಮುಂದೆ ಬರಬೇಕೆಂದು ಮನವಿಮಾಡಿದರು. 

ನಿವೃತ್ತ ಕೆ. ಇ. ಬಿ. ಅಧಿಕಾರಿಯಾಗಿದ್ದ ಛಾಯಾಪತಿ ಅವರು ಗಣರಾಜ್ಯದ ಹಿನ್ನೆಲೆಯನ್ನು ಮಾತನಾಡುತ್ತಾ ಭಾರತದ ಸಂವಿಧಾನದ ಕುರಿತು ಮಾತನಾಡಿ  ಡಾ ಅಂಬೇಡ್ಕರ್ ಅವರನ್ನು ಸ್ಮರಿಸಿದರು. 


Posted 26/1/2026 




No comments:

Post a Comment