Saturday, July 6, 2024

ಪರಸಂಗದ ಗೆಂಡೆ ತಿಮ್ಮ - ಕನ್ನಡ ನಾಟಕ

 ಶನಿವಾರ, ಜುಲೈ 6 , 2024

ನಯನ ಸಭಾಂಗಣ, ರವೀಂದ್ರ  ಕಲಾಕ್ಷೇತ್ರ, ಬೆಂಗಳೂರು.

"ಪರಸಂಗದ ಗೆಂಡೆ ತಿಮ್ಮ"ಪರಂಪರಾ ತಂಡದವರಿಂದ ಅದ್ಭುತವಾಗಿ ಪ್ರಸ್ತುತ ಪಡಿಸಿದ ಕನ್ನಡ ನಾಟಕ.


ಐದು ದಶಕಗಳ ಹಿಂದೆಯೇ ಸಿನಿಮಾದಲ್ಲಿ ಪ್ರಸಿದ್ಧವಾಗಿ ಮೆರೆದ, ಶ್ರೀ ಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತ ಹಳ್ಳಿಯ ಸೊಗಡಿನ ಹಿಂದಿನ ಕಥೆ, ಹಳ್ಳಿಯ ಮುಗ್ಧ ಹುಡುಗ, ಪೇಟೆಯ ಹುಡುಗಿಯನ್ನು ಮದುವೆಯಾಗಿ ಪಡುವ ಕಷ್ಟ, ಆತನ ಮನೆಯಲ್ಲಿ, ಹಳ್ಳಿಯಲ್ಲಿ ನಗೆ ಪಾಟಲಿಗೀಡಾಗಿ ದಾರುಣ ಅಂತ್ಯದ ಕಥೆ.





ನಾಟಕದ ಕೆಲವು ಸನ್ನಿವೇಶ 

ಬೋ ಚಂದಾಗಯ್ತೆ.... ಹಳ್ಳಿಯ ಸೊಗಡಿನ ಸಂಭಾಷಣೆ, ಗೆಂಡೆ ತಿಮ್ಮನ ಅದ್ಭುತವಾದ ನಟನೆ, ಅವನು ಮದುವೆಯಾದ ಪ್ಯಾಟೆ ಹುಡುಗಿ, ಮಾರಂಗಿಯ ವಯ್ಯಾರ, ತಿಮ್ಮನ ತಾಯಿಯ ಮನೆಯಲ್ಲಿಯ ಜಗಳ, ಮಾರಂಗಿಯ ಅಪ್ಪನ ಸಂಧಾನ ಯತ್ನ, ಹುಡುಗಿಯು ಹಳ್ಳಿಗೆ ಬಂದ ಮೇಸ್ಟ್ರಿಗೆ ಮರುಳಾಗಿ, ಅವನೊಡನೆ ಸರಸ ಸಲ್ಲಾಪ, ತಿಮ್ಮನ ಮೇಲಿನ ಆರೋಪ, ಹಳ್ಳಿಯ ಪಂಚಾಯತಿಯಲ್ಲಿ ತೀರ್ಮಾನ, ಎಲ್ಲವೂ ಅದ್ಭುತವಾಗಿ ಮೂಡಿ ಬಂದಿರುತ್ತದೆ.


ನಾಟಕದ ರಂಗ ಸಜ್ಜಿಕೆ, ಬೆಳಕು, ರಂಗವಿನ್ಯಾಸ, ಸಂಗೀತ, ಎಲ್ಲವೂ ಮುದ ನೀಡುವಂತಿತ್ತು.






ನಾಟಕದ ಮುಂಚೆ, ಸಭಾ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯದ ಮೇಧಾವಿ ಅಪ್ಪುಗೆರೆ ತಿಮ್ಮರಾಜು, ಸ್ಯಾಕ್ಸೋಫೋನ್ ನುಡಿಸುವಲ್ಲಿ ಪ್ರಸಿದ್ಧಿ ಪಡೆದ. ಕದ್ರಿ ಗೋಪಾಲ್ ಅವರ ಶಿಷ್ಯೆ, ಸುಬ್ಬಲಕ್ಷ್ಮಿ, ಹಾಗೂ ಇನ್ನೂ ಕೆಲವರಿಗೆ ಸನ್ಮಾನಿಸಲಾಯಿತು.





ನಾಟಕವನ್ನು ಸುಂದರವಾಗಿ ಪ್ರಸ್ತುತ ಪಡಿಸಿದ ಎಲಾ ಕಲಾವಿದರುಗಳಿಗೆ, ನಿರ್ದೇಶಕ ಚಂದ್ರು ಅವರಿಗೆ ಹಾರ್ದಿಕ ಅಭಿನಂದನೆಗಳು.



ಸುಮಾರು ಎರಡು ಗಂಟೆಗಳ ಕಾಲದ ನಾಟಕ, "ಪರಸಂಗದ ಗೆಂಡೆತಿಮ್ಮ" ಹಳ್ಳಿಯ ಜೀವನ, ಪ್ಯಾಟೆಯ ಬದುಕಿನ ಹಂಬಲ, ತಿಮ್ಮ - ಮಾರಂಗಿಯ ಕಥೆಯಲ್ಲಿ ಸೊಗಸಾಗಿ ಮೂಡಿ ಬಂದಿರುವುದು, ನಾಟಕ ನೋಡಿದವರಿಗೆಲ್ಲ ಖುಷಿ.

ಬರೆದಿರುವುದು, Posted, 7/7/2024





No comments:

Post a Comment