Sunday, 10th November 2024
Vinayaka Devasthana, R T Nagara, Bengaluru
ಶ್ರೀ ಭ್ರಾಹ್ಮಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ , ಶ್ರೀ ಕ್ಷೇತ್ರ ಕಮಲಶಿಲೆ, ಹಾಗೂ ಸುವರ್ಣ ಪ್ರಸಾಧನ ಯಕ್ಷರಂಗ, ಅರ್. ಟಿ. ನಗರ, ಬೆಂಗಳೂರು ಇವರ ಸಹಯೋಗದಲ್ಲಿ
"ಶ್ರೀ ಬನಶಂಕರಿ ಮಹಾತ್ಮೆ "
ಎಂಬ ನೂತನ ಪ್ರಸಂಗವನ್ನು ತುಂಬಾ ಚೆನ್ನಾಗಿ ಆಡಿ ತೋರಿಸಿರುವರು.
ಒಬ್ಬ ರಾಜ ಬಹಳ ವರ್ಷಗಳಿಂದ ಸಂತಾನ ಭಾಗ್ಯ ವಿಲ್ಲದಿದುರಿಂದ ಆತನ ಹೆಂಡತಿ, ರಾಜನನ್ನು ಇನ್ನೊಂದು ಮದುವೆಯಾಗಲು ಪ್ರೆರೆಪಿಸುವಳು. ಕಾರಣಾಂತರ ಗಳಿಂದ ಕಾಡಿನಲ್ಲಿದ್ದ ಚಂಪಾ ಎಂಬವಳನ್ನು ರಾಜ ಮದುವೆಯಾಗುತ್ತಾನೆ.
ನಂತರ ಶ್ರೀ ದೇವಿ ಬನಶಂಕರಿ ರಾಜನ ಮೊದಲ ಹೆಂಡತಿಗೆ ಕನಸಿನಲ್ಲಿ ಬಂದು ಫಲವನ್ನು ಕೊಟ್ಟು ಸ್ವೀಕರಿಸಿದಲ್ಲಿ ಸಂತಾನ ಭಾಗ್ಯ ಲಬಿಸುವುದು ಎಂದು ಆಶೀರ್ವದಿಸುತ್ತಾಳೆ.
ಈ ಫಲವನ್ನು ರಾಜನ ಈರ್ವರೂ ಹೆಂಡತಿಯರು ಪಡೆದು ಅವರಿಗೆ ಸುಧೀರ, ಸುಕೇತ ಎಂಬ ಮಕ್ಕಳಾಗುತ್ತದೆ.
ಹೀಗೆ ಕಥೆ ಮುಂದುವರಿದು ಸುಧೀರನ ಮಾವ ಅವನನ್ನು ಸಾಯಿಸಲು ಪ್ರಯತ್ನಿಸಿ ಕಾಡಿಗೆ ಅಟ್ಟುತ್ತಾನೆ.
ನಂತರ ಕಾಡಿನಲ್ಲಿ ಕರಡಿ ಅವನನ್ನು ಸಾಕಿ, ಕರಡಿಯನ್ನೂ ದಾನವನೊಬ್ಬ ಸಾಯಿಸಿ, ಅವನು ಅಲ್ಲೇ ಬೆಳೆದು ದೊಡ್ಡವನಾಗಿ , ಪುನಃ ರಾಜ, ತಾಯಿ, ಸುಕೆತನನ್ನು ಗುರುತಿಸಿ ರಾಜ್ಯಕ್ಕೆ ಮರಳುತ್ತಾನೆ.
ಹಲವು ತಿರುವುಗಳಿಂದ ಮುಂದುವರಿಯುವ ಕಥೆ, ಕೊನೆಗೆ ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ.
ಯಕ್ಷಗಾನದ ವೇಷ ಭೂಷಣ, ಅಭಿನಯ, ನೃತ್ಯ , ಹಾಡುಗಾರಿಕೆ ಎಲ್ಲವೂ ಅದ್ಭುತವಾಗಿತ್ತು.
Posted 12/11/2024
No comments:
Post a Comment