ಸೋಮವಾರ, 25 ಡಿಸೆಂಬರ್ 2023
ಶ್ರೀ ಸುರಭಾರತಿ ಸಭಾಂಗಣ, ಎಚ್,ಅರ್.ಬಿ.ಅರ್. ಬಡಾವಣೆ, ಬೆಂಗಳೂರು.
ಯಕ್ಷಗಾನ - ಚಂದ್ರಾವಳಿ ವಿಲಾಸ
ಸೊಕ್ಕಿನ ಚಂದ್ರಾವಳಿ, ಮೋಹಕ ಯಕ್ಷ ಕನ್ನಿಕೆ, ಓರ್ವ ಅತ್ಯಂತ ಗರ್ವದ ಹೆಣ್ಣುಮಗಳು. ಅವಳು ಯಾರಿಗೂ ಹೆದರದ, ಬಗ್ಗದ ಮಹಿಳೆ.
ಅವಳ ಗರ್ವವನ್ನು ಮುರಿಯಲು ಲಾಲಿತ್ಯದ ಶ್ರೀ ಕೃಷ್ಣನು (ಶಿಥಿಲಾ ಶೆಟ್ಟಿ ಐರಬೈಲ್ರ್) ನಿರ್ಧರಿಸಿ ಅವಳೊಡನೆ ಸರಸ ಸಲ್ಲಾಪ ಮಾಡುತ್ತಾ, ನಂತರ ಅವಳ ಅತ್ತೆ ಹಾಗೂ ಗಂಡ ಚಂದಗೋಪ ಇರುವ ಸ್ಥಳಕ್ಕೆ ಮಾರುವೇಷದಲ್ಲಿ ತೆರಳುತ್ತಾನೆ.
ಇಲ್ಲಿ ಅಜ್ಜಿಯ ಪಾತ್ರದಲ್ಲಿ , ಹವ್ಯಾಸಿ ಯಕ್ಷರಂಗದ ಹಾಸ್ಯ ಕಲಾವಿದ, ಶ್ರೀ ಚಂದ್ರಶೇಖರ ಶೆಟ್ಟಿ ಕೊಡ್ಲಾಡಿ ಹಾಗೂ ಮಗ ಚಂದಗೊಪನ ಪಾತ್ರದಲ್ಲಿ ಯಕ್ಷರಂಗದ ಚಾರ್ಲಿ ಚಾಪ್ಲಿನ್ ಶ್ರೀ ಸಿತಾರಮಕುಮಾರ್ ಕಟೀಲ್, ಅವರ ಸಂಭಾಷಣೆ, ಹಾಸ್ಯ ಎಲ್ಲರನ್ನು ನಗೆಗಡಲಲ್ಲಿ ತೆಲಿಸಿತ್ತು.
ಶ್ರೀಕೃಷ್ಣನು ರಾಧೆಯೊಂದಿಗೆ ದರುಶನವನ್ನು ಮಾಡಿದಾಗ, ಚಂದಗೋಪ ಸಂತುಷ್ಟನಾಗಿ ತನ್ನ ನಮನವನ್ನು ಸಲ್ಲಿಸುವನು.
No comments:
Post a Comment