Monday, October 28, 2024

ಪ್ರಶಸ್ತಿ ಪ್ರಧಾನ - ಕಾಳಿಂಗ ನಾವುಡ , ಯಕ್ಷಗಾನ

 ಭಾನುವಾರ, 27 ಅಕ್ಟೋಬರ್ 2024

ಉದಯಬಾನು ಕಲಾ ಸಂಘ, ಚಾಮರಾಜಪೇಟೆ, ಬೆಂಗಳೂರು.



ಅದು ಕಾಳಿಂಗ ನಾವುಡ ಪ್ರಶಸ್ತಿ ಪ್ರಧಾನ ಸಮಾರಂಭ. ಕಲಾ ಕದಂಬ ಆರ್ಟ್ಸ್ ಸೆಂಟರ್ ಅವರಿಂದ ಆಯೋಜನೆ.



ಸುಮಾರು ಮೂರುವರೆ ದಶಕಗಳ ಹಿಂದೆ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧರಾಗಿ , ಮಿಂಚಿ , 33 ವಯಸ್ಸಿನಲ್ಲಿ ದಿವಂಗತರಾದ ಕಾಳಿಂಗ ನಾವುಡರ ಹೆಸರಿನಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನಿಸಿ ಪ್ರಶಸ್ತಿಯನ್ನು ನೀಡುವ ಸಮಾರಂಭ. 





ಈ ಬಾರಿ ಪ್ರಸಿದ್ಧ ಚಂಡೆ ಗಾರರಾದ ಶ್ರೀ ಶಿವಾನಂದ ಕೋಟ ಅವರು ಈ ಪ್ರಶಸ್ತಿಗೆ ಭಾಜರಾಗಿರುತ್ತಾರೆ.

ಕಾರ್ಯಕ್ರಮದಲ್ಲಿ ಗಾಯನ, ನೃತ್ಯ ಹಾಗೂ ಯಕ್ಷಗಾನವನ್ನು ಆಯೋಜಿಸಿದ್ದಾರೆ.



ರಾಧಾಕೃಷ್ಣ ಉರಾಳ 

ಆರ್. ಕೆ. ಪದ್ಮನಾಭ 

ಪ್ರಸಿದ್ಧ ಹಾಡುಗಾರ ಆರ್ ಕೆ ಪದ್ಮನಾಭ ಅವರು ಮುಖ್ಯ ಅತಿಥಿಗಳಾಗಿ, ತಮ್ಮ ಕಂಚಿನ ಕಂಟದಿಂದ ಭಾಷಣ ಮಾಡಿರುತ್ತಾರೆ.


ಸಭಾ ಕಾರ್ಯಕ್ರಮದ ನಂತರ, ಯಕ್ಷಗಾನ "ಕಾಲನೇಮಿ ಕಾಳಗ" ಪ್ರಾರಂಭ.




ಅದ್ಭುತವಾದ  ಪ್ರದರ್ಶನ.ರಾಮಾಯಣದಲ್ಲಿಯ ಕಥಾ ಪ್ರಸಂಗ. ಲಕ್ಷಮಣನು ಹತರಾದಾಗ ಹನುಮಂತನು ಸಂಜೀವಿನಿ ಬೆಟ್ಟಕ್ಕೆ ಹೋಗುವ ಸಂದರ್ಭ.

ಮನೆಗೆ ಬರುವುದು ತುಂಬಾ ತಡವಾಗುವುದರಿಂದ ಅರ್ಧದಲ್ಲೇ ವಾಪಸ್ಸು ಮನೆಗೆ.

ದಾರಿಯಲ್ಲಿ ಎಸ್. ಎಲ್. ವಿ. ಹೋಟೆಲಿನಲ್ಲಿ ಫಲಾಹಾರ.

Posted 29/10/2024



No comments:

Post a Comment