Monday, April 9, 2012

ಜಲಪಾತ - ಎಸ್. ಎಲ್. ಬೈರಪ್ಪ


Jalapatha is the novel of the life of a painter in Mumbai, whose life in the city drains his life and art. He decides to leave mega city and settle in his village, but finds the village so poverty stricken that the economic strain of the rural India is controlled by the cities and decides to return to Mumbai
Jalapatha, kannada meaning is waterfalls.  Apart from the story of a painter, Sripathi and his wife Vasundhara,  the author expresses so many others facts of life, comparing waterfalls with the sexual happiness of man. His narration of slaughter house in Bombay,  a woman laboring at childbirth, difficulty of selling a  property in a village...... is simply superb.

ಸೃಷ್ಟಿಶಕ್ತಿಯಿಂದ ವಿಜೃಂಭಿಸುವ ಜೀವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿಯ ತಾಕಲಾಟವೇ "ಜಲಪಾತ’ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನ ವಿಕಾಸ , ಮತ್ತು ಭೌದ್ಧಿಕ ಸ್ತರದಲ್ಲಿ ಆವಿರ್ಭಿಸುವ ಕಲಾಸೌಂದರ್ಯ - ಇವು ಮೂರು, ವಿವಿಧ ಸ್ಥರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ, ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು  ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ  ಭಾಷೆಯಲ್ಲಿ ಹಿಡಿದಿಡಲು ಅನುಕೂಲವಾಗುವಂತೆ ಕಾದಂಬರಿಯ ಕತೆಯು ಅದರ ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಅದರ ಹೆಣ್ಣಿನ ಸ್ವಂತ ಅನುಭವದ ವರ್ಣನೆಯ ರೀತಿಯಲ್ಲಿ ಸಾಗುತ್ತದೆ.
Monday, April9, 2012

No comments:

Post a Comment