Thursday. 18th October 2018
BirthiMane, BhuvaneshwariNagara, Bengaluru.
ನವರಾತ್ರಿಯ ಒಂಭತ್ತನೇ ದಿನ ಮಹಾನವಮಿಯಂದು ಕರ್ನಾಟಕದ ತುಂಬಾ ಆಯುಧ ಪೂಜೆ ಸಡಗರ. ಜನರು ತಮ್ಮ ವಾಹನಗಳನ್ನು ತೊಳೆದು ಸಿಂಗಾರಗೊಳಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. ಮೈಸೂರಿನಲ್ಲೂ ರಾಜರು ಬಳಸುತ್ತಿದ್ದ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕರ್ನಾಟಕ ಆಯುಧ ಪೂಜೆ ಸಡಗರದಲ್ಲಿ ಮುಳುಗಿದೆ.
ಈ ಬಾರಿ ಗುರುವಾರ, ಅಕ್ಟೋಬರ್ ೧೮ ರಂದು ಆಚರಿಸಲಾಯಿತು. ಮಾರುಕಟ್ಟೆಗಳಿಗೆ ತೆರಳಿ ಹಬ್ಬಕ್ಕೆ ಅಗತ್ಯವಾದ ಹೂವು, ಬಾಳೆಹಣ್ಣು ತಂದದ್ದಾಯಿತು. ಮನೆಯಲ್ಲಿದ್ದ ಕಾರು, ಮೊಟರುಸೈಕಲ್ಲನ್ನು ನೀರಿನಿಂದ ಶುಚಿಗೊಳಿಸಿ ಒರೆಸಿದ್ದಾಯಿತು.
ಸಣ್ಣರೀತಿಯ ಪೂಜೆ, ದೀಪ, ಹೂವು, ಕುಂಕುಮ, ಅರಿಶಿನ ವನ್ನು ಲೆಪಿಸಿದ್ದಾಯಿತು, ಉದುಬತ್ತಿಯನ್ನು ಹಚ್ಚಿ, ಎರಡೂ ವಾಹನಗಳಿಗೆ ಮಂಗಲಾರತಿಯನ್ನು ಮಾಡಲಾಯಿತು.
ವಾಹನಗಳ ಚಕ್ರದ ಅಡಿಯಲ್ಲಿ ಲಿಂಬೆ ಹಣ್ಣು ಗಳನ್ನಿಟ್ಟು ವಾಹನಗಳನ್ನು ಓಡಿಸಿ ಪೂಜಾ ಕಾರ್ಯಕ್ರಮವನ್ನು ಮುಗಿಸಲಾಯಿತು.
Posted Friday, 19th Oct. 2018

No comments:
Post a Comment