ಗುರುವಾರ, ಸಪ್ಟಂಬರ 17, 2020
ಸ್ಥಳ: ವಿಶ್ವ ಹಿಂದೂ ಪರಿಷತ್, ಶಂಕರಪುರ, ಬೆಂಗಳೂರು.
ವರ್ಷದಲ್ಲಿ 16 ದಿನಗಳ ಕಾಲ "ಪಿತೃ ಪಕ್ಷ" ಎಂದು ಪರಿಗಣಿಸಿ. ಈ ಸಮಯದಲ್ಲಿ ನಮಗೆ ಜನ್ಮ ಕೊಟ್ಟ ಪೂರ್ವಿಕರನ್ನು ಸ್ಮರಿಸಿ ಅವರಿಂದ ಆಶೀರ್ವಾದವನ್ನು ಪಡೆಯುವ ಪರ್ಕ್ರಿಯೆಗೆ "ತರ್ಪಣ" ಎಂದು ಕರಯುತ್ತಾರೆ. ಇದು ಭಾದ್ರಪದ ಅಮಾವಾಸ್ಯಯ ದಿನ, ಮಹಾಲಯ ಅಮಾವಸ್ಯೆಯೆಂದು ಕರೆಯುತ್ತಾರೆ.
ಅಪ್ಪ, ಅಜ್ಜ ಮತ್ತು ಪಿಜ್ಜ ಅವರನ್ನು ನೆನಪಿಸಿಕೊಂಡು ಅವರಿಗೆ ಮೂರು ಬಾರಿ ಎಳ್ಳು ನೀರನ್ನು ಬಿಡುವ ಕ್ರಮ, ತರ್ಪಣ.
ತರ್ಪಯಾಮಿ, ತರ್ಪಯಾಮಿ, ತರ್ಪಯಾಮಿ ಎಂದು ಮೂರು ಬಾರಿ.
ಮರಣಿಸಿದ ಎಲ್ಲ ಹತ್ತಿರದ ಸಂಭಂದಿ ಗಳಿಗೂ ತರ್ಪಣವನ್ನು ಬಿಡಲಾಗುತ್ತದೆ.
ಹಿಂದೂ ಪುರಾಣದ ಪ್ರಕಾರ, ಒಬ್ಬರ ಪೂರ್ವಜ ಮೂರು ಹಿಂದಿನ ಪೀಳಿಗೆಯ ಆತ್ಮಗಳು ಪಿತೃ ಲೋಕ, ಭೂಮಿ, ಮತ್ತು ಸ್ವರ್ಗದ ನಡುವೆ ಕ್ಷೇತ್ರದಲ್ಲಿ ವಾಸಿಸುತ್ತಾರೆ. "ಪಿತೃ ಲೋಕ" ಮೂರು ತಲೆಮಾರುಗಳ ಗಮನಾರ್ಹ ಪಾತ್ರ.
No comments:
Post a Comment