ವಾಟ್ಸ್ ಅಪ್ ಕೃಪೆ : 5//5/2021
ಆ ಕಾಲ ಬಹಳ ಚೆನ್ನಾಗಿತ್ತು
ಸೂರ್ಯನಾರಾಯಣ ಹೆರ್ಲೆ, ಲಕ್ಷ್ಮೀನಾರಾಯಣ ಭಟ್, ವಿಟ್ಟಲ ರಾವ್, ವಸಂತಿಯಕ್ಕ ,ಬೈಕಾಡಿ ವೆಂಕಟಕೃಷ್ಣ ರಾವ್, ಕೋಟ ಶಿವರಾಮ ಕಾರಂತ, ಕೆ.ಅರ್.ಹಂದೆ, ಫಾದರ್ ಕುರಿಯಕೋಸ್, (ಗೊತ್ತಿಲ್ಲ) (ಗೊತ್ತಿಲ್ಲ) |
ಕುಳಿತಿರೋ ಕಡೆ ಬಸ್ಸುಗಳಲ್ಲಿ ದಿನ ಪತ್ರಿಕೆ ತಂದು ಮಾರಾಟ ಮಾಡುತಿದ್ರು
ಎಲ್ಲರ ಮನೆಯಲ್ಲೂ ಸೈಕಲ್ ಇತ್ತು , ಎಲ್ಲ ಬಸ್ಸುಗಳಲ್ಲೂ ಸೀಟ್ ಸಿಗ್ತಾ ಇತ್ತು
ಮದುವೆ ಮನೆಗಳಲ್ಲಿ ಕೆಳಗೆ ಕೂರಿಸಿ ಊಟ ಬಡುಸ್ತಿದ್ರು
ಕಪಿಲ್ ದೇವ್ ಕ್ರಿಕೆಟ್ ೫ ದಿನಗಳ ಟೆಸ್ಟ್ ಫೆಂಟಾಸ್ಟಿಕ್
ಪ್ರಜಾಮತ, ಸುಧಾಗಳಲ್ಲಿ ಒಳ್ಳೆಯ ಧಾರವಾಹಿ, ಕಥೆಗಳು ಬರುತ್ತಿತ್ತು.
ಮನೆ ಮನೆಗಳಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಸಂಗೀತ ಕೇಳ್ತಿದ್ರು
ಮನೆ ಮುಂದುಗಡೆ ಹೆಂಗಸರು ಸಾರಿಸಿ ರಂಗೋಲಿ ಹಾಕ್ತಿದ್ರು
ಸಿನೆಮಾಗೆ ಹೋಗೋಕ್ಕೆ ಎರಡು ಮೂರು ದಿನಗಳ ಪ್ಲಾನ್ ಹಾಕ್ಬೇಕಿತ್ತು
ಯುಗಾದಿ, ದೀಪಾವಳಿ ಹಬ್ಬ ಬರೋದಿಕ್ಕೆ ಒಂದು ತಿಂಗಳು ಮುಂಚಿತವಾಗಿ ಕಾಯುತಿದ್ವಿ
ಆ ಕಾಲಕ್ಕೆ ಟಾನ್ಸಿಲ್ಸ್ ದೊಡ್ಡ ಆಪರೇಷನ್
ರೇಡಿಯೋ ನಲ್ಲಿ ನಾಟಕಗಳು ಬಲು ಚೆನ್ನಾಗಿರುತ್ತಿತ್ತು
ಸುಮಾರು ಎಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದ್ವಿ
ರಸ್ತೆಯಲ್ಲಿ ಯಾವಾಗಲೋ ಒಂದು ಕಾರು ಹೋಗ್ತಿತ್ತು
ಕನ್ನಡ ಮೇಷ್ಟರಿಗೆ ಸರಿ ಸಾಟಿ ಯಾರು ಇರಲಿಲ್ಲ
ಸುಲಭವಾಗಿ ವಧು ಸಿಕ್ಕುತಿದ್ಲು
ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸನ್ನು ಗೆಲ್ಲುವುದು ಸಾಧ್ಯವಿರಲಿಲ್ಲ
ಮಾರ್ಕೆಟ್ ಗೆ ಹೋಗಲು ಹತ್ತು ರೂಪಾಯಿ ಸಾಕಾಗುತ್ತಿತ್ತು
ಅಪ್ಪ ಅಮ್ಮನ ಪಕ್ಕದಲ್ಲಿ ಆಗಾಗ ಮಲಗುತಿದ್ವಿ
ಉರಿ ಬಿಸಿಲಿನಲ್ಲೂ ಚಪ್ಪಲಿ ಇಲ್ಲದೆ ನಡೆಯುತ್ತಿದ್ದೆವು
ಹೇರ್ ಕಟ್ ಮಾಡಲು ಎರಡು ರೂಪಾಯಿ ಶೇವಿಂಗ್ ಗೆ ಐವತ್ತು ಪೈಸೆ
ಮದುವೆ ವಯಸ್ಸಿನ ಹೆಣ್ಣು ಮಕ್ಕಳು ಲಂಗ ದಾವಣಿ ಹಾಕುತಿದ್ರು
ರಸ್ತೆಯಲ್ಲಿ ಲಗೋರಿ ಆಟ ಸೈಕಲ್ ಟೈಯರ್ ಓಡಿಸುತಿದ್ವಿ
ಎಸ್ ಎಲ್ ಬೈರಪ್ಪ , ತ್ರಿವೇಣಿ ಕಾದಂಬರಿಗಳು ಮನೆ ಮಾತಾಗಿತ್ತು
ನವಿಲು ಗರಿ ಮರಿ ಹಾಕುವುದು ಎಂದು ಪುಸ್ತಕದ ನಡುವೆ ಇಟ್ಟು ದಿನ ಕಾಯುತ್ತಿದ್ದೆವು
ಐದು ರೂಪಾಯಿ ಕಳೆದುಕೊಂಡೆ ಅಂತ ಅಪ್ಪನ ಹತ್ತಿರ ಒದೆ ತಿಂದೆ.
ನಾಲ್ಕನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಪಾಠ ಎಂಟನೇ ಕ್ಲಾಸ್ ವರೆಗೂ ಅರ್ಧ ನಿಕ್ಕರು
ಉಸಿರಾಡಲು ಶುದ್ಧ ಗಾಳಿ ಇತ್ತು
ಕುಡಿಯುವ ನೀರನ್ನು ಯಾರು ಖರೀದಿಸಲಿಲ್ಲ
ಲವ್ ಮಾಡೋದು ಥ್ರಿಲ್ ಆಗಿತ್ತು
ಸಿನಿಮಾ ಹಾಡಿನ ಪುಸ್ತಕ ಪುಟ ಪಾತ್ ನಲ್ಲಿ ಮಾರುತಿದ್ರು
ಒಟ್ಟಿನಲ್ಲಿ ಬಹಳ ಮರ್ಯಾದೆ ಇದ್ದಂತಹ ಕಾಲ
ಕಳೆದು ಹೋದದ್ದು ದಿನಗಳು ಮಾತ್ರವಲ್ಲ ನಮ್ಮ ಸುಖಗಳು ಕೂಡ
ಅದ್ಬುತವಾದ ನೆನಪುಗಳು ಅಹುದು ಬದಲಾವಣೆಗಳನ್ನು ತಂದಿರುವೆವು. ಈ ಕಾಲದ ಯುವಕರಿಗೆ ವಿಭಿನ್ನ ಸುಖಗಳು. ಆದರೂ ಆ ಸುಖಗಳು ಸುಖವಾಗಿ ಉಳಿದಿಲ್ಲ.
ನೆನಪಿಸಿಕೊಳ್ಳಲು ಇದು ಒಂದು ಸಾಕು ನೆನಪಿನಲ್ಲಿ ಉಳಿಸಿಕೊಳ್ಳಲು ಈ ಸಾಲೇ ಸಾಲು ಬೇಕೇ ಬೇಕು ಏನಂತೀರಿ .
No comments:
Post a Comment