ಭಾನುವಾರ, 19 ಸೆಪ್ಟಂಬರ 2021
ಹುಣಸೂರು
ನಳಿನಿಯ ಸೋದರ ಸತೀಶ ಮತ್ತು ಅವನ ಹೆಂಡತಿ ಮಾಲತಿ ಸೇರಿ ಒಂದು ಚಿಕ್ಕ ಹೋಟೆಲ್ ಮಾದರಿಯ ಊಟದ ಮನೆಯನ್ನೂ ನಡೆಸುತ್ತಿರುವುದು ಸಂತಸದ ವಿಚಾರ.
ಇತ್ತೀಚೆಗೆ ನಾವು ಹುಣಸೂರಿಗೆ ಹೋಗಿದ್ದಾಗ ಅವನ "ನೈವೇದ್ಯ ಮೆಸ್" ನ ದರ್ಶನವಾಯಿತು.
ಎರಡು ಮಹಡಿಯ ಸ್ವಂತ ಕಟ್ಟಡದ ಕೆಳಗಿನ ಮಹಡಿಯಲ್ಲಿ ನಾಲ್ಕು ಅಂಗಡಿಗಳು, ಅಡಿಗೆ ಮನೆ ಹಾಗೂ ಊಟ ಮಾಡುವುದಕ್ಕೆ ಬೇಕಾಗುವ ಪರಿಕರಗಳು ಕುರ್ಚಿ, ಮೇಜು ಇತ್ಯಾದಿ.
ಪ್ರಥಮ ಮಹಡಿಯಲ್ಲಿ ಅವರ ವಿಶಾಲವಾದ ಮನೆ ಯಿದ್ದು ಚೆನ್ನಾಗಿ ಇಟ್ಟು ಕೊಂಡಿರುವರು.
ಅಡಿಗೆಮನೆಯಲ್ಲಿ ಸತೀಶ ಮತ್ತು ಮಾಲತಿ ಇರ್ವರೂ ಸೇರಿ ಸುಮಾರು 70 - 80 ಗ್ರಾಹಕರಿಗೆ ಮಧ್ಯಾಹ್ನದ ಊಟ ವನ್ನು ವ್ಯವಸ್ತೆ ಮಾಡುತ್ತಿರುವರು.
ಸತೀಶ್-ಮಾಲತಿಯವರಿಗೆ ಈ ಹೋಟೆಲ್ ಉದ್ಯಮದಲ್ಲಿ ಯಸಸ್ಸು ಗಳಿಸಲಿ ಎಂದು ಶುಭ ಹಾರೈಸುವೆವು .
ಬರೆದಿರುವುದು 22 ಸೆಪ್ಟಂಬರ 2021






No comments:
Post a Comment