ಭಾನುವಾರ, 19 ಸಪ್ಟಂಬರ 2021
ಶ್ರೀ ಭೂ ವರಹಾನಾಥ ಸ್ವಾಮಿ ದೇವಸ್ಥಾನ, ಕಲ್ಲಹಳ್ಳಿ, ಕೆ.ಅರ್.ಪೇಟೆ ತಾಲೂಕು, ಲಕ್ಷ್ಮೀದೇವಿಯ ವಿಶೇಷ ಸ್ಥಳ. ಹೇಮಾವತಿ ನದಿ ತೀರದಲ್ಲಿರುವ ಇದು ಕೆ.ಅರ್. ಪೇಟೆಯಿಂದ 20 ಕಿಮೀ ದೂರದಲ್ಲಿದ್ದು, ಹುಣಸೂರಿನಿಂದ 48 ಕಿಮೀ ದೂರದಲ್ಲಿದೆ.
ಈ ದೇವಸ್ಥಾನಕ್ಕೆ ಸುಮಾರು 2500 ವರ್ಷಗಳ ಇತಿಹಾಸವಿದ್ದು, ಗೌತಮ ಮುನಿ ಗಳು ಭೂದೇವಿಯ ವಿಗ್ರಹವನ್ನು ಸ್ಥಾಪಿಸಿದ ಪ್ರತೀತಿ ಇದೆ. ಭೂ ವರಾಹಸ್ವಾಮಿಯ ವಿಗ್ರಹವು 15 ಅಡಿ ಎತ್ತರವಿದ್ದು ಸುಖಾಸನದಲ್ಲಿ ಕುಳಿತಿದ್ದು, ತೊಡೆಯ ಮೇಲೆ 3.5 ಅಡಿಯ ಭೂದೇವಿಯ (ಲಕ್ಷ್ಮಿ) ಯ ವಿಗ್ರಹವೂ ಇದೆ.
ಈ ಪುರಾತನ ದೇವಾಲಯವು ಹೊಯ್ಸಳ ರಾಜ ವೀರ ಬಲ್ಲಾಳ 111, ಸ್ಥಾಪಿಸಲ್ಪಟ್ಟಿದ್ದು , ಇತ್ತೀಚಿನ ವರೆಗೆ ಇದು ಬೆಳಕಿಗೆ ಬಂದಿಲ್ಲ. ಈಗ 15 ಕೋಟಿ ರೂ. ವೆಚ್ಚದಲ್ಲಿ ಜೀರ್ನೋದ್ಧಾರ ಕೆಲಸ ನಡೆಯುತ್ತಿದೆ.
ಮೊನ್ನೆ ಭಾನುವಾರ, ನಾವು, ನಳಿನಿಯ ತಮ್ಮ ಸತೀಶ ಕುಟುಂಬ, ರಾಮಕೃಷ್ಣ ಕವನ, ಸುಜಾತ ಸ್ಮಿತಾ ರೊಂದಿಗೆ ಎರಡು ಕಾರುಗಳಲ್ಲಿ ಸುಮಾರು 12.30 ಗಂಟೆಗೆ ಈ ಸ್ಥಳವನ್ನು ತಲುಪಿದೆವು.
ನೂರಾರು ಮಂದಿ ಭಕ್ತರು, ಬಿಸಿಲಿನ ಕಾವು, ಜೀರ್ನೋದ್ಧಾರಕ್ಕಾಗಿ ಬಂದ ಹಲವಾರು ಶಿಲೆ ಕಲ್ಲುಗಳ ರಾಶಿ, ಈ ಮಧ್ಯೆ ವರಾಹಸ್ವಾಮಿಯ ದರ್ಶನವೂ ಆಯಿತು.
http://www.bhoovarahatemple.com/home.html
ಅಲ್ಲಿಯ ಅನ್ನಗೃಹದಲ್ಲಿ ನಮಗೆಲ್ಲಾ ಬಿಸಿಬೇಳೆ ಬಾತ್ ಮತ್ತು ಮೊಸರನ್ನದ ಪ್ರಸಾದವೂ ಆಯಿತು.
ಭೂದೇವಿ ಕೃತ ಆದಿವರಾಹಸ್ವಾಮಿ ಸ್ತೋತ್ರಂ:
ಭೂವರಾಹ ಸ್ವಾಮಿ ಸ್ತೋತ್ರವಿದು. ಭೂದೇವಿ ತನಗೆ ಬಂದ ಕಷ್ಟದಿಂದ ಕಾಪಾಡುವಂತೆ ಭಗವಂತನನ್ನು ಕೋರಿದಾಗ ಭಗವಂತ ಭೂದೇವಿಯನ್ನು ರಕ್ಷಿಸಿ ಸಕಲ ಇಷ್ಟಾರ್ಥ ಕೊಟ್ಟು ರಕ್ಷಿಸಿದ.
ಈ ಸ್ತೋತ್ರವನ್ನು ಭಕ್ತಿಯಿಂದ ಹೇಳುತ್ತಾ ಹೋದಂತೆ, ಕಷ್ಟಗಳು ಕಡಿಮೆಯಾಗುವುದು.
ಭೂ ವಿವಾದಗಳು ಪರಿಹಾರವಾಗುತ್ತವೆ, ಅಲ್ಲದೇ ಸ್ವಂತ ಮನೆ, ಭೂ ಖರೀದಿ ಯೋಗ ಕೂಡ ಕೂಡಿ ಬರುವುದು. ಇದರ ಜೊತೆ ವರಾಹ ಮಂಡಲ ರಂಗೋಲಿ ಹಾಕಿದರೆ ಬಹಳ ಒಳ್ಳೆಯದು.
ಸ್ತೋತ್ರಮ್
ನಮಸ್ತೇ ದೇವದೇವೇಶ ವರಾಹವದನಾsಚ್ಯುತ | ಕ್ಷೀರಸಾಗರಸಂಕಾಶ ವಜ್ರಶೃಂಗ ಮಹಾಭುಜ ||
ಉದ್ಧೃತಾಸ್ಮಿ ತ್ವಯಾ ದೇವ ಕಲ್ಪಾದೌ ಸಾಗರ ರಾಂಭಸಃ l
ಸಹಸ್ರಬಾಹುನಾ ವಿಷ್ಣೋ ಧಾರಯಾಮಿ ಜಗಂತ್ಯಹಮ್ ||
ಅನೇಕದಿವ್ಯಾಭರಣ ಯಜ್ಞಸೂತ್ರವಿರಾಜಿತ | ಅರುಣಾರುಣಾಂಬರಧರ ದಿವ್ಯರತ್ನವಿಭೂಷಿತ ll
ಉದ್ಯದ್ಭಾನು ಪ್ರತೀಕಾಶ ಪಾದಪದ್ಮ ನಮೋ ನಮಃ |
ಬಾಲಚಂದ್ರಾಭ ದಂಷ್ಟಾಗ್ರ ಮಹಾಬಲಪರಾಕ್ರಮ l
ದಿವ್ಯಚಂದನಲಿಪ್ತಾಂಗ ತಪ್ತಕಾಂಚನಕುಂಡಲ |l ಇಂದ್ರನೀಲಮಣಿಜ್ಯೋತಿಹೇಮಾಂಗದವಿಭೂಷಿ
ವಜ್ರದಂಷ್ಟಾಗ್ರನಿರ್ಭಿನ್ನ ಹಿರಣ್ಯಾಕ್ಷಮಹಾಬಲ |
ಪುಂಡರೀಕಾಭಿತಾಮ್ರಾಕ್ಷ ಸಾಮಸ್ವನಮನೋಹರ ||
ಶ್ರುತಿಸೀಮಂತಭೂಷಾತ್ಮನ್ ಸರ್ವಾತ್ಮನ್ ಚಾರುವಿಕ್ರಮ |
ಚತುರಾನನಶಂಭುಲ್ಯಾಂ ವಂದಿತಾsಯತಲೋಚನ ||
ಸರ್ವವಿದ್ಯಾಮಯಾಕಾರ ಶಬ್ದಾತೀತ ನಮೋ ನಮಃ |
ಆನಂದವಿಗ್ರರ್ಹಾನಂತ ಕಾಲಕಾಲ ನಮೋ ನಮಃ ||
Il ಇತಿ ಶ್ರೀಸ್ಕಂದಪುರಾಣೇ ವೇಂಕಟಾಚಲಮಾಹಾತ್ಮ ಭೂದೇವೀ ಕೃತ ಶ್ರೀಆದಿವರಾಹಸ್ತೋತ್ರಮ್ ll
ಕೃಷ್ಣ...ಕೃಷ್ಣ...ಕೃಷ್ಣ.
ಬರೆದಿರುವುದು ಗುರುವಾರ 23 ಸಪ್ಟಂಬರ 2021
No comments:
Post a Comment