Monday, 3rd January 2022
ಇದನು ಬರೆದವರಿಗೆ ನನ್ನ ಹೃದಯ ಪೂರ್ವಕ ನಮಸ್ಕರಗಳು. ಎಷ್ಟು ಚೆನ್ನಾಗಿ ಬರೆದಿದೆ...ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ..
ರಾಮನಿಗೆ-ಸೀತೆ
ಕೃಷ್ಣನಿಗೆ-ರಾಧೆ
ಶಿವನಿಗೆ-ಪಾರ್ವತಿ
ನಾರಾಯಣನಿಗೆ-ಲಕ್ಷ್ಮೀ
ಮಂತ್ರ ಪಠಣದಲ್ಲಿ- ಗಾಯತ್ರಿ
ಗ್ರಂಥ ಪಠಣದಲ್ಲಿ- ಗೀತಾ
ದೇವರೆದುರಿಗೆ - ವಂದನ, ಅರ್ಚನ, ಪೂಜಾ, ಆರತಿ, ಆರಾಧನಾ.. ಇವರ ಜೊತೆಗೆ ಶ್ರದ್ಧಾ.
ನಮ್ಮ ದಿನಚರಿಯಲ್ಲಿ
ಉದಯಕ್ಕೆ- ಉಷಾ.. ಅರುಣ
ಸಂಜೆಗೆ - ಸಂಧ್ಯಾ
ರಾತ್ರಿಗೆ -ನಿಶಾ,
ಬೆಳಕಿಗೆ - ಜ್ಯೋತಿ, ದೀಪ, ದೀಪಿಕಾ, ಪ್ರಭಾ..
ಬೆಳದಿಂಗಳಿಗೆ - ರಜನಿ
ಸೂರ್ಯಕಿರಣಕ್ಕೆ - ರಶ್ಮಿ, ಕಿರಣ
ಚಂದಿರನಿಗೆ = ಶಶಿ, ಶಶಿಕಲಾ, ಚಂದ್ರಕಲಾ
ಹೆಸರಾಗುವುದಕ್ಕೆ - ಕೀರ್ತಿ
ಕನಸಿಗೆ -ಸ್ವಪ್ನ
ನೋಟಕ್ಕೆ - ನಯನಾ, ನೇತ್ರ..ನಳಿನಿ
ಕೇಳುವುದಕ್ಕೆ -ಶ್ರಾವ್ಯ, ಶ್ರಾವಣಿ,
ಮಾತನಾಡುವುದಕ್ಕೆ - ವಾಣಿ, ವಾಣಿಶ್ರೀ, ಸುಭಾಷಿಣಿ
ಭೂಮಿಗೆ - ವಸುಧಾ, ವಸುಂಧರಾ, ಭುವಿ, ಭುವನೇಶ್ವರಿ
ಹಸು, ಆಕಳಿಗೆ - ನಂದಿನಿ
ಜಗತ್ತಿಗೆ - ಜಗದೀಶ್ವರಿ, ಜಗದಾಂಬೆ
ದೇಶಕ್ಕೆ - ಭಾರತಿ, ಭಾರತಾಂಬೆ
ಕನ್ನಡ ನಾಡಿಗೆ - ಭುವನೇಶ್ವರಿ
ಋತುಗಳಿಗೆ - ಚೈತ್ರ, ವಸಂತ, ಗ್ರೀಷ್ಮ
ಸಮರ್ಪಣೆಗೆ - ಅರ್ಪಣಾ
ಆಹಾರಕ್ಕೆ - ಅನ್ನಪೂರ್ಣ
ನಡೆಯುವುದಕ್ಕೆ - ಹಂಸಾ
ನಗುವಿಗೆ - ಸುಹಾಸಿನಿ..
ಚೆಲುವಿಕೆಗೆ - ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ
ಸುವಾಸನೆಗೆ - ಚಂದನ, ಪರಿಮಳ
ಒಳ್ಳೆಯ ನುಡಿಗೆ - ಸುಭಾಷಿಣಿ
ತೇಜಸ್ಸಿಗೆ - ತೇಜಸ್ವಿನಿ
ಚುಕ್ಕಿಗೆ - ಬಿಂದು, ನಕ್ಷತ್ರ
ಗೆರೆಗೆ - ರೇಖಾ, ಶಶಿರೇಖಾ
ಮುತ್ತಿಗೆ➖ಸ್ವಾತಿ
ಹರಳಿಗೆ - ರತ್ನ
ಮಾದರಿಗೆ - ಸ್ಪೂರ್ತಿ, ಪ್ರೇರಣಾ
ಪ್ರತಿಕ್ರಿಯಿಸುವುದಕ್ಕೆ - ಸ್ಪದಂನಾ
ಕೆಲಸಕ್ಕೆ - ಕೃತಿ, ಕೃತಿಕ
ಇಷ್ಟಕ್ಕೆ - ಪ್ರೀತಿ
ನೀರಿಗೆ - ಗಂಗಾ
ಬಂಗಾರಕ್ಕೆ - ಸುವರ್ಣ, ಕನಕ, ಹೇಮಾ
ಬೆಳ್ಳಿಗೆ - ರಜತ, ರಂಜಿತ
ಚಿತ್ತಾರಕ್ಕೆ - ಚಿತ್ರ
ಊಹೆಗೆ - ಕಲ್ಪನಾ
ನಿಜ ಸಂಗತಿಗೆ - ಸತ್ಯವತಿ..
ಶುದ್ಧತೆಗೆ - ನಿರ್ಮಲ, ಪವಿತ್ರ
ಆಲೋಚನೆಗೆ - ಭಾವನಾ
ಕಣ್ಗಳಿಗೆ - ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
ಶಿಕ್ಷಣಕ್ಕೆ - ವಿದ್ಯಾ
ಬುದ್ಧಿಗೆ, ಚತುರತೆಗೆ - ಪ್ರತಿಭಾ
ಸಂತೋಷಕ್ಕೆ - ಖುಷಿ, ಆನಂದಿನಿ, ಹರ್ಷಲಾ
ಕೋಪಕ್ಕೆ - ಭೈರವಿ, ಕಾಳಿ
ಧೈರ್ಯಕ್ಕೆ - ದುರ್ಗೆ
ಗೆಲುವಿಗೆ - ಜಯಲಕ್ಷ್ಮಿ.. ವಿಜಯಲಕ್ಷ್ಮಿ
ಹೆಸರಾಗುವುದಕ್ಕೆ- ಕೀರ್ತಿ
ಹಾಡಿಗೆ - ಸಂಗೀತ
ಗಾಯನಕ್ಕೆ - ಶೃತಿ, ಪಲ್ಲವಿ, ಕೋಕಿಲ
ನಾಟ್ಯ - ಮಯೂರಿ
ಸಾಹಿತ್ಯ - ಕವಿತಾ, ಕಾವ್ಯ
ನಿಸರ್ಗಕ್ಕೆ - ಪ್ರಕೃತಿ
ರಕ್ಷಣೆಗೆ - ಸುರಕ್ಷಾ
ವಿದ್ಯಾಭ್ಯಾಸಕ್ಕೆ - ವಿದ್ಯಾ
ಸಂಪಾದನೆಗೆ - ಲಕ್ಷ್ಮೀ
ಸ್ಪೂರ್ತಿಗೆ - ಪ್ರೇರಣಾ
ಮೌನಕ್ಕ - ಶಾಂತಿ
ಮಧುರತೆಗೆ - ಮಾಧುರಿ, ಮಂಜುಳ
ಕನಿಕರಕ್ಕೆ- ಕರುಣಾ
ಆಕ್ರೋಶಕ್ಕೆ- ಕಾಳಿ
ವಾತ್ಸಲ್ಯಕ್ಕೆ - ಮಮತಾ
ಆಯುಷ್ಯಕ್ಕೆ - ಜೀವಿತಾ
ಮೋಡಗಳಿಗೆ - ಮೇಘ, ಮೇಘನಾ
ಚಿಮುಕಿಸುವಿಕೆಗೆ - ಸಿಂಚನಾ
ಬಿಳುಪಿಗೆ - ಶ್ವೇತಾ, ಗೌರಿ
ಕಪ್ಪಿಗೆ - ಕೃಷ್ಣೆ
ವಾಸನೆಗೆ - ಪರಿಮಳ
ಹೂವಿಗೆ - ಪುಷ್ಪ, ಸುಮ, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..
ಬಳ್ಳಿಗೆ - ಲತಾ,
ಶುಭಕರ - ಮಂಗಳ, ಸುಮಂಗಳ, ಶುಭಾಂಗಿನಿ
ಒಳ್ಳೆಯ ಮನಸ್ಸಿಗೆ - ಸುಮನ
ಶ್ರೀಮಂತಿಕೆಗೆ - ಐಶ್ವರ್ಯ, ಸಿರಿ
ವಿಸ್ತಾರಕ್ಕೆ-ವಿಶಾಲ, ವೈಶಾಲಿ
ಜೇನಿಗೆ - ಮಧು
ಬಯಕೆಗೆ - ಆಶಾ, ಅಪೇಕ್ಷಾ
ತೀರ್ಮಾನಕ್ಕೆ➖ನಿಶ್ಚಿತ
ಬರಹಕ್ಕೆ - ಲಿಖಿತ
ನೆರಳಿಗೆ - ಛಾಯಾ
ನಿಧಾನಕ್ಕೆ - ಮಂದಾಕಿನಿ
ಹೂ ಗೊಂಚಲಿಗೆ - ಮಂಜರಿ
ಗೌರವಕ್ಕೆ - ಮಾನ್ಯ, ಮಾನ್ಯತಾ
ನದಿಗಳಿಗೆ - ಗಂಗಾ, ಯಮುನಾ, ಸರಸ್ವತಿ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ,
ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು
ಆಕೆಗೆ ಒಂದು..ನಮನಗಳು
No comments:
Post a Comment