ಶನಿವಾರ, 24 ನವಂಬರ 2023
ಶ್ರೀ ವಿನಾಯಕ ದೇವಸ್ಥಾನ, ಅರ್.ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯು ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮ "ಕನ್ನಡ ತೇರು", ಕೆಲವೇ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಂಪನ್ನ ಗೊಂಡಿತು.
ಬೆಂಗಳೂರಿನ ಆರ್ . ಟಿ. ನಗರದ ಶಿವರಾಮ ಕಾರಂತ ವೇದಿಕೆ, ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ- 'ಕನ್ನಡ ತೇರು' ಕಾರ್ಯಕ್ರಮದ ಕೆಲವು ಕ್ಷಣಗಳು. ಕನ್ನಡ- ಮಲಯಾಳಂ ಭಾಷಾ ಅನುವಾದಕ ಸುಧಾಕರನ್ ರಾಮಂತಳಿ ,
ಡಾ ಕೆ ಶರೀಫಾ |
ಸುಧಾಕರನ್ ರಾಮಂತಳಿ |
ಹೇಮಶ್ರೀ ತಂಡದವರಿಂದ ಹಲವು ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದ ನಂತರ, ಸಭಾಕಾರ್ಯಕ್ರಮವನ್ನು ಕಾರ್ಯದರ್ಶಿ ಶಶಿಕಲಾ ಅವರು ನಿರ್ವಹಿಸಿದರು.
ನಾಡಗೀತೆಯ ಪ್ರಾರ್ಥನೆಯಾದನಂತರ ಅತಿಥಿಗಳನ್ನು ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫದ್ಕೆಯವರು ಬರಮಾಡಿಕೊಂಡರು.
ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣದ ನಂತರ ಅತಿಥಿ, ಕನ್ನಡ-ಮಲಯಾಳಂ ಭಾಷಾ ಅನುವಾದಕ, ಸಾಹಿತಿ, ಸುಧಾಕರನ್ ರಾಮಂತಳಿಯವರು ಭಾಷಾ ಅನುವಾದಲ್ಲಿಯ ಸಮಸ್ಯೆಗಳು, ಸುಮಾರು ಮೂವತ್ತಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಅನುವಾದ ಮಾಡಿದ ಶ್ರಮವನ್ನು ಹಂಚಿಕೊಂಡರು.
ವೇದಿಕೆಯ ಗೌರವಾಧ್ಯಕ್ಷ ಶ್ರೀ ಎಸ್. ಅರ್. ವಿಜಯಶಂಕರ್ ಅವರು ಡಾ.ಶರೀಫಾ ಅವರ ಸಾಧನೆ, ಸುಧಾಕರನ್ ಅವರ ಪರಿಶ್ರಮದ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯ ಉಪಾಧ್ಯಕ್ಷ ಶ್ರೀ ವೀರಶೇಖರ ಸ್ವಾಮಿಯವರು ಧನ್ಯವಾದ ಸಮರ್ಪಣೆ ಮಾಡಿದರು.
ಕಾರ್ಯಕಾರಿ ಸಮಿತಿಯ ಸದಸ್ಯೆ ಶ್ರೀಮತಿ ಸತ್ಯಭಾಮ ಮೇಡಂ ಅವರ 50 ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ. ಉಪಹಾರದ ಖರ್ಚನ್ನು ದೇಣಿಗೆಯಾಗಿ ನೀಡಿದರು. ಶ್ರೀ ದೇವರು ಅವರಿಗೆ ಆಯುರಾರೋಗ್ಯ, ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸಲಾಯಿತು.
ಸುದೀರ್ಘ ಸುಂದರ ಬದುಕಿನ ಹಾದಿಯಲ್ಲಿ ನಗುನಗುತ್ತಾ ನಡೆದು ಆದರ್ಶರಾಗಿ,ಮದುವೆಯ ವಾರ್ಷಿಕ ಸುವರ್ಣ ಮಹೋತ್ಸವ ಆಚರಿಸಿಕೊಂಡು ಹಿರಿಯ ದಂಪತಿಗಳಾದ ಸತ್ಯಭಾಮ ಮೇಡಂ ದಂಪತಿಗಳಿಗೆ ಶುಭಾಶಯಗಳು
ಭಗವಂತನ ಕೃಪೆ ಸದಾ ತಮಗಿರಲಿ.
ಸಮಿತಿಯ ಸದಸ್ಯರು, ನಗುಮೊಗದಿ, ಸರಳ ಸಮಚಿತ್ತದ ಆದರ್ಶರು ಆದ ನಿಮ್ಮ ವಾರ್ಷಿಕೋತ್ಸವ ಶುಭ ದಿನ ಬಗ್ಗೆ ಹಾಗೂ ವಿಶೇಷ ದಿನದ ಪ್ರಯುಕ್ತ ಕಾರ್ಯಕ್ರಮದಲ್ಲಿ ತಿಂಡಿ ಪ್ರಾಯೋಜತ್ವದ ಜವಾಬ್ದಾರಿ ವಹಿಸಿಕೊಂಡ ಬಗ್ಗೆ ಮೊದಲೇ ವೇದಿಕೆಯಲ್ಲಿ ತಿಳಿಸಲಾಗಲಿಲ್ಲ.
ಮತ್ತೊಮ್ಮೆ ಹಿರಿಯ ದಂಪತಿಗಳಿಗೆ ಮದುವೆಯ ಸುವರ್ಣ ವಾರ್ಷಿಕೋತ್ಸವದ ಶುಭಾಶಯಗಳು.
ಬರೆದಿರುವುದು 26/11/2023
No comments:
Post a Comment