ಭಾನುವಾರ, ನವಂಬರ್ 5, 2023
ಶ್ರೀ ವಿನಾಯಕ ದೇವಸ್ಥಾನ ಅರ್. ಟಿ. ನಗರ, ಬೆಂಗಳೂರು.
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ , ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕಮಲಶಿಲೆ, ಅವರು ಒಂದು ಸುಂದರವಾದ ಯಕ್ಷಗಾನ "ಯಕ್ಷ ಲೋಕ ವಿಜಯ" ಎಂಬ ಪ್ರಸಂಗವನ್ನು ಆಡಿ ತೋರಿಸಿರುವರು.
ಯಕ್ಷಗಾನ ಒಂದು ಕರಾವಳಿಯ ಪ್ರಸಿದ್ಧ ಬ್ಯಾಲೆ (Dance Drama), ವೇಷ, ಭೂಷಣ, ನೃತ್ಯ, ಸಂಭಾಷಣೆ, ನಟನೆ, ಹಾಸ್ಯ, ಭಾಗವತರಿಂದ ಶಾಸ್ತ್ರಿಯ ಹಾಡುಗಳು, ಚಂಡೆ, ಮದ್ದಲೆ, ಪ್ರಸಂಗದ ಕಥೆಯ ನಿರೂಪಣೆ, ಇತ್ಯಾದಿಗಳಿಂದ ಕೂಡಿದ ಮನರಂಜನೆ ಹಾಗೂ ಪುರಾಣಕ್ಕೆ ಸಂಭಂದ ಪಟ್ಟಂತೆ ಪ್ರಸಂಗ.
ಸುಮಾರು ನಾಲ್ಕು ಗಂಟೆಗಳ ಕಾಲದ ಯಕ್ಷಗಾನ, ನೆರೆದ ಸಭಿಕರನ್ನು ಮನ ಮೆಚ್ಚಿಸಿತು.
ಯಕ್ಷ ಪ್ರದೀಪ ತನ್ನ ಹುಟ್ಟು, ತಂದೆ, ತಾಯಿಯನ್ನು ಹುಡುಕುತ್ತ ಹಲವರು ಸ್ಥಳಗಳಿಗೆ ಪಯಣಿಸಿ, ತನ್ನ ಮೂಲವನ್ನು ಯಕ್ಷ ಲೋಕದಲ್ಲಿ ಕಂಡಿರುವುದನ್ನು ಅದ್ಭುತವಾದ ಕುಣಿತ, ಮಾತುಗಳಿಂದ ಬಹಳ ಆಕರ್ಷಣೀಯವಾಗಿತ್ತು.
ಶ್ರೀ ಕ್ಷೇತ್ರ ಕಮಲಶಿಲೆ ಯಕ್ಷಗಾನ ತಂಡದವರಿಗೆ ಹಾರ್ದಿಕ ಅಭಿನಂದನೆಗಳು.
Posted 6/11/2023
No comments:
Post a Comment