ಸುಭಾಷಿತ ನುಡಿ ಮುತ್ತುಗಳು - 6
ಶೃೀ ಹರಿ ಗುರುಭ್ಯೋ ನಮಃ
1. ಅವಮಾನಗಳನ್ನು ಎದುರಿಸುವ ಸಾಮರ್ಥ್ಯವಿದ್ದರೆ.. ಸನ್ಮಾನ ಗಳನ್ನು ಸ್ವೀಕರಿಸುವ ಯೋಗ್ಯತೆ ಬಂದೇ ಬರುತ್ತದೆ...
**************************************
2. ಬಾಯಿಂದ ಜಾರಿದ ಮಾತು, ಕೈಯಿಂದ ಜಾರಿದ ಅವಕಾಶ, ಹಾರಿ ಹೋದ ಪಕ್ಷಿ, ಕಳೆದುಹೋದ ಕಾಲ ಎಂದೆಂದಿಗೂ ಹಿಂದಿರುಗಿ ಬರುವುದಿಲ್ಲ.
************************************
3. ಸ್ವಾರ್ಥದ ಇನ್ನೊಂದು ರೂಪವೇ ಅಹಂಕಾರ. ಅಹಂಕಾರ ತುಂಬಿದ ವ್ಯಕ್ತಿ ಎಂದಿಗೂ ಕೆಡುಕನ್ನೇ ಮಾಡುತ್ತಾನೆ. ಆದರೆ ಕೊನೆಗೆ ಅವನ ಅಹಂಕಾರವೇ ಅವನ ಅಸ್ತಿತ್ವವನ್ನು ಕೂಡಾ ನಾಶ ಮಾಡಿ ಬಿಡುತ್ತದೆ. ಅಹಂಕಾರವನ್ನು ಬೆಳೆಸಿಕೊಳ್ಳುವ ವ್ಯಕ್ತಿ ಎಂದಿಗೂ ಸಂತಸ ಹೊಂದುವುದಿಲ್ಲ. ಜೀವನವನ್ನು ಹಾಳುಮಾಡಿ ಕೊಳ್ಳುತ್ತಾನೆ..!
*************************************
4. ತಿಳುವಳಿಕೆ ಇಲ್ಲದವನನ್ನು ಒಪ್ಪಿಸುವುದು ಸುಲಭ ಹೆಚ್ಚು ತಿಳಿದವನನ್ನು ಒಪ್ಪಿಸುವುದು ಇನ್ನೂ ಸುಲಭ. ಆದರೆ ಸ್ವಲ್ಪ ತಿಳಿದುಕೊಂಡು ಅಹಂಕಾರ ಪಡುವ ಮನುಷ್ಯನನ್ನು ದೇವರಿಂದ ಕೂಡ ಒಪ್ಪಿಸಲು ಸಾಧ್ಯವಿಲ್ಲ.
*****************************************
5. ಬದುಕಿನಲ್ಲಿ ಸಂತುಷ್ಟರಾಗಿರಿ, ಆದರೆ ಸಂತೃಪ್ತರಾಗಬೇಡಿ,* ಏಕೆಂದರೆ ಸಂತೃಪ್ತರಾದರೆ ಬೆಳವಣಿಗೆ ನಿಂತುಬಿಡುತ್ತದೆ.
*****************************************
6. ಆಗಿ ಹೋಗಿರುವುದನ್ನು ಸರಿಪಡಿಸಲು ಪ್ರಯತ್ನಿಸಬೇಡಿ. ಅದು ಅಸಾಧ್ಯ... ಮುಂದೆ ಮಾಡ ಬೇಕಾದುದನ್ನು ಸರಿಯಾದ ರೀತಿಯಲ್ಲಿ ಯೋಚಿಸಿ ಮಾಡಿ.
***************************************
7. ಸಾಗುವ ದಾರಿ ಹೇಗೇ ಇರಲಿ.. ಇಡುವ ಹೆಜ್ಜೆ ಸರಿಯಾಗಿರಲಿ... ಕೋಪ ಅನ್ನೋದು ಒಬ್ಬರನ್ನು ಸೇವಿಸಿದರೆ ನಗು ಅನ್ನೋದು ನೂರು ಜನರ ಮನಸ್ಸನ್ನು ಗೆಲ್ಲುತ್ತದೆ..
**************************************
8. ಬದುಕಿನಲ್ಲಿ ಭಯ ಬಲ ವಾದಾಗ ಬದುಕು ಭಾರವಾಗುತ್ತದೆ. ಬದುಕಿಗೆ ಭರವಸೆ ಬಲವಾದಾಗ ಬದುಕು ಬಂಗಾರ ವಾಗುತ್ತದೆ.
**************************************
9. ವಾದ ಮಾಡುವ ಬದಲು ಸಂವಾದ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾದದಲ್ಲಿ ನಮ್ಮ ಅಹಂಕಾರವನ್ನು ಪ್ರದರ್ಶಿಸುತ್ತೇವೆ, ಸಂವಾದದಲ್ಲಿ ಬೇರೆಯವರಿಂದ ಮಾಹಿತಿ ಸ್ವೀಕರಿಸುತ್ತೇವೆ...!!
**************************************
10. ಕನಸುಗಳು ನನಸಾಗಿಲ್ಲ ಎಂದು ಯಾವತ್ತೂ ಪ್ರಯತ್ನ ಪಡುವುದನ್ನ ನಿಲ್ಲಿಸ ಬಾರದು.. ಏಕೆಂದರೆ ಕೆಲವೊಮ್ಮೆ ಬಾಡಿದ ಗಿಡಗಳಿಗೆ ನೀರುಣಿಸುವುದರಿಂದ ಮತ್ತು ಚಿಗುರೊಡೆದು ಬದುಕುತ್ತದೆ.
****************************************
11. ಮನುಷ್ಯರಿಗೆ ಮನುಷ್ಯರ ಮೇಲೆ ವಿಶ್ವಾಸ ಹೋದಾಗ 'ಬಾಗಿಲು' ಹುಟ್ಟಿದ್ದು. ಆ ವಿಶ್ವಾಸಕ್ಕೆ ಆಘಾತ ಆದಾಗ 'ಬೀಗ' ಹುಟ್ಟಿಕೊಂಡಿತು. ಆ ವಿಶ್ವಾಸ ಪೂರ್ತಿಯಾಗಿ ಸತ್ತಾಗ 'ಸಿಸಿಟಿವಿ' ಕಾಣಿಸಿ ಕೊಂಡಿತ್ತು.
***********************************
12. ಸುಂದರವಾದ ದೇಹ ಒಂದು ನಿರ್ದಿಷ್ಟ ವಯಸ್ಸಿನ ವರೆಗೆ ಮಾತ್ರ ಇರುತ್ತದೆ. ಆದರೆ ಸುಂದರವಾದ ಮನಸ್ಸು ಸಾಯುವ ವರೆಗೆ ಜೊತೆಗಿರುತ್ತೆ...
***********************************
13. "ಸಂತೋಷ ಎನ್ನುವುದು ಹತ್ತು ಸಾವಿರ ಖರ್ಚು ಮಾಡಿ ಹತ್ತು ಊರು ತಿರುಗಿದರೆ ಬರುವುದಿಲ್ಲ.
ನಮ್ಮವರು ಎಂದು ಕೊಳ್ಳುವವರ ಜೊತೆ ಹತ್ತು ನಿಮಿಷವಾದರೂ ಮನಸ್ಸು ಬಿಚ್ಚಿ ಮಾತನಾಡಿದರೆ ನಿಜವಾದ ಸಂತೋಷ ಸಿಗುತ್ತದೆ... "
**********************************
14. ಕೆಟ್ಟವರಾದ್ರೂ ಪರವಾಗಿಲ್ಲ, ನೇರ ಮಾತನಾಡಿ. ಯಾಕಂದ್ರೆ ನಟಿಸುವ ಸಂಬಂಧಗಳು ಯಾವತ್ತೂ ಶಾಶ್ವತವಲ್ಲ
*********************************
15. ಸಮಯ ಹಾಗೂ ತಿಳುವಳಿಕೆ, ಈ ಎರಡೂ ಒಂದೇ ಬಾರಿಗೆ ಸಿಗುವುದು ಅಪರೂಪ. ಯಾರಿಗೆ ಸಿಗುವುವೋ ಅವರೆ ಭಾಗ್ಯ ವಂತರು. ಯಾಕೆಂದರೆ... ಸಮಯ ಇರುವಾಗ ತಿಳುವಳಿಕೆ ಇರುವುದಿಲ್ಲ, ತಿಳುವಳಿಕೆ ಬಂದ ನಂತರ ಸಮಯವೇ ಇರುವುದಿಲ್ಲ.
***************************************
16. ಜೀವನ ಸಂತೋಷವಾಗಿರಬೇಕೆಂದರೆ ಹಣ ಆಸ್ತಿ, ಅಂತಸ್ತು, ಅಧಿಕಾರ ಅಂದ-ಚಂದ ಮುಖ್ಯವಲ್ಲ. ಹೊಂದಿಕೊಳ್ಳುವ ಮನಸ್ಸು ಒಳ್ಳೆಯ ಮಾನವೀಯತೆ, ಉತ್ತಮ ಗುಣ ನಡತೆ ಇದ್ದರೆ... ಎಂತಹ ಸಂದರ್ಭ ಬಂದರೂಸಂತೋಷವಾಗಿರಬಹುದು
**************************************
17. ನಮ್ಮನ್ನು ಎಷ್ಟು ಹೃದಯಗಳು ಪ್ರೀತಿಸುತ್ತೇವೆ ಅನ್ನೋದು
ಮುಖ್ಯವಲ್ಲ. ಯಾವ ಹೃದಯಕ್ಕೆ ನಮ್ಮ ಪ್ರೀತಿ ಅರ್ಥಮಾಡಿಕೊಳ್ಳುವ ಗುಣ ಇದೆ ಅನ್ನೋದು ಮುಖ್ಯ.
*****************************************
18. ಪ್ರತಿ ದಿನ ಆರಂಭ ಆಗೋದು ಕೆಲವು ನಿರೀಕ್ಷೆಗಳೊಂದಿಗೆ, ಪ್ರತಿ ದಿನ ಮುಗಿಯೋದು ಕೆಲವು ಅನುಭವಗಳೊಂದಿಗೆ.
***************************************
19. ಮೌನವು ಒಂದು ಸುಂದರವಾದ ಭಾಷೆ. ನಮ್ಮಲ್ಲಿ ಎಷ್ಟು ಬುದ್ದಿವಂತಿಕೆ ಯ ಮಾತುಗಳು ಇದ್ದರೂ ಕೂಡ....
ಕೆಲವೊಂದು ಸಮಸ್ಯೆಗಳಿಗೆ ಪರಿಹಾರ "ಮೌನ" ಮಾತ್ರ...
*****************************************
20. ಮಾತು ಮುಗಿದಿರಬಹುದು, ಪ್ರೀತಿ ಸಿಗದಿರಬಹುದು, ಸ್ನೇಹ ಕೈ ಕೊಟ್ಟಿರುವುದು, ಸಂಬಂಧಗಳು ಕಡೆಗಣಿಸಿರಬಹುದು. ಆದರೆ ನೆನಪಿಡಿ; ಯಾರಿಲ್ಲದಿದ್ದರೂ ಜೀವನ ಸಾಗೇ ಸಾಗುತ್ತದೆ.
******************************************
21. ಸಮಯ ಹಾಗೂ ಸಂದರ್ಭ ಎರಡಕ್ಕೂ ವ್ಯತ್ಯಾಸ ಇದೆ. ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ. ಆದರೆ..... ಸಂದರ್ಭ ಅವರ ನಿಜವಾದ ಮುಖವನ್ನು ಪರಿಚಯಿಸುತ್ತದೆ....
******************************************
22. ಸರಳತೆ ಎಂಬುದು ಸಾಧಾರಣ ವಿಷಯವಲ್ಲ, ಅದು ನಾವು ಗಳಿಸಿದ ಜ್ಞಾನ ಮತ್ತು ನಾವು ಕಲಿತ ಸಂಸ್ಕಾರಗಳ ಫಲ ವಾಗಿರುತ್ತದೆ.
******************************************
23. ಅತಿಯಾಗಿ ಮಾತನಾಡಿದರೆ ವಿವಾದ... ಅನಾವಶ್ಯಕವಾಗಿ ಮಾತನಾಡಿದರೆ ಅವಮಾನ....
ಅವಶ್ಯಕತೆ ಇದ್ದಷ್ಟೇ ಮಾತನಾಡಿದರೆ ಗೌರವ....
***************************************
24. ಪರಿವಾರದೊಂದಿಗೆ ತಾಳ್ಮೆಯಿಂದ ಇದ್ದರೆ ಅದೇ ಪ್ರೀತಿ, ಬೇರೆಯವರೊಂದಿಗೆ ತಾಳ್ಮೆಯಿಂದ ಇದ್ದರೆ ಅದೇ ಗೌರವ, ಸ್ವತಃ ತಾಳ್ಮೆಯಿಂದ ಇರುವುದೆಂದು ಆತ್ಮ ವಿಶ್ವಾಸ, ಭಗವಂತನ ಮುಂದೆ ತಾಳ್ಮೆಯಿಂದ ಇರುವುದು ಅದು ನಂಬಿಕೆ, ಪ್ರತೀ ಹೆಜ್ಜೆಗೂ ತಾಳ್ಮೆ ಬೆಳೆಸಿದರೆ ಜೀವನ ಸುಂದರ.
*****************************************
25. ಗಿಡದ ಹೂವು ಯಾರನ್ನೂ ಕೇಳಿ ಅರಳುವುದಿಲ್ಲ, ನದಿಯ ನೀರು ಯಾರನ್ನೂ ಕೇಳಿ ಹರಿಯುವದಿಲ್ಲ, ಬಾನಾಡಿಗಳು ಯಾರನ್ನೂ ಕೇಳಿ ಹಾರುವುದಿಲ್ಲ. ಆದರೆ ಮನುಷ್ಯ ಏಕೆ ತನ್ನಿಷ್ಟದಂತೆ ಬದುಕಲು ಹಿಂಜರಿಯುವವನು?
***************************************
26. ಗೆದ್ದವರ ಸ್ನೇಹಕ್ಕಿಂತ ಸೋತವರ ಸ್ನೇಹ ತುಂಬಾ ಒಳ್ಳೇದು.... ಗೆ ದ್ದವರಲ್ಲಿ ಅಹಂಕಾರ ವಿದ್ದರೆ....
ಸೋತ ವರಲ್ಲಿ ಮಾನವೀಯತೆ ಇರುತ್ತದೆ..
************************************
27. ನಮ್ಮ ದೈನಂದಿನ ಜೀವನ ಯಾವತ್ತೂ ಒಂದೇ ರೀತಿ ಇರುವುದಿಲ್ಲ. ಒಂದು ದಿನ ಸಂತಸ ಮತ್ತು ಇನ್ನೊಂದು ದಿನ ಬೇಸರ. ಸಂತಸ ಇದ್ದಾಗ ಅಹಂಕಾರದಿಂದ ವರ್ತಿಸಬಾರದು. ಬೇಸರವಿದ್ದ ದಿನ ಭರವಸೆಯನ್ನು ಕಳೆದು ಕೊಳ್ಳಬಾರದು.
**************************************