Wednesday, March 20, 2024

ನಾವು ಮಾಡಿದ ತಪ್ಪುಗಳು - ಬೆಂಗಳೂರು.

 21/3/2024 

ನಾವು ಮಾಡಿದ ತಪ್ಪುಗಳು - ಬೆಂಗಳೂರು.


ರೋಡಲ್ಲಿ ಮುಳುಗಿದಾ ಬೈಕು ಕಾರು......

ಇದು ನಿನ್ನ ತಪ್ಪು, ಇದು ಅವನ ತಪ್ಪು ಎಂದು ಒಬ್ಬರನ್ನೊಬ್ಬರು ಬೈಯುತ್ತಾ....

ವರುಣ ರಾಕ್ಷಸ ಎಂದು ಮಲೆರಾಯನ್ನನ್ನು ಕರೆಯುತ್ತಾ....


ಮರೆತೇ ಬಿಟ್ಟರು 
ತಾವು ಮಾಡಿದ್ದ ತಪ್ಪುಗಳನ್ನು.....

ಅ ತಪ್ಪುಗಳ ಲೆಕ್ಕ ಇಲ್ಲಿಗೆ ಕೇಳಿ.....ಸ್ವಲ್ಪ ಕೇಳಿ....

ಸಾರಕ್ಕಿ ಅಗ್ರಹಾರ ಕೆರೆ ಹೋಗಿ , ಜೆ.ಪಿ ನಗರ ಫೋರ್ತ್ ಫೇಸ್ ಆಯ್ತು....

ಚಿನ್ನಗಾರ  ಕೆರೆ ಹೋಗಿ, ಈಜಿಪುರ ಆಯ್ತು.....

ತಲಘಟ್ಟಪುರ ಕೆರೆ ಹೋಗಿ, ಕರ್ನಾಟಕ ಗಾಲ್ಫ್ ಅಸೋಸಿಎಶನ್ ಆಯ್ತು....

ದೊಮ್ಮಲೂರು ಕೆರೆ ಹೋಗಿ, ದೊಮ್ಮಲೂರು ಸೆಕೆಂಡ್ ಸ್ಟೇಜ್ ಆಯ್ತು....

ಕದೆರೆನಹಳ್ಳಿ ಕೆರೆ ಹೋಗಿ, ಬನಶಂಕರಿ ಸೆಕೆಂಡ್ ಸ್ಟೇಜ್ ಆಯ್ತು.....

ರಾಮಶೆಟ್ಟಿ ಕೆರೆ ಹೋಗಿ, ಮಿಲ್ಕ್ ಕಾಲನಿ  ಆಯ್ತು .....

ಅಗಸನ ಕೆರೆ ಹೋಗಿ, ಗಾಯತ್ರಿ ದೇವಿ ಪಾರ್ಕ್ ಆಯ್ತು.....

ಕೆತಮಾರಣ ಕೆರೆ ಹೋಗಿ, ರಾಜಾಜಿನಗರ ಆಯ್ತು.....

ಧರ್ಮಾಂ ಬುಧಿ ಕೆರೆ ಹೋಗಿ, ಕೆಂಪೇಗೌಡ ಬಸ್ ಸ್ಟಾಂಡ್ ಆಯ್ತು.....

ಸಂಪಿಗೆ ಕೆರೆ ಹೋಗಿ, ಕಂಟೀರವ ಸ್ಟೇಡಿಯಂ ಆಯ್ತು...

ಕೋರಮಂಗಲ ಕೆರೆ ಹೋಗಿ, ನೇಶನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಆಯ್ತು.....

ಸೊನ್ನೇನಹಳ್ಳಿ ಕೆರೆ ಹೋಗಿ, ಆಸ್ಟಿನ್ ಟೌನ್ ಆಯ್ತು.....

ಹೆಣ್ಣೂರು ಕೆರೆ ಮಾಯವಾಗಿ, ನಾಗವಾರ ಆಯ್ತು....

ಕೊಟ್ಟೂರು ಕೆರೆ ಹೋಗಿ, ರಾಜರಾಜೇಶ್ವರಿ ಲೇಔಟ್ ಆಯ್ತು.....

ಪರಂಗಿಪರ ಕೆರೆ ಹೋಗಿ, ಎಚ್. ಎಸ್ ಅರ್. ಲೇಔಟ್ ಆಯ್ತು.....

ಕುರುಬರ ಕೆರೆ ಹೋಗಿ, ಬಸವೇಶ್ವರ ನಗರ ಲೇಔಟ್ ಆಯ್ತು...

ಇದರ ಲಿಸ್ಟು ಇನ್ನೂ ಮುಗಿದಿಲ್ಲ....


ಮನುಷ್ಯ ಅವನ ಆಸೆಗಳನ್ನು ತೀರಿಸಿಕೊಳ್ಳಲು , ಪ್ರುಕೃತಿ ಜತೆಗೆ ಅವನು ಮಾಡಿದ ದುರಾಚಾರ ದುರ್ವರ್ತನೆ..

ಇವತ್ತು ಅವನಿಗೆ ಪಾಠ ಕಲಿಸ್ತಾ ಇದೆ.....

ಆದರೆ ಈ ಪಾಥಾನ ನಾವು ಕಲಿಯೋಕೆ  ಇನ್ನೂ ಸಿದ್ದರಾಗಿದೇವೆ ಅನ್ನೋ ಡೌಟು ಇನ್ನೂ ಹಾಗಯೇ ಇದೆ....

ರಾಷ್ಟ್ರ ಧರ್ಮ.......

ವಾತ್ಸಾಪ್ ನಿಂದ.... 21/3/2024 


No comments:

Post a Comment