Wednesday, September 17, 2025

HAPPY BIRTHDAY - NARENDRA MODI

 Wednesday, September 17, 2025


ಉದಯವಾಣಿ ಪತ್ರಿಕೆಯ ವಿಶೇಷ ಪುರವಣಿ 17/9/2025 


ನೆಚ್ಚಿನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಯವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರಿ ನೂರಾರು, ಸಾವಿರಾರು ಲೇಖನಗಳು ಪ್ರಕಟವಾಗಿದೆ. 

Look at these old hands carefully, zoom in, who do you remember? Your father or grandfather?  Do you remember what they were doing at Modi's age? Most people's answer would be, "rest". Or, otherwise, they may be busy making a living for their families.  Senior citizens usually retire after 60 years. But this man is tirelessly working 24×7 to rebuild a nation looted and plundered for over 1000 years i.e "India". That too without any desire for reward or appreciation.  How many of us will be able to lead such a life? So, look carefully at wrinkles of these hands. See what patience is. See what penance is. See what perseverance is.This picture speaks for itself.  An extraordinary man who has breathed every ounce of air dreaming to restore lost glory and prosperity of India.  Rather than praising him, after he is gone, let's appreciate this person's efforts and achievements while he is still alive.  
Leaving politics aside, let's stand firm with this pure heart, clear mind and a noble soul without prejudice. 🇮🇳🇮🇳

ಇದರಲ್ಲಿ ಕಾದಂಬರಿಕಾರ ಸಂತೋಷ ಕುಮಾರ್ ಮೇಹೆಂದಲೆ  ಅವರ ಫೇಸ್ ಬುಕ್ ನಲ್ಲಿ ಬರೆದ ಲೇಖನ ಇಲ್ಲಿ ಕಾಪಿ ಮಾಡಿರುವೆ. 

ಇವರ ಕಾಲದಲ್ಲೇ ನಾವೂ ಭರತವರ್ಷದಲ್ಲಿ ಇದ್ವಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ,
ನೀವು ಟ್ಯಾಕ್ಸ್ ಕಿತ್ಕೊಂಡ್ರಿ ಬೇಜಾರಿಲ್ಲ..
ನೀವು ಜಿ.ಎಸ್.ಟಿ ತಂದ್ರಿ ನಾನು ಸುಮ್ಮನೆ ಇದ್ದೆ.
ನೀವು ನೋಟೆ ಕಿತ್ಕೊಂಡ್ರಿ - ಆದರೆ ಒಂದು ಕಾರ್ಡು ಕೈಗಿಟ್ಟು ಹೋಗು ಇದ್ರಲ್ಲಿ ಲಕ್ಷ ರೂಪಾಯಿ ಇದೆ ಎಂದು ಧೈರ್ಯ ಕೊಟ್ರಿ..
ನೀವು ರೋಡ್ ರೋಡ್ ಗೆ ದುಡ್ಡು ಕೇಳಿದ್ರೂ .. ರೋಂಯ್ ಎಂದು ನೂರಾರು ಕಿ.ಮೀ. ಸ್ಪೀಡ್ ನಲ್ಲಿ ಹೋಗೋ ಆಸೆ ತಿರ್ಸಿದ್ರಿ.. ( ಇದಕ್ಕಾಗಿ ನಾನು ಫಾರಿನ್ ಹೋಗೋದ್ ತಪ್ಸಿದ್ ನಿಮ್ಮ ಬಗೆ ಪ್ರೀತಿಯ ಜಗಳಗಳಿವೆ )
ನೀವು ಚಂದ್ರ ಮಂಗಳ ಎಂದು ಕತೆ ಹೇಳ್ತೀದಿರಿ ಅಂದರೆ ಅಲ್ಲಿದೆಲ್ಲ ಪೋಟೊ ನೇ ಕೈಗಿಟ್ರಿ,
ಪಾಕಿಸ್ತಾನ ಬಡಿಯೋದಕ್ಕೆ ನಮ್ಮವರಿಗೆ ನರನೇ ಇಲ್ವಾ ಎಂದು ಈ ದೇಶದ ಸಾಮಾನ್ಯ ಹಲುಬುವಾಗ, ಪಾಕ ಅಲ್ಲ ಅಲ್ಲೆಲ್ಲೋ ಇದ್ದ ಅಮೇರಿಕಾ ಕೂಡಾ ಮುಟ್ಟಿ ನೋಡಿಕೊಳ್ಳುವಂತೆ ಅವರ ಕುಂಡೆ ಬುಡಕ್ಕೆ ನೀವು ಮಿಸೈಲ್ ನುಗ್ಸಿದ್ರಿ...
ಲಕ್ಷಾಂತರ ಜನ ಸತ್ತೆ ಹೋಗಿದ್ರೂ ಆಗದ ಬಾಲ ರಾಮನ್ನ ಕೈ ಹಿಡಿದು ತಂದು ಮನೆಯೊಳಗೆ ಕೂರಸಿದ್ರಿ..
ಈಗ ದಿನಕ್ಕೆ ಲಕ್ಷ ಜನರನ್ನ ಆ ಮಂದಿರಕ್ಕೆ ನುಗ್ಗಸ್ತಾ ಇದೀರಿ..
ಹೀಗೆ ಬರೆದರೆ ನಾನು ನನ್ನ ಕಾದಂಬರಿ ಬರೆಯೋ ಕೆಲ್ಸ ಬಿಡಬೇಕಾದಷ್ಟಿದೆ....... ಆದರೂ
ದೂರ ಇದ್ದಾಗ ಏನೇ ಇವರ ಬಗ್ಗೆ ಕಾರಿಕೊಂಡರೂ, ಎದುರಿಗೆ ಬರ್ತಿದ್ದಂತೆ ಎಂಥೆಂಥ ‘ಚೀಪ್ ಮಿನಿಸ್ಟರ್’ ಗಳೂ ಕೂಡಾ ಬಗ್ಗಿ ಹಲ್ಕಿರಿದು, ಕೈಗೆ ಬೊಕ್ಕೆ ಕೊಡುವಂತೆ ಮಾಡಿದ,
ಬರೀ ಇವರ ಪ್ರಸೆನ್ಸ್ ನಲ್ಲಿ ಒಂದಷ್ಟು ಹೊತ್ತು ಇವರ ಜೊತೆಗೆ ಇರ್ಬೇಕಿತ್ತಲ್ವಾ ಎಂದು ಎಂಥೆಂಥಾ ಪರ್ಸನಾಲಿಟಿಗಳೂ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ,
ಅರ್ಥ. ಧರ್ಮ, ಮೋಕ್ಷ ಮತ್ತು ವಿಜ್ಞಾನ ಇವುಗಳ ಬ್ಲೆಂಡ್ ಮಾಡುವ ಅದನ್ನೆಲ್ಲ ನಮ್ಮಿಂದಲೂ ಮಾಡಿಸುವ ಅಪರೂಪದ ದೂರದರ್ಶಿ ನಾಯಕ ..
ಶ್ರೀ ನರೆಂದ್ರ ಮೋದೀಜಿ ನೀವು ಮುಂದಿನ 75  ವರ್ಷ ಕೂಡಾ ಪ್ರಧಾನಿಯಾಗಿ ಈ ದೇಶದ ಮತ್ತು ನನ್ನ ಕನಸಿನ ದಾಖಲೆ ಮಾಡಿ ಎಂದು ಇವತ್ತು ಬರ್ಥಡೆ ಅಲ್ವಾ ..
ತಥಾಸ್ತು ಅನ್ನಿ ಎಂದು ಕೋರಿಕೊಳ್ಳುತ್ತ.









ಶ್ರೀ ದೇವರು ಅವರನ್ನು ಆಯುಸ್ಸು, ಆರೋಗ್ಯವನ್ನಿತ್ತು  ಸದಾ ಕಾಪಾಡಲಿ. 

Posted 18/9/2025






No comments:

Post a Comment