Sunday, January 16, 2022

ಅಜ್ಜಯ್ಯನ ಮನೆ - ಬಿರ್ತಿ ಸಾಲಿಕೇರಿ

 ಜನವರಿ 17, 2022 

ಶೋಭಾಳ ಬರಹಗಳು  (ನೆನಪುಗಳು)


ನಾನು ಪಿಯುಸಿ ಯ ಎರಡು ವರ್ಷಗಳನ್ನು ಅಜ್ಜಯ್ಯನ ಮನೆಯಲ್ಲಿದ್ದು ಕಲಿತದ್ದು. ಆಗ ಆ ಮನೆಯಲ್ಲಿ ಇದ್ದದ್ದು ಅಜ್ಜಯ್ಯ, ನಾಗವೇಣಿಯತ್ತೆ, ಅವರ ಇಬ್ಬರು ಮಕ್ಕಳಾದ ನಾಗರಾಜ, ನಟರಾಜ, ಕಾಶತ್ತೆ, ನನ್ನಣ್ಣ ಶ್ರೀಕಾಂತ ಹಾಗೂ ನಾನು. ನನ್ನ ಅಜ್ಜಯ್ಯ ಹಳೆಯ ಕಾಲದವರಾದ ಕಾರಣ ಮನೆಯಲ್ಲಿ ಸೀಮಿತ ರೀತಿಯ ಅಡುಗೆ - ಬೆಳಗಿನ ತಿಂಡಿಗೆ ಇಡ್ಲಿ, ದೋಸೆ, ಅವಲಕ್ಕಿ… ಹೀಗೆ ಕೆಲವು ಆಯ್ದ ತಿಂಡಿಗಳು, ಮಧ್ಯಾಹ್ನಕ್ಕೆ ಕೊಚ್ಚಕ್ಕಿ ಅನ್ನ, ಸಾಂಬಾರು ಅಥವಾ ಸಾರು, ತಂಬುಳಿ, ಗೊಜ್ಜು, ಪಲ್ಯ ಇವುಗಳಲ್ಲಿ ಯಾವುದಾದರೊಂದು ಮತ್ತು ನೀರು ಮಜ್ಜಿಗೆ. ಬೆಳಗಿನ ತಿಂಡಿ ಉಳಿದರೆ ಅದೇ ಸಂಜೆಯ ತಿಂಡಿ. ಇಲ್ಲದಿದ್ದರೆ ಬೇರೇನು ತಿಂಡಿ ಮಾಡುತ್ತಿರಲಿಲ್ಲ. ರಾತ್ರಿಗೆ ಮಧ್ಯಾಹ್ನ ಮಾಡಿದ ಉಳಿದ ಅಡುಗೆ. ಶ್ರಾದ್ಧ ಹಾಗೂ ಹಬ್ಬದ ದಿನಗಳಲ್ಲಿ ಪಾಯಸ, ವಡೆ ಇಂತಹ ವಿಶೇಷ ತಿನಿಸುಗಳು ಲಭ್ಯ 😊
ರಾತ್ರಿ ಉಂಡು ಉಳಿದ ಕೊಚ್ಚಕ್ಕಿ ಅನ್ನವನ್ನು ನೀರಿಗೆ ಹಾಕಿಡುತ್ತಿದ್ದರು. ಅದನ್ನು ಹೆಚ್ಚಾಗಿ ಕಾಶತ್ತೆ ಉಣ್ಣುತ್ತಿದ್ದರು. ಇಲ್ಲವೇ ನಾವು ಅದನ್ನು ನೀರಿನಿಂದ ಹಿಂಡಿ ತೆಗೆದು ಮಜ್ಜಿಗೆಯಲ್ಲಿ ಕಲೆಸಿ, ಒಂದು ತುಂಡು ಉಪ್ಪಿನಕಾಯಿ ಅದರ ಮೇಲಿರಿಸಿ ಶಾಲೆಗೆ ಮಧ್ಯಾಹ್ನದ ಬುತ್ತಿ ಮಾಡಿಕೊಂಡು ಒಯ್ಯುತ್ತಿದ್ದೆವು.
ಈ ನೀರಿನಲ್ಲಿ ಹಾಕಿಟ್ಟ ಕೊಚ್ಚಕ್ಕಿ ಅನ್ನಕ್ಕೆ ಅಡಗಾಯಿ ಉಪ್ಪಿನಕಾಯಿ ಸೇರಿಸಿ ಮೇಲೊಂದಿಷ್ಟು ಕೊಬ್ಬರಿ ಎಣ್ಣೆ ಹಾಕಿಕೊಂಡು ತಿಂದರೆ ಮಹದಾನಂದ. ಬೇರೆ ಉಪ್ಪಿನಕಾಯಿ ಅಷ್ಟಾಗಿ ಈ ಅನ್ನಕ್ಕೆ ಸೆಟ್ ಆಗುತ್ತಿರಲಿಲ್ಲ. ಏಕೆಂದರೆ ಅಡಗಾಯಿ ಉಪ್ಪಿನಕಾಯಿಗೆ ಅದರದ್ದೇ ಆದ ವಿಶಿಷ್ಟ ಸ್ವಾದವಿದೆ. ಗೊರಟಾದ ಹುಳಿ ಮಾವಿನಕಾಯಿಯನ್ನು ತೆಳ್ಳಗೆ ಕತ್ತರಿಸಿ ಕುದಿಯುತ್ತಿರುವ ಉಪ್ಪು ನೀರಿನಲ್ಲಿ ಒಂದರೆಘಳಿಗೆ ಕುದಿಸಬೇಕು. ಮಸಾಲೆಗೆ ಅಗತ್ಯ ಇರುವಷ್ಟು ಮೆಂತೆ ಹಾಗೂ ಒಣ ಮೆಣಸನ್ನು ಹುರಿದು ಪುಡಿ ಮಾಡಿಕೊಂಡು ತಣಿದ ಉಪ್ಪು ನೀರಿಗೆ ಹಾಕಿ ಬೆರೆಸಬೇಕು. ಅದರ ಮೇಲೊಂದಿಷ್ಟು ಇಂಗನ್ನು ಹಾಕಬೇಕು. ಈ ಉಪ್ಪಿನಕಾಯಿಯನ್ನು ಬಹಳ ದಿನಗಳ ಕಾಲ ಇಡಲು ಬರುವುದಿಲ್ಲ. ಆದಷ್ಟು ಬೇಗನೆ ಖಾಲಿ ಮಾಡಬೇಕು. ಮೆಂತೆಯ ಘಮವಿರುವ ಅಡಗಾಯಿ ಉಪ್ಪಿನಕಾಯಿಯನ್ನು ಕೊಚ್ಚಕ್ಕಿಯ ತಂಗುಳಿಗೆ ಕಲೆಸಿ ತಿಂದರೆ ಸ್ವರ್ಗ ಸುಖ ಸಿಗುತ್ತಿತ್ತು. 
ಆ ದಿನಗಳೇ ಹಾಗೆ. ಇದ್ದದ್ದರಲ್ಲೇ ಏನಾದರೂ ದೊಂಬರಾಟ ಮಾಡಿ ಹೊಸ ರುಚಿ ಭರಿಸಿಕೊಂಡು ತಿನ್ನುತ್ತಿದ್ದೆವು. ಈಗಿನಂತೆ ಚಿತ್ರ ವಿಚಿತ್ರ ತಿಂಡಿಗಳು ಗೊತ್ತೇ ಇರಲಿಲ್ಲ. ಹೀಗಾಗಿ ನನ್ನ ಜಮಾನದವರು ಹೋಟೆಲಿಗೆ ಹೋದರೆ ತಿನ್ನುವುದು ಅದೇ ಮಸಾಲೆ ದೋಸೆಯನ್ನು! ನನ್ನ ಮಗಳು ನನಗೆ ತಮಾಷೆ ಮಾಡುತ್ತಾಳೆ, " ಅಮ್ಮ, ಮನೆಯಲ್ಲಿ ಯಾವಾಗಲೂ ಮಾಡುವ ಬೆಳಗಿನ ತಿಂಡಿ ದೋಸೆ. ಹೋಟೆಲ್ಲಿಗೆ ಬಂದು ನೀನು ಆರ್ಡರ್ ಕೊಡುವುದು ದೋಸೆಗೇ. ಬೇರೇನಾದರೂ ತಿನ್ನಬಹುದಲ್ಲಾ?" ಆದರೆ ಅಭ್ಯಾಸ ಬಲದಿಂದ ಪುನಃ ಪುನಃ ನಾನು ಆರ್ಡರ್ ಕೊಡುವುದು ಅದೇ ಮಸಾಲೆ ದೋಸೆಗೆ😀 ಈಗಿನ ಪಿಜ್ಜಾ, ಬರ್ಗರ್ ತಿಂದರೆ ಸಿಗುವ ಅನುಭವಕ್ಕೂ ಮಸಾಲೆದೋಸೆ, ಉಪ್ಪಿನಕಾಯಿ ಅನ್ನ ತಿನ್ನುವ ಅನುಭವಕ್ಕೂ ಅಜಗಜಾಂತರ ವ್ಯತ್ಯಾಸ. ಉಪ್ಪಿನಕಾಯಿ ಅನ್ನ ಮನೆಯೊಳಗಿನ ಎಲ್ಲರಿಗೂ ದೊರಕುವ ಸಿದ್ಧ ವಸ್ತು. ನನ್ನ ಜಮಾನದವರಿಗೆ ಸಿಗುವ ಉಪ್ಪಿನಕಾಯಿ ಅನ್ನದೊಟ್ಟಿಗಿನ ಅಪ್ಯಾಯಭಾವವನ್ನು ಆರ್ಡರ್ ಕೊಟ್ಟು ಎಲ್ಲಿಂದಲೋ ತರಿಸುವ ಪಿಜ್ಜಾ, ಬರ್ಗರ್ ಕೊಡಲು ಸಾಧ್ಯವೇ?

ಪ್ರತಿಕ್ರಿಯೆಗಳು:
ನಳಿನಿ ಸೋಮಯಾಜಿ
ಖಂಡಿತಾ ಒಪ್ಪುವೆ ಶೋಭ‌. ಉಪ್ಪಿನ ಕಾಯಿ ಕೊಬ್ಬರಿ ಎಣ್ಣೆ ಅತಿ ಶ್ರೇಷ್ಠ.ನಾವೂ ಮಸಾಲೆ ದೋಸೆಗೆ ಜೈ..

ಅನ್ನಪೂರ್ಣ ದೊಂಗ್ರೆ ಬಾಪಟ್ 
ಖಂಡಿತ ಹೌದು.... ಕುಚುಲಕ್ಕಿ ಗಂಜಿ, ಅದರಮೆಲೊಂದು ಚಮಚ ಕೊಬ್ಬರಿ ಎಣ್ಣೆ, ಅದರ ಜೊತೆಗೆ ಮಾವಿನ ಮಿಡಿ ಉಪ್ಪಿನಕಾಯಿ, ಕಲೆಸಿ ತಿಂದರೆ ಆಹಾ....😋😋

ಶುಭ ಶೇಷು:
Even my daughters complain the same thing when we visit the hotel

ಜಯರಾಮ ಸೋಮಯಾಜಿ :
ಅಜ್ಜಯ್ಯನ ಮನೆ, ಬಿರ್ತಿ ಸಾಲಿಕೇರಿಯ ಕಳೆದ ದಿನಗಳು, ನೆನಪುಗಳು....👍👌

ಪುಷ್ಕರಿಣಿ ಗುರ್ಜರ್:
ನಾವು ಪ್ರತಿದಿನ ರಾತ್ರಿ ಕುಚ್ಚಿಲಕ್ಕಿ ಗಂಜಿ ಊಟ ಮಾಡ್ತೀವಿ.ನಾವು ಬಿಸಿ ಗಂಜಿಯನ್ನು ಉಪ್ಪಿನಕಾಯಿ ಹಾಗೂ ತುಪ್ಪ,ಉಪ್ಪಿನ ಜೊತೆ ಸವಿಯುತ್ತೇವೆ.ಮಾವಿನ ಕಾಯಿ ಚಟ್ನಿ,ಕೊಬ್ಬರಿಎಣ್ಣೆಯಲ್ಲಿ ಕರಿದ ಸಂಡಿಗೆ, ಬಾಳಕದ ಮೆಣಸು ಅಥವಾ ಉಪ್ಪುನೀರಿನಲ್ಲಿ ಹಾಕಿಟ್ಟ ಮಾವಿನಕಾಯಿಯಿಂದ ತಯಾರಿಸಿದ ಮಜ್ಜಿಗೆ ಗೊಜ್ಜಿನ ಜೊತೆ ಗಂಜಿ ಉಂಡರೆ ....ಸ್ವರ್ಗಕ್ಕೆ ಮೂರೇ ಗೇಣು.

ಸುಜಯ ನಾಯಕ್ 
ಆಹ್ ಬಾಯಲ್ಲಿ ನೀರು ಬಂತು

ಜಯಲಕ್ಷ್ಮಿ ಭಟ್:

ನೀನು ಬರೆದದ್ದನ್ನು ಓದಿ ನನಗೂ ನೆನಪಾಯಿತು ಶೋಭಾ ಎಸ್ಟು ಹಳೆಯ ಕತೆ ಅಲ್ವಾ?

URVI SOMAYAJI - 9 MONTHS BIRTHDAY

 Sunday, 16th January 2022

Birthimane, BhuvaneshwariNagara, Bengaluru




It is nine months since URVI, D/O Ravi-Vidya Somayaji was born.


She was born in MotherHood Hospital, Indiranagara, Bengaluru in the morning.

We family at home, for celebrating URVI 9Months.



It was Sunday, Ravi Vidya, Urvi, Rishi, Kavitha, Atharv were there.


And we were there.

Mom prepared a nice cake, and by about 1.30pm, cake was cut with Birthday song.



Before that we had pooja at home, praying for good health and long life.


It was a happy occasion and moment to cherish.

GOD BLESS ALL.

Written Monday, 17th Jan.2022





Friday, January 14, 2022

UDUPI PARYAYA FESTIVAL 2022

 ಗುರುವಾರ, 13 ಜನವರಿ 2022 

ಉಡುಪಿ.

ಎರಡು ವರ್ಷಕ್ಕೊಮ್ಮೆ ಬರುವ ಉಡುಪಿ ಪರ್ಯಾಯ ಮಹೋತ್ಸವ ವಿಜೃಂಭಣೆಯಿಂದ ನಡೆಯುವ ತಯಾರಿ.



ಉಡುಪಿ ಶ್ರೀ ಕೃಷ್ಣ ಮಠದ ಪೂಜಾ ಕೈಂಕರ್ಯವನ್ನು ಒಂದು ಮಠದಿಂದ, ಮುಂದಿನ ಎರಡು ವರ್ಷಗಳಿಗೆ ಹಸ್ತಾಂತರಿಸುವ ಸಂಭ್ರಮವೇ ಉಡುಪಿ ಪರ್ಯಾಯ. 



ಕಳೆದ ಎರಡು ವರ್ಷಗಳಿಂದ (2020 - 2022 ) ಅದಮಾರು ಮಠದ ಪೂಜ್ಯ ಸ್ವಾಮಿಜಿಯವರು ಶ್ರೀ ಕೃಷ್ಣ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ನಡೆದು ಬಂದಿದ್ದು, ಮಂಗಳವಾರ 18 ನೇ ತಾರೀಕು, 2022 ರಂದು ಕೃಷ್ಣಾಪುರ ಮಠದ ಪೂಜ್ಯ ಸ್ವಾಮೀಜಿಯವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.




ವೈಕುಂಠ ಏಕಾದಶಿಯೆಂದೇ ಪ್ರಾರಂಭವಾದ ಸಂಭ್ರಮದ, ಪೂರ್ವ  ತಯಾರಿಯ ಫಟಗಳು, ವಿಡಿಯೋಗಳು ಸಂಭ್ರಮದ ಸಡಗರವನ್ನು ಸೂಚಿಸುತ್ತವೆ.


ಸರ್ವಜ್ಞ ಪೀಠ 
ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು 

file:///C:/Users/Admin/Downloads/Udupi%20Shri%20Krishnapura%20Paryaya%20Invitation%20(1)%20(2).pdf


Thursday, January 13, 2022

ಶ್ರೀ ವಿಷ್ಣು ಸಹಸ್ರನಾಮ

 


ಅಪಾಯ ಕೋಟಿಗಳಿಗೆ ಉಪಾಯ ಒಂದೇ - ಹರಿನಾಮ -

 ಶ್ರೀ. ವಿಷ್ಣು ಸಹಸ್ರ ನಾಮ. (ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು)

1. ಸಂಸ್ಕೃತಿ ಸಂವರ್ಧನ ಸ್ತೋತ್ರ - ಮಕ್ಕಳ ಯಶಸ್ಸಿಗಾಗಿ:

ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |

ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್‌ ಕವಿಃ || ೧೪ ||

2. ಸಿದ್ಧಿಸಂಕಲ್ಪ ಸ್ತೋತ್ರ - ಸಂಕಲ್ಪ ಸಿದ್ಧಿಗಾಗಿ:

ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |

ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ || ೨೭ ||

3. ದಂಪತಿಗಳ ಅನೋನ್ಯತೆಗೆ:

ಭೂತಭವ್ಯಭವನ್ನಾಥಃ ಪವನಃ ಪಾವನೋಽನಲಃ |

ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || ೩೨ ||

4. ಉದ್ಯೋಗ ಪ್ರಾಪ್ತಿಗಾಗಿ:

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |

ಪರರ್ದ್ಧಿಃ ಪರಮಃ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ || ೪೨ ||

5. ದಾರಿದ್ರ್ಯನಾಶನ, ಧನಪ್ರಾಪ್ತಿಗೆ:

ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |

ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || ೪೬ ||

6. ಐಶ್ವರ್ಯ ಪ್ರಾಪ್ತಿಗೆ:

ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |

ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || ೬೫ ||

7. ವಿದ್ಯಾ ಪ್ರಾಪ್ತಿಗೆ:

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |

ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || ೧೯ ||

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ |

ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || ೮೦ ||

8. ಸಂತಾನ ಪ್ರಾಪ್ತಿಗೆ:

ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |

ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || ೯೦ ||

9. ಸರ್ವ ರೋಗ ನಿವಾರಣೆಗೆ:

ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |

ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || ೧೦೩ ||

10. ಪಾಪ ನಾಶನಕ್ಕೆ:

ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |

ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || ೧೦೬ ||

11. ಸುಖ ಪ್ರಸವಕ್ಕೆ:

ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ |

ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || ೧೦೭ ||

12. ಪ್ರೀತಿವರ್ಧನ ಸ್ತೋತ್ರ - ಕೌಟುಂಬಿಕ ಸಾಮರಸ್ಯಕ್ಕೆ:

ಸತ್ತ್ವವಾನ್‌ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |

ಅಭಿಪ್ರಾಯಃ ಪ್ರಿಯಾರ್ಹೋಽರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || ೯೩ ||

13. ಭಯನಾಶನ ಸ್ತೋತ್ರ:

ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |

ಅಮೂರ್ತಿರನಘೋಽಚಿಂತ್ಯೋ(ಽ)ಭಯಕೃದ್ಭಯನಾಶನಃ || ೮೯ ||

14. ದುಸ್ವಪ್ನನಾಶನ ಸ್ತೋತ್ರ:

ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |

ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || ೯೯ ||

15. ಸ್ವಸ್ತಿ ಮಂತ್ರ - ಮನಸ್ಸಿನಲ್ಲಿ ಮೂಡುವ ಆಸೆಗಳ ಸಿದ್ಧಿಗಾಗಿ:

ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |

ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || ೯೬ ||

16. ಕೊನೆಯ ದಿನಗಳಲ್ಲಿ  - ಸದ್ಗತಿಗಾಗಿ:

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |

ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ೪೪ ||

ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |

ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || ೭೫ ||

ಈ ಮೇಲಿನವು ಕೆಲವು ಉದಾಹರಣೆ ಮಾತ್ರ. ಇನ್ನು ಅನುಸಂಧಾನದಿಂದ ಪ್ರತಿನಿತ್ಯವೂ, ಸಂಸಾರದ ಎಲ್ಲರೂ ದಿನಕ್ಕೋಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಣಮಾಡುವುದರಿಂದ ಬಹಳ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.


ವೈಕುಂಠ ಏಕಾದಶಿ

 ಗುರುವಾರ, 13 ಜನವರಿ 2022 


ವೈಕುಂಠ ಏಕಾದಶಿ 

ಧನುರ್ಮಾಸದಲ್ಲಿ ಬರುವ ಅಂದರೆ ಸಾಮಾನ್ಯವಾಗಿ ಮಾರ್ಗಶಿರ          
/ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು "ವೈಕುಂಠ ಏಕಾದಶಿ" ಆಚರಿಸಲಾಗುತ್ತದೆ. ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಪ್ರತೀತಿ. ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಿರುತ್ತಾರೆ
ಏಕಾದಶಿಗೆ ಸಂಬಂದಿಸಿದ ಕೃಷ್ಣಕಥೆ ಭಾಗವತದಲ್ಲಿ ಬಂದಿದೆ:-.
ನಂದಗೋಪನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದ.  ಒಮ್ಮೆ ಏಕಾದಶಿ ವ್ರತಮಾಡಿ ಮರುದಿನ ಅಲ್ಪದ್ವಾದಶಿ ಇದ್ದುದರಿಂದ ನಸುಕಿನಲ್ಲಯೇ ಯಮುನಾ ನದಿ ಯಲ್ಲಿ ಸ್ನಾನಕ್ಕೆ ಇಳಿಯುತ್ತಾನೆ.
ಆ ಸಮಯ ಇನ್ನೂ ರಾಕ್ಷಸರ ಸಂಚಾರ ಕಾಲವಾಗಿತ್ತು.  ರಾತ್ರಿ ಕಾಲದಲ್ಲಿ ನದೀ ಸ್ನಾನಕ್ಕೆ ಹೋಗಬಾರದು.  ಆ ತಪ್ಪಿಗೆ ಶಿಕ್ಷೆಯಾಗಿ  ವರುಣನ ಭೃತ್ಯನೊಬ್ಬ ನಂದಗೋಪನನ್ನು ಎಳೆದುಕೊಂಡು ವರುಣ ಲೋಕಕ್ಕೆ ಬರುತ್ತಾನೆ. ಇತ್ತ ನಂದಗೋಪ ಸ್ನಾನಕ್ಕೆಂದು ನದಿಗೆ ಹೋದ ನಂದಗೋಪ ಬಾರದೇ ಇದ್ದುದರಿಂದ ಗೋಪಾಲಕರೆಲ್ಲ ಚಿಂತಿತರಾಗಿ ಕೃಷ್ಣ ಬಲರಾಮರಿಗೆ ತಿಳಿಸುತ್ತಾರೆ.
ಶ್ರೀಕೃಷ್ಣನು ವಿಷಯ ತಿಳಿದವನಾಗಿ ಎಲ್ಲ ಗೋಪಾಲಕರಿಗೆ ಅಭಯವನ್ನು ಕೊಡುತ್ತಾನೆ. ಕೃಷ್ಣಾವತಾರದಲ್ಲಿ ತಂದೆಯಾದ ನಂದಗೋಪನನ್ನು ಕರೆತರುವದಾಗಿ ಗೋಪಾಲಕರಿಗೆ ತಿಳಿಸಿ ವರುಣಲೋಕಕ್ಕೆ ಹೋಗುತ್ತಾನೆ.
ವರುಣಲೋಕದಲ್ಲಿ ಶ್ರೀಕೃಷ್ಣನನ್ನು ನೋಡಿದ ವರುಣ ಸಂತೋಷದಿಂದ ಬರಮಾಡಿಕೊಳ್ಳುತ್ತಾನೆ, ತನ್ನ ಸೇವಕನಿಂದ ಆದ ಪ್ರಮಾದವನ್ನು ಕ್ಷಮಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ. ಶ್ರೀಕೃಷ್ಣ ವರುಣನಿಗೆ ಆಶೀರ್ವದಿಸಿ ನಂದಗೋಪನೊಂದಿಗೆ ಯಮುನಾತೀರಕ್ಕೆ ಬರುತ್ತಾನೆ.
ಗೋಪಾಲಕರಿಗೆ ನಂದಗೋಪನು ವರುಣಲೋಕದಲ್ಲಿ ಕಂಡ ಶ್ರೀಕೃಷ್ಣನ ನಿಜರೂಪವನ್ನು ಮತ್ತು ಅಲ್ಲಿ ದೊರೆತ ಭವ್ಯ ಸ್ವಾಗತವನ್ನು ವರ್ಣಿಸುತ್ತಿದ್ದರೆ ಎಲ್ಲ ಗೋಪಾಲಕರು ಭಕ್ತಿಯಿಂದ ಆಲಿಸುತ್ತಿದ್ದರು. ನಮಗೆ ಶ್ರೀಮನ್ನಾರಾಯಣನ ದಿವ್ಯದರ್ಶನದ ಭಾಗ್ಯ ಇಲ್ಲವಾಯಿತಲ್ಲ ಎಂದು ಪರಿತಪಿಸುತ್ತಿದ್ದರು.
ಇದನ್ನು ತಿಳಿದ ಶ್ರೀಕೃಷ್ಣ ಎಲ್ಲ ಗೋಪಾಲಕರಿಗೆ ಯಮುನಾ ತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ. ಗೋಪಾಲಕರು ಸ್ನಾನಮಾಡಿ ಬರುತ್ತಿದ್ದಂತೆ ವೈಕುಂಠಲೋಕ ಗೋಚರಿಸಿತು. ಶ್ರೀಕೃಷ್ಣನ ದಿವ್ಯವಾದ ಅನೇಕ ರೂಪಗಳು ಅವರಿಗೆ ಕಂಡವು.
ಮುಕ್ಕೋಟಿ ದ್ವಾದಶಿ ಅಂದರೇನು?  
ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ.  ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.
ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ?
ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ  ಮಾಡುವುದು ಶ್ರೇಷ್ಠ.  ಅವುಗಳು – ತಿರುಮಲ, ಶ್ರೀಮೂಷ್ಣಂ, ತೋತಾದ್ರಿ,  ಶ್ರೀರಂಗ, ಇತ್ಯಾದಿ.    ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನಗಳಲ್ಲಿ ಕೂಡ ಮಾಡಬಹುದು.
ಉಡುಪಿಯಲ್ಲಿ ರಥ ಸಂಭ್ರಮ 

ಅಮ್ರುತಹಳ್ಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇಗುಲ.



ಪ್ರಶ್ನೋತ್ತರ ವೈಕುಂಠ ಏಕಾದಶಿ ಬಗ್ಗೆ :
ವೈಕುಂಠ ಏಕಾದಶಿ 13.01.2022
1. ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ?
ಉತ್ತರ – ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿ (ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ) ಆಚರಿಸಲಾಗುತ್ತದೆ.
2. ವೈಕುಂಠ ಏಕಾದಶಿಯಂದು ಉಪವಾಸ ಮಾಡಬೇಕಾ ? ಫಲಾಹಾರ ಮಾಡಬಹುದಾ
ಉತ್ತರ – ಎಲ್ಲಾ ಏಕಾದಶಿಯಂದೂ ಉಪವಾಸ ಮಾಡಬೇಕು.  ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು.  ಬೇರೆ ಕಾರಣಗಳಿಂದ ಉಪವಾಸ ಮಾಡಲಾಗದವರು ಹಣ್ಣೂ ಸಜ್ಜಿಗೆ  ಮುುಂತಾದ ಉಪ್ಪು ರಹಿತ ಪದಾರ್ಥ  ತಿನ್ನಬಾರದು.
3. ಕೆಲವು ದೇವಸ್ಥಾನಗಳಲ್ಲಿ ನೈವೇದ್ಯ ರೂಪದಲ್ಲಿ ಪೊಂಗಲ್, ಹುಗ್ಗಿ, ಚಿತ್ರಾನ್ನ ಇತ್ಯಾದಿ ಕೊಡುತ್ತಾರಲ್ಲ ಅದನ್ನು ತಿನ್ನಬಹುದೆ?
ಉತ್ತರ – ತಿನ್ನಬಾರದು. ಮಾಧ್ವ ಸಂಪ್ರದಾಯದ ಯಾವ ದೇವಸ್ಥಾನದಲ್ಲೂ ಕೊಡುವುದಿಲ್ಲ. ಅಕಸ್ಮಾತ್ ಅವರೇನಾದರೂ ಕೊಟ್ಟರೆ ಅವರಿಗೆ ಕೊಡಬಾರದೆಂದು ಹೇಳಿ.
4. ಏಕಾದಶಿಯಂದು ತೀರ್ಥ ಎಷ್ಟು ಸಲ ತೆಗೆದುಕೊಳ್ಳಬೇಕು.
ಉತ್ತರ – ನಿರ್ಮಾಲ್ಯ ಒಂದು ಸಾರೀ ಮತ್ತು ತೀರ್ಥ ಒಂದು ಸಾರಿ ಮಾತ್ರ.
5. ಮನೆಯಲ್ಲಿ ತೀರ್ಥ ತೆಗೆದುಕೊಂಡವರು ದೇವಸ್ಥಾನದಲ್ಲೂ ತೆಗೆದುಕೊಳ್ಳಬಹುದಾ?
ಉತ್ತರ – ಮನೆಯಲ್ಲಿ ತೆಗೆದುಕೊಂಡಿದ್ದರೆ ಏಕಾದಶಿಯಂದು ಅಲ್ಲಿ ಸ್ವೀಕರಿಸಬೇಡಿ.
6. ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಏನು ಫಲ?
ಉತ್ತರ – ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ ೨೪ ಏಕಾದಶಿ ಉಪವಾಸ ಮಾಡಿದ ಫಲ. ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು.
7. ದಿನತ್ರಯ ಎಂದರೇನು?
ಉತ್ತರ – ದಶಮಿ, ಏಕಾದಶಿ, ದ್ವಾದಶಿ ಈ ಮೂರೂ ದಿನಗಳನ್ನು ದಿನತ್ರಯವೆನ್ನುತ್ತಾರೆ.
8. ಏಕಾದಶಿ ಶ್ರಾದ್ಧ ಏಕಾದಶಿಯಂದೇ ಮಾಡಬಹುದಾ?
ಉತ್ತರ – ಏಕಾದಶಿಯಂದು ಶ್ರಾದ್ಧ ಮಾಡಬಾರದು. ದಶಮೀ ಅಥವಾ ದ್ವಾದಶಿ ಮಾಡಬೇಕು (ನಿಮ್ಮ ಮಠದ ಪಂಚಾಂಗದಲ್ಲಿ ಶ್ರಾದ್ಧ ಕಾಲಂ ನೋಡಿ)
9. ಏಕಾದಶಿ ಆಚರಿಸಿದ ಕೆಲವು ಭಾಗವತೋತ್ತಮರ ಹೆಸರು ತಿಳಿಸಿ.
ಉತ್ತರ – ಭೀಮಸೇನ, ದೂರ್ವಾಸರು, ಅಂಬರೀಷ, ರುಕ್ಮಾಂಗದ ಮುಂತಾದವರು.
10. ದೂರ್ವಾಸರು ಅಂಬರೀಷನಿಗಿಂತ ದೊಡ್ಡವರಾದರೂ ಅವರು ಏಕಾದಶಿಯ ಅನುಸರಿಸಲಿಲ್ಲವೇಕೆ?
ಉತ್ತರ – ದೂರ್ವಾಸರು ರುದ್ರದೇವರ ಅವತಾರ. ಪರಮ ವೈಷ್ಣವರು. ಆದರೆ ಅವರು ಅಂಬರೀಷನ ಏಕಾದಶಿ ಮಹತ್ವ ತಿಳಿಸಬೇಕಿತ್ತು. ಅದಕ್ಕೇ ಪರಮಾತ್ಮನ ಪ್ರೇರಣಾನುಸಾರ ಹಾಗೆ ಮಾಡಿರುತ್ತಾರೆ .
11. ಏಕಾದಶಿ ಅಭಿಮಾನಿ ದೇವತೆ ಯಾರು?
ದಶಮಿ, ಏಕಾದಶಿ ಮತ್ತು ದ್ವಾದಶಿಗೆ ಶ್ರೀಹರಿಯೇ ಅಭಿಮಾನಿ ದೇವತೆ.
ಸಂಗ್ರಹ : ನರಹರಿ ಸುಮಧ್ವ
ಸುಮಧ್ವಸೇವ

Monday, January 10, 2022

ಭಜನೆ - BHAJANS

 ತಾಳವನು ತಟ್ಟಿದವ ದುರಿತವನು ಅಟ್ಟಿದವ !!! 


ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದ್ದು, ನಮ್ಮಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂತಹ ಒಂದು ಸಂಪತ್ತು ಇದ್ದರೆ ಅದು ಭಜನೆ. 

ಭಜನೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದರೆ, ಭಗವಂತನಿಗೆ ಅದಕ್ಕಿಂತ ದೊಡ್ಡ ಹರಕೆಯಿಲ್ಲ. ಕನಕದಾಸರು, ಪುರಂದರದಾಸರು ಭಜನೆಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು. ಭಜನೆಯಿಂದ ಮನೆಯ ಎಲ್ಲಾ ಸದಸ್ಯರಲ್ಲೂ ಆಧ್ಯಾತ್ಮಿಕ ಭಾವನೆ ಬೆಳೆಯುತ್ತದೆ. ಭಜನೆಯಿಂದ ಮನೆಯ ವಿಭಜನೆಯಿಲ್ಲ.

• ಭಜನೆ ಹೇಳುತ್ತಾ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಭಾಗ್ಯ, ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ.

• ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

• ಚಪ್ಪಾಳೆ ಯನ್ನು ತಟ್ಟುವಾಗ ನಾವು ಲಯಬದ್ಧವಾಗಿ ತಾಳ ಹಾಕುತ್ತೇವೆ. ಈ ಶಬ್ದವು ಕೂಡ ನಮಗೆ ಬಹಳ ಉಪಯೋಗಿಯಾಗಿದೆ. ಈ ಲಯಬದ್ಧವಾಗಿ ಪುನರಾವರ್ತಿಯಾಗುವ ಶಬ್ದವು ನಮ್ಮಲ್ಲಿ ಒಂದು ವಿಧವಾದ ಶಿಸ್ತನ್ನು ಉಂಟು ಮಾಡುತ್ತದೆ. ಇದರಿಂದ ನಮ್ಮ ಏಕಾಗ್ರತೆಯು ಹೆಚ್ಚುತ್ತದೆ.

• ಹೀಗಾಗಿಯೇ ನಾವು ಭಜನೆ ಮಾಡುವಾಗ ತಾಳಕ್ಕೆ ತಕ್ಕಂತೆ ಚಪ್ಪಾಳೆ ತಟ್ಟುತ್ತೇವೆ. ಇದರಿಂದ ಕ್ರಮೇಣ ನಮ್ಮ ಮನಸ್ಸು ಶಿಸ್ತಿನಿಂದ ಭಜನೆಯಲ್ಲಿ ಏಕಾಗ್ರಗೊಂಡು ತಲ್ಲಿನವಾಗುತ್ತದೆ. ಇದರ ಮಹತ್ವ ಅರಿತು ಏನೋ ನಮ್ಮ ಪೂರ್ವಿಕರು ಭಜನೆಯ ಜೊತೆಗೆ ಚಪ್ಪಾಳೆಯನ್ನು ಸೇರಿಸಿ ನಮ್ಮನ್ನು ಸುಲಭವಾಗಿ ಬಾಹ್ಯ ಜಗತ್ತನ್ನು ಮರೆತು ದೇವರನಾಮ ಹಾಡುವಂತೆ ಮಾಡಿದ್ದು.

• ಜೀರ್ಣಾಂಗ ತೊಂದರೆಗಳನ್ನೆದುರಿಸುತ್ತಿರುವ ಜನರಿಗೆ ಪರಿಣಾಮಕಾರಿ ಪರಿಹಾರ.

• ಚಪ್ಪಾಳೆ, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಮತ್ತು ಕೂದಲು ನಷ್ಟದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಲಾಭಕರವಾಗಿರುತ್ತದೆ.

• ಚಪ್ಪಾಳೆ ತಟ್ಟುವುದರಿಂದ ನಮ್ಮ ಕೈಗಳಲ್ಲಿ ಇರುವ ನರಗಳು ಹಾಗೂ ನಮ್ಮ ಮೆದುಳಿನ ಸಂವೇದನಾ ಗ್ರಾಹಕಗಳು ಸಕ್ರಿಯಗೊಳುತ್ತವೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದರಿಂದಾಗಿ ನಮ್ಮ ದೇಹದ ಅನೇಕ ಭಾಗಗಳು ಕ್ರಿಯಾಶೀಲವಾಗುತ್ತವೆ. ಹೀಗಾಗಿ ನಿಂತಲ್ಲಿಯೇ ನಾವು ನಮ್ಮ ದೈಹಿಕ ವ್ಯಾಯಾಮಕ್ಕೆ ಒಂದು ವ್ಯತ್ಯಾಸದ ಸ್ಪರ್ಶ ಕೊಡುತ್ತೇವೆ.

• ನಾವು ಚಪ್ಪಾಳೆ ತಟ್ಟುವಾಗ ಬಿರುಸಿನಿಂದ ಎರಡು ಕೈಗಳನ್ನು ತಟ್ಟುವಾಗ ನಮ್ಮ ಅಂಗೈ ಹಾಗೂ ಬೆರಳುಗಳ "ಪ್ರೆಶರ್ ಪಾಯಂಟ್ಸ್" ಸಕ್ರಿಯಗೊಳ್ಳುತ್ತವೆ. ಇದರಲ್ಲಿ ವಿಸ್ಮಯಕಾರಿ ಅಂಶವೆಂದರೆ ನಮ್ಮ ದೇಹದ ಎಲ್ಲ ಮುಖ್ಯಭಾಗಗಳಾದ ಮೆದುಳು, ಹಣೆ, ಕಣ್ಣು, ಮೂಗು, ಗಂಟಲು, ಶ್ವಾಸಕೋಶ, ಹೊಟ್ಟೆ, ಹೃದಯ, ಯಕೃತ್, ಗರ್ಭಕೋಶ, ಕರುಳು, ಕಾಲು ಇತ್ಯಾದಿ ಎಲ್ಲ ಅಂಗಗಳಿಗೆ ಸೇರುವ "ಪ್ರೆಶರ್ ಪಾಯಂಟ್ಸ್" ನಮ್ಮ ಅಂಗೈ ಹಾಗೂ ಬೆರಳಿನಲ್ಲಿ ಇವೆ.

• ಚಪ್ಪಾಳೆ ಮಕ್ಕಳ ಕಲಾ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ- ಅಚ್ಚುಕಟ್ಟಾದ ಕೈಬರಹ, ಕಡಿಮೆ ಕಾಗುಣಿತ ದೋಷ, ಇತ್ಯಾದಿ

ಇತರರನ್ನು ಹುರಿದುಂಬಿಸುವ ಸಂಕೇತವಾಗಿ ತಟ್ಟುವ ಚಪ್ಪಾಳೆಯಿಂದ ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಿರಿ. ಇನ್ನು ನಮಗಾಗಿಯೂ ಸಹ ಚಪ್ಪಾಳೆ ತಟ್ಟಲು ಪ್ರಾರಂಭಿಸೋಣ. ಇದರಿಂದ ಇತರರನ್ನು ಪ್ರೋತ್ಸಾಹಿಸಿದಂತೆಯೂ ಆಯಿತು ಹಾಗೆಯೇ ನಮ್ಮ ಆರೋಗ್ಯ ವೃದ್ಧಿಯೂ ಆಯಿತು. 

ವಾಟ್ಸ್ ಆಪ್ ಕೃಪೆ 

 

MADHU-PUSHPA, SOORYA-LAKSHMI: HOME VISIT

 MONDAY, 10th January 2022

Birthimane, BhuvaneshwariNagara, Bengaluru


Madhusudan Talitaya- Pushpa and Soorya Lakshmi are close family friends from our Dubai-Sharjah years. (1986 - 2010)



MadhuPushpa are retired and relocated in Bengaluru, where as SooryaLakshmi are still living in Sharjah, on holidays.

Lakshmi is a very good classical dancer, teaches classical dance in Sharjah.



So they were invited for lunch and get-together and they arrived home by 1 pm, where as Soorya Lakshmi were delayed due to auto unable to find the location.





Mom prepared nice lunch, number of dishes, sweet and huggi, special for the month.



After lunch we all went to terrace comfort, spent two hours of quality time talking, laughing and cherishing the memories of those years.


They left home by 5pm, happy and relaxed thanking for the good time spent and nice lunch.

Written Tuesday,11th Jan 2022

Thursday, January 6, 2022

RAVIKANTH (40) - BIRTHDAY

 Thursday 6th January 2022

Pai Viceroy Restaurant, Jayanagara, Bengaluru



It was exactly Son Ravi was born in a Hospital at Yola, Capital of Gongola State of Nigeria.


URVI


Late Prema Sundaresan was by her side in the hospital throughout the previous night, during the labour pain, and next morning only Ravi came.

It was a happy ending. Dr Mohapatra was the surgeon attending.



It is 40 years life is on..... 

Today celebrating Happy Day with wife Vidya, pretty daughter Urvi, We, Shubha Lahari, Vidya's parents Sridhar Bidarahalli, Bharathi and Bro Sanjeev.

APPA, SHUBHA, LAHARI


Nice lunch at Pai Viceroy Hotel, and cutting cake.


It was a memorable get-together.

MANY MANY HAPPY RETURNS OF THE DAY RAVIAN,

GOD BLESS.


written on 7th Jan.2022

Tuesday, January 4, 2022

JANARDHAN MANGALA : GET-TOGETHER

 Tuesday, 4th January 2022

SATVAM Restaurant, Sadashivanagara, Bengaluru





Janardhan Mangala have migrated to USA in search of greener pasture in 1999 from Dubai.




Before that we were close family friends for several years.

They have two children, Akshatha and Arjun, both are married now






We spent time together in parties, picnics, outings and celebrating New Years.

Dr Moham Satya, Suresh Usha, Prasads and Dr Annaporna were there for lunch 

get-together at Satvam Restaurant.



Memories to catch up, good times spent, and life changing events.



Spent about three hours in the restaurant, photos clicked, carried memories back home.

Written Wednesday, 5th Jan 2022