Monday, August 16, 2021

ಸ್ವಾತಂತ್ರ್ಯೋತ್ಸವ 2021 - ಕವಿ ಗೋಸ್ಥಿ

 ದಿನಾಂಕ. ಅಗಸ್ಟ್  15, 2021, ಭಾನುವಾರ, ಸಂಜೆ 4 ಗಂಟೆಗೆ 

ಗೂಗಲ್ ಮೀಟ್ ವರ್ಚುವಲ್ ಸಭೆ  

ಶ್ರೀ ಎಚ್. ಡುಂಡಿರಾಜ್ 

ಶಿವರಾಮ ಕಾರಂತ ವೇದಿಕೆ, ಅರ್.ಟಿ. ನಗರ, ಬೆಂಗಳೂರು, ಅವರು, ಸ್ವಾತಂತ್ರ್ಯೋತ್ಸವ ವನ್ನು ಕವಿ ಗೋಸ್ಥಿ ಯ ಮೂಲಕ ಅರ್ಥಪೂರ್ಣವಾಗಿ ಆಚರಿಸಿತು.

ಶ್ರೀ ಶ್ರೀಧರ್ ಹೆಗ್ಡೆ ಭದ್ರನ್ 
ಸುಮಾರು 12 ಕವಿಗಳು ತಮ್ಮ ಕವನಗಳನ್ನು ವಾಚಿಸಲು ಉತ್ಸುಕರಾಗಿದ್ದು ಹೆಸರುಗಳನ್ನು ನೋಂದಾಯಿಸಿದ್ದರು
.

ಶ್ರೀಮತಿ ಇಂದಿರಾ ಶರಣ್ ಜಮ್ಮಲದಿನ್ನಿ 

ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಇಂದಿರಾ ಶರಣ್ ಜಮ್ಮಲದಿನ್ನಿ ಅವರು ಅತಿಥಿಗಳನ್ನು ಪರಿಚಯಿಸಿ ಭಾಗವಹಿಸಿವ ಕವಿಗಳನ್ನು, ಕೇಳುಗರನ್ನು ಸ್ವಾಗತಿಸಿ ಕಾರ್ಯಕ್ರಮದ ನಿರ್ವಹಣೆಯನ್ನು ಅರ್ಥಪೂರ್ಣವಾಗಿ, ಸುಂದರವಾಗಿ ಮಾಡಿದರು.

ಶ್ರೀಮತಿ ಶಶಿಕಲಾ 

ಶ್ರೀಮತಿ ಸುಮಾ ಸತೀಶ್ 

ಶ್ರೀಮತಿ ಮಂಜುಳಾ ಭಾರ್ಗವಿ 

ಶ್ರೀ ವೀರಶೇಖರ ಸ್ವಾಮಿ 
ಖ್ಯಾತ ಸಾಹಿತಿ ಶ್ರೀ ಶ್ರೀಧರ್ ಹೆಗ್ಡೆ ಭದ್ರನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾಗವಹಿಸಿದ ಕವಿಗಳು ತಮ್ಮ ತಮ್ಮ ಕವನವನ್ನು ವಾಚಿಸಿಸರು.
ಶ್ರೀ ಮರಿಯಯ್ಯ ಸ್ವಾಮಿ 

ಖ್ಯಾತ ಕವಿ ಶ್ರೀ ಎಚ್. ಡುಂಡಿರಾಜ್ ಅವರು ಅಧ್ಯಕ್ಷತೆ ವಹಿಸಿದ್ದು, ವಾಚಿಸಿದ  ಕವನಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು, ಅಭಿಪ್ರಾಯವನ್ನು ತಿಳಿಸಿದರು.

ಶ್ರೀ ಪಾ. ಚಂದ್ರಶೇಖರ ಚಡಗ 

ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಾಲಿ ಕಾರ್ಯಾಧ್ಯಕ್ಷ ಶ್ರೀ ಪಾ ಚಂದ್ರಶೇಖರ ಚಡಗರು  ವೇದಿಕೆಯ ಆಶೋತ್ತರಗಳ ಬಗ್ಗೆ, ಗ್ರಂಥಲಯದ ಬಗ್ಗೆ ಮಾತನಾಡಿದರು.

ಸುಮಾರು ಒಂದು ಗಂಟೆ ನಲುವತ್ತೈದು ( 1 hour 45 minutes) ಕಾಲ ನಡೆದ ಕಾರ್ಯಕ್ರಮವು ಧನ್ಯವಾದ ಸಮರ್ಪಣೆ ಯೊಂದಿಗೆ ಸಂಪನ್ನ ಗೊಂಡಿತು. 

ಕೆಳಗಿನ ಯೂ ಟ್ಯೂಬ್ ಸಂಪರ್ಕದಿಂದ ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಬಹುದು.


ಕೋಶಾಧಿಕಾರಿ ಜಯರಾಮ ಸೋಮಯಾಜಿಯವರು ಗೂಗಲ್ ಮೀಟ್ ವರ್ಚುವಲ್ ಸಭೆಯ ನಿರ್ವಹಣೆಯನ್ನು ಸಮರ್ಥವಾಗಿ ನೆರವೇರಿಸಿದರು.

ಬರೆದಿರುವುದು ಸೋಮಯಾಜಿ ಅಗಸ್ಟ್ 17, 2021 


ವರದಿ - ಶಶಿಕಲಾ, ಸಹಕಾರ್ಯದರ್ಶಿ 

ಶಿವರಾಮ ಕಾರಂತ ವೇದಿಕೆ(ರಿ). 

ಆರ್ ಟಿ ನಗರ, ಬೆಂಗಳೂರು

ವೇದಿಕೆಯ ಆಗಸ್ಟ್  ತಿಂಗಳ ಕಾರ್ಯಕ್ರಮವನ್ನು ಆಗಸ್ಟ್ 15, ಸಂಜೆ 4 ಗಂಟೆಗೆ, 75ನೇ ಸ್ವಾತಂತ್ರ್ಯ ದಿನದ ಸಂಭ್ರಮದಂದು "ಸ್ವಾತಂತ್ರ್ಯೋತ್ಸವದ 2021 ಕವಿ ಗೋಷ್ಠಿ"  ಶೀರ್ಷಿಕೆಯಲ್ಲಿ ಗೂಗಲ್ ಮೀಟ್ ವರ್ಚುವಲ್ ಸಭೆಯ ಮೂಲಕ  ಯಶಸ್ವಿಯಾಗಿ ನಡೆಸಲಾಯಿತು.

★ವರ್ಚುವಲ್ ಸಭೆಯ ಆಯೋಜನೆ ನಮ್ಮ ವೇದಿಕೆಯ ಕೋಶಾಧ್ಯಕ್ಷರಾದ ಶ್ರೀ  ಜಯರಾಮ್ ಸೋಮಯಾಜಿಯವರ ಮುತುವರ್ಜಿ ಯಲ್ಲಿ ಸಮರ್ಪಕವಾಗಿ , ಸುಂದರವಾದ ಕಾರ್ಯಕ್ರಮಕ್ಕೆ ನಾಂದಿಯಾಯಿತು.

 ವೇದಿಕೆಯಲ್ಲಿ ಹಿರಿಯರಾದ ಪಾ. ಚಂದ್ರಶೇಖರ್ ಚಡಗ ರವರಿಗೆ ಅವರ ಹುಟ್ಟು ಹಬ್ಬದ ಶುಭಾಶಯಗಳು ಕೋರಲಾಯಿತು ಜೊತೆಗೆ 75ನೇ ಸ್ವಾತಂತ್ರ್ಯೋತ್ಸವದ  ಶುಭಾಶಯಗಳು  ತಿಳಿಸುತ್ತಾ ಸಹಜವಾಗಿ ದೊರೆತಿರುವ ಸ್ವಾತಂತ್ರ್ಯದ  ಹಿಂದೆ ತಲೆಮಾರುಗಳ ನಿಸ್ವಾರ್ಥದ ಸಂಘರ್ಷದ  ಇತಿಹಾಸ ಮರೆಯದೆ ಕೃತಜ್ಞತೆ ಹೇಳುತ್ತಾ ಇಡೀ ಕಾರ್ಯಕ್ರಮದ  ನಿರೂಪಣೆ, ನಿರ್ವಹಣೆ ಜವಾಬ್ದಾರಿ ನಿರ್ವಹಿಸಿದರು  ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಇಂದಿರಾ ಶರಣ್ ರವರು. 

 ★ಪ್ರಾರ್ಥನೆ: 

ಪ್ರಾರ್ಥನೆಗೆ ದೇಶಭಕ್ತಿ ಗೀತೆ " ಇಂದು ರಾಷ್ಟ್ರ ನಿರ್ಮಾಣ ಮಾಡುವ ಮಣ್ಣಿನಿಂದ ಚಿನ್ನ. ....." ಆರಿಸಿಕೊಂಡು, ವೇದಿಕೆಯಲ್ಲಿ ಕೇಳುಗರ ಮನದಲ್ಲಿ ದೇಶಭಕ್ತಿ ಮೆರೆಸಿದ ನಮ್ಮ ವೇದಿಕೆಯ ಸಹ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿಯರವರು. 

 ★ಪ್ರಾಸ್ತಾವಿಕ ನುಡಿ: 

 ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಪ್ರಸ್ತುತ ಕ್ಳಾರ್ಯಾಧ್ಯಕ್ಷರಾದ  ಶ್ರೀ ಪಾ. ಚಂದ್ರಶೇಖರ ಚಡಗ ರವರು ಸಂಸ್ಥೆ ಬೆಳೆದು ಹಾದಿ, ತಮ್ಮ ಮನೆಯ ಕಾರ್.ಗ್ಯಾರೇಜ್ ನಲ್ಲಿ ಆರಂಭವಾದ ವೇದಿಕೆಯ ಗ್ರಂಥಾಲಯ, ಅಂದು  ಉಪಯುಕ್ತ ವಾಗಿ ಓದುಗನ ಹಿಡಿದಿಟ್ಟಿದ್ದು ಹಸಿರಾಗಿದ್ದು, ಪ್ರಸ್ತುತ  ಪುಸ್ತಕಗಳನ್ನು ಎಲ್ಲರೂ ಓದುವಂತಾಗಿ ಸಾರ್ಥಕ್ಯ ಪಡೆಯಬೇಕಾಗಿದೆ, ಗ್ರಂಥಾಲಯವನ್ನು ಸಂಶೋಧನಾ ಕೇಂದ್ರ ಮಾಡಿ ಸದುಪಯೋಗ ಪಡಿಸುವ ನಿಟ್ಟಿನಲ್ಲಿರುವ ಹೀಗೆ ಹಲವು ಚಿಂತನೆಗಳನ್ನು ನಮ್ಮ ಮುಂದಿಟ್ಟರು.

★ ಉದ್ಘಾಟನಾ ಭಾಷಣ: 

 ಶ್ರೀ ಶ್ರೀಧರ್ ಹೆಗ್ಡೆ , ಖ್ಯಾತ ಸಾಹಿತಿ, 

ಸಭೆಯ ಉದ್ಘಾಟಕರಾಗಿ ಮಾತನಾಡುತ್ತ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ತಿಳಿಸುತ್ತಾ ಕಾಲು ಶತಮಾನ  ಸಮಕಾಲೀನ ಸಾಹಿತ್ಯ  ಸಂಘರ್ಷಗಳಿಗೆ ಕಾರಣ ವಾಗಿರುವ ವೇದಿಕೆ ಶ್ಲಾಘನೀಯ ಕೆಲಸ ಮಾಡುತ್ತಿದೆ. ಇವತ್ತಿನ ಕವಿ ಗೋಷ್ಠಿ ಕೂಡ ಅಂತಹದೇ ಉಪಕ್ರಮ. ವಾಚನ ಮಾಡುವ ಕವಿ, ಕವಯತ್ರಿಯರಿಗೆ ಶುಭವನ್ನು ಕೋರುತ್ತಾ, ಡುಂಡಿರಾಜ್ ಅಧ್ಯಕ್ಷತೆ ವಹಿಸಿರುವ ಈ ಕಾರ್ಯಕ್ರಮದ ಉದ್ಘಾಟನೆಯ ಅವಕಾಶ ತಮ್ಮ ಸೌಭಾಗ್ಯವೆಂದು, ಅವಕಾಶ ಒದಗಿಸಿದ ಚಡಗರವರಿಗೆ ಹೃದಯಪೂರ್ವಕ ಅಭಿನಂದನೆ ತಿಳಿಸಿದರು. ಪಂಪನಿಂದ ಬಸವಣ್ಣ ನವರಿಗೆ ಸ್ಥಾಪಿತ ಬಿಡುಗಡೆ ಬಯಸಿದವರೇ ಆಗಿದ್ದಾರೆ. ಜನಪದರಲ್ಲಿ ಲಾವಣೀಕಾರರಲ್ಲೂ ಸ್ವಾತಂತ್ರ್ಯದ  ಅಭೀಕ್ಷೆ ಉಜ್ವಲವಾಗಿ ಅಭಿವ್ಯಕ್ತವಾಗಿದೆ. ನವೊದಯ ಕಾವ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ ಒಂದು ಭಾವನಾವಾಸ್ತವಕ್ಕಾಗಿ ಕನ್ನಡ ಕಾವ್ಯ ಪ್ರಪಂಚವನ್ನು ಆವರಿಸಿಕೊಂಡಿತು ಇದರಲ್ಲಿ ಬಂಧನ,  ಸ್ವಾತಂತ್ರ್ಯ ಅಥವಾ ಬಿಡುಗಡೆ ಈ ಎರಡು ವೈಚಾರಿಕ ಸ್ಥಿತಿಗಳನ್ನು ಆಶ್ರಯಿಸಿ ಮೂಡಿರುವುದು ಕಾಣುತ್ತದೆ. ನವೋದಯ ಕಾವ್ಯದಲ್ಲಿ ಈ ರಾಷ್ಟ್ರೀಯ ಪ್ರಜ್ಞೆ ಜೀವಾಳವಾಯಿತು.  ಕುವೆಂಪು, ಬೇಂದ್ರೆ, ಪುತಿನ, ಜಿಎಸ್ ಎಸ್, ಲಕ್ಕುಂಡಿ ಕವಿತೆಗಳನ್ನು ಪ್ರಸ್ತಾಪಿಸುತ್ತಾ, ಸ್ವಾತಂತ್ರ್ಯ ನಂತರದ ಭ್ರಮರನಿರಸನವನ್ನು ನಮ್ಮ ಕಾವ್ಯ ಅದ್ಭುತವಾಗಿ ಹಿಡಿದಿಟ್ಟಿದೆ. ಸಮಾನತೆ ತರಬೇಕಿದ್ದ ಸ್ವಾತಂತ್ರ್ಯ ಬಂಡವಾಳ ಶಾಹಿಗಳ ಕೈಗೊಂಬೆಯಾದ  ಕಟುವಾಸ್ತವವನ್ನು,  ಸಮಾಜವಾದ, ಪ್ರಜಾಪ್ರಭುತ್ವ, ಜಾತ್ಯಾತೀತತೆಯ ಆದರ್ಶಗಳು ಭಾಷಣದ ಕೇವಲ ಭಾಷಣವಾದ ಸರಕುಗಳಾದ ವ್ಯಂಗ್ಯ ವನ್ನು ಅದೇ ತೀವ್ರತೆಯಲ್ಲಿ ದಾಖಲಿಸಿದೆ. ಬಡತನ, ನಿರುದ್ಯೋಗ,  ಅಧಿಕಾರ ಶಾಹಿ ಅಟ್ಟಹಾಸಗಳು ಭ್ರಮನಿರಸನವಾಗಿ ಕಾವ್ಯಗಳಲ್ಲಿ ಸ್ಥಾಯಿಯಾಗಿವೆ. ಕವಿ ದಿ. ಸಿದ್ಧಲಿಂಗಯ್ಯನವರ 47ರ ಸ್ವಾತಂತ್ರ್ಯ ಕಾವ್ಯ ಓದುವ ಮೂಲಕ ಭಾಷಣ ಮುಗಿಸಿದರು.

★ ಅಧ್ಯಕ್ಷತೆ: 

 ಶ್ರೀ ಡುಂಡಿರಾಜ್, ಖ್ಯಾತ ಕವಿಗಳ ಅಧ್ಯಕ್ಷತೆಯಲ್ಲಿ "ಕವಿಗೋಷ್ಠಿ" ನಡೆಯಿತು, ಸುಮಾರು 12 ಕವಿ, ಕವಯತ್ರಿಗಳು ವಾಚನ ಮಾಡಿದರು.

ಶ್ರೀವೀರಶೇಖರಸ್ವಾಮಿ 

ಶ್ರೀಮತಿ ಹಂಸ

ಶ್ರೀಮತಿ ರಾಧಿಕಾ

ಶ್ರೀ ಕೆ ಎನ್ ಮರಿಯಯ್ಯ ಸ್ವಾಮಿ

ಶ್ರೀ ಮಧುರಾ ಕರ್ಣಂ 

ಶ್ರೀಮತಿ ಶಾಂತಲಾ ಸುರೇಶ್

ಶ್ರೀಮತಿ ಶಶಿಕಲಾ ಆರ್

ಶ್ರೀಮತಿ ಮಂಜುಳಾ ಭಾರ್ಗವಿ

ಶ್ರೀಮತಿ ಸುಮಾ ಸತೀಶ್

ಶ್ರೀಮತಿ ಇಂದಿರಾ ಶರಣ್ ಜಮ್ಮಲದಿನ್ನಿ 

ಕೊನೆಯಲ್ಲಿ ಚಂದ್ರಶೇಖರ ಚಡಗರ,  ಬಿ.ವಿ. ಕೆದಿಲಾಯ ಸರ್ ಇವರುಗಳ ಕವಿತೆಯೂ ಕೇಳುವಂತಾಯಿತು

ಅಧ್ಯಕ್ಷತೆ ವಹಿಸಿದ್ದ ಕವಿಗಳಾದ ಡುಂಡಿರಾಜ್ ರವರು ಎಲ್ಲರ ಕವಿತೆಗಳ ವಿಮರ್ಶೆ ಮಾಡಿದರು. ನಂತರ ಸ್ವಾತಂತ್ರ್ಯ ಹೋರಾಟದ ಬಿಸಿ. ಸ್ವಾತಂತ್ರ್ಯದ ನಂತರ ಹುಟ್ಟಿದವರು ಫಲವನ್ನು ಪಡೆಯುತ್ತಿರುವ, ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ, ರಾಜಕಾರಣ ಕೆಟ್ಟುಹೋಗಿದೆ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜಗತ್ತಿನಲ್ಲಿ ತಲೆ ಎತ್ತಿ ನಿಂತಿರುವ ರಾಷ್ಟ್ರ ನಮ್ಮದು. ಇನ್ನಷ್ಟು ಬೆಳೆಯಲಿ  ಎಂಬ ನುಡಿಗಳೊಂದಿಗೆ ಅವರದೇ ಕವಿತೆ "ಹಾಡುಕಟ್ಟುವ ಕಾಲ" ವಾಚನ ಮಾಡುವ ಮೂಲಕ ಯಶಸ್ವೀ ಅಧ್ಯಕ್ಷತೆಗೆ ಕಾರಣವಾದರು.

ಕೊನೆಯದಾಗಿ ಚಡಗ ಸರ್ ರವರು ವೇದಿಕೆಯ ಗ್ರಂಥಾಲಯದ ಸುಮಾರು 25,000 ಪುಸ್ತಕಗಳ ಉಪಯೋಗ, ಹಣತೆ ಪ್ರಕಟಣೆಗೆ ಸಹಕಾರದ ಮಾತುಗಳ ಮೂಲಕ, ವಂದನಾರ್ಪಣೆ ಮೂಲಕ ಕಾರ್ಯಕ್ರಮ ಮುಗಿಯಿತು.

ಭಾಗವಹಿಸಿದ  ಎಲ್ಲಾ ಸಾಹಿತ್ಯ ಬಂಧುಗಳಿಗೆ  ಧನ್ಯವಾದಗಳು

ಶಶಿಕಲಾ ಆರ್

ಸಹ ಕಾರ್ಯದರ್ಶಿ

ಶಿವರಾಮ ಕಾರಂತ ವೇದಿಕೆ



No comments:

Post a Comment