ದಿನಾಂಕ ಅಗಸ್ಟ್ 08, 2021
ಗುರು ನರಸಿಂಹ ವೈದಿಕ ಮಂದಿರ, ಚಾಮರಾಜಪೇಟೆ, ಬೆಂಗಳೂರು.
ಮರಣ ಆಗಿ ಒಂದು ವರ್ಷದ ನಂತರ ಆಗುವ ಶ್ರದ್ಧಾಂಜಲಿ ಕಾರ್ಯಕ್ರಮವು ವರ್ಷಾಂತಿಕ.
ಅತ್ತಿಗೆ ಸುನಂದ ಸೋಮಯಾಜಿ ಅವರು ಕಳೆದ ವರ್ಷ ದಿನಾಂಕ 29 ಏಪ್ರಿಲ್ 2020 ರಂದು ಸ್ವರ್ಗಸ್ತರಾಗಿದ್ದರು.
ಅವರ ಉತ್ತರಕ್ರಿಯೆ ಕಾರ್ಯಕ್ರಮಗಳು ಕಳೆದ ವರ್ಷವೇ ವೈದಿಕ ಮಂದಿರದಲ್ಲಿ ಜರಗಿತ್ತು.
ಈ ವರ್ಷದ ವಾರ್ಷಿಕ ಶ್ರದ್ದಾಂಜಲಿ ಕಾರ್ಯಕ್ರಮವು ನಿನ್ನೆ ವೈದಿಕ ಮಂದಿರದಲ್ಲಿ ಹಲವಾರು ಪುರೋಹಿತರು, ಬ್ರಾಹ್ಮಣ ವರ್ಗದ ಸಮ್ಮುಖದಲ್ಲಿ ಭಕ್ತಿ, ಶ್ರದ್ಧೆಯಿಂದ ಸಂಧ್ಯಾ-ಸದಾರಾಮ್ ದಂಪತಿಯವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ತಿಲ ಹೋಮ, ವಾರ್ಷಿಕ ಶ್ರಾದ್ಧ, ದಾನ- ದಕ್ಷಿಣೆ, ಶ್ರವನಾರಾಧನೆ, ಮಂತ್ರಾಕ್ಷತೆ ಮತ್ತು ಮೃತರ ಸದ್ಗತಿಯನ್ನು ಕೋರಲು ಪುರೋಹಿತ ವರ್ಗದವರಿಂದ ಆಶೀರ್ವಚನ.
ಸುಮಾರು 50 ಕ್ಕೊ ಹೆಚ್ಚು ಮಂದಿ ಬಂಧುಗಳು, ಹಿತೈಷಿಗಳು ಬಂದಿದ್ದರು.
ಭೋಜನ ಕಾರ್ಯಕ್ರಮವೂ ಭರ್ಜರಿಯಾಗಿತ್ತು. ಇತರ ಊಟದೊಂದಿಗೆ ಸುಕ್ರುಂಡೆ, ವಡೆ, ಪಾಯಸ, ಜಿಲೇಬಿ, ಮೈಸೂರು ಪಾಕ್ ವಿಶೇಷ ವಾಗಿತ್ತು.
ಅದೊಂದು ಬಂಧುಗಳು, ಭೇಟಿಯಾಗುವ, ಕ್ಷೇಮ ಸಮಾಚಾರ ವಿಚಾರಿಸುವ, ಸ್ನೇಹ ಕೂಟ ಹಾಗೂ ಸ್ವರ್ಗಸ್ತರಾಗಿರುವ ಸುನಂದ ಸೋಮಯಾಜಿಯವರನ್ನು ಸ್ಮರಿಸುವ ದಿನವಾಗಿತ್ತು.
ಬರೆದಿರುವುದು ಸೋಮವಾರ, 9 / 8 / 2021
No comments:
Post a Comment