ಬುಧವಾರ, 25 ಅಗಸ್ಟ್, 2021
ವಾಟ್ಸ್ ಅಪ್ ನಿಂದ ಬಂದದ್ದು.
ನಾವು ಯಾವ ಧರ್ಮದ ವಿರೋಧಿಗಳೂ ಅಲ್ಲ, ನಾವು ಹಿಂದುತ್ವದ ಪ್ರಭಲ ಸಮರ್ಥಕರಷ್ಟೇ.
ಏಕೆಂದರೆ...?
# 'ವಸುದೈವ ಕುಟುಂಬಕಂ' ಅಂದ್ರೆ ಇಡೀ ಪ್ರಪಂಚವನ್ನೇ ಒಂದು ಕುಟುಂಬವಾಗಿ ನೋಡು ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.
# ಹೆಣ್ಣನ್ನ ಹೊತ್ತ ಭೂಮಿಯನ್ನ ತಾಯಿಯಂತೆ ಗೌರವಿಸು ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.
# ಇಲ್ಲಿನ ನದಿ, ನೆಲ,ಜಲ,ಪ್ರಾಣಿ ಸಕಲ ಚರಾಚರಗಳಲ್ಲಿ ಈಶ್ವರನಿದ್ದಾನೆ ಅವುಗಳನ್ನು ಪೂಜಿಸು ರಕ್ಷಿಸು ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.
# 'ಈ ರಾಷ್ಟ್ರ ದೇವನಿರ್ಮಿತರಾಷ್ಟ್ರ ಈ ನೆಲದಲ್ಲಿ ಜನ್ಮವೆತ್ತಲು ದೇವತೆಗಳೂ ಆಸೆ ಪಡುತ್ತಾರೆ ಹಾಗಾಗಿ ಈ ನೆಲದ ಪಾವಿತ್ರತೆಗೆ ದಕ್ಕೆ ಬಾರದ ಹಾಗೆ ನೋಡಿಕೊಳ್ಳಿ' ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.
# ಸ್ವಾರ್ಥಕ್ಕಾಗಿ ಎಲ್ಲರೂ ಬದುಕುತ್ತಾರೆ ನಿಸ್ವಾರ್ಥವಾಗಿ ಬದುಕಿ ಜಗತ್ತಿಗೇ ಬೆಳಕು ಕೊಟ್ಟಂತಹ ಸಂತ ಮಹಂತರನ್ನ ಜಗತ್ತಿಗೆ ಕೊಟ್ಟದ್ದು ನನ್ನ ಹಿಂದುತ್ವ.
# ವಿಶ್ವಸಂತತಿಗೆ ಒಳಿತನ್ನು ಬಯಸುವ ಗೋವನ್ನ ತಾಯಿಯಂತೆ ಕಾಣಿ ಎಂದು ಸಾರಿದ್ದು ನನ್ನ ಹಿಂದುತ್ವ.
# ಶ್ರೀಕೃಷ್ಣನ ಬೃಂದಾವನದ ಕಥೆಹೇಳಿ ಒಂದು ಹಳ್ಳಿಯ ಸ್ವಾವಲಂಬನೆ ಹೀಗಿರಬೇಕು ಎಂದು ತಿಳಿಸಿ ಕೊಟ್ಟದ್ದು ನನ್ನ ಹಿಂದುತ್ವ.
# ಪ್ರಭು ಶ್ರೀರಾಮನ ಚರಿತ್ರೆಯನ್ನ ದಶದಿಕ್ಕುಗಳಿಗೂ ಸಾರಿ ಪ್ರಜಾರಾಜ್ಯವೆಂದರೆ ಯಾವುದು.? ಪ್ರಜಾರಂಜಕನಾದ ಧರ್ಮಮೂರ್ತಿಯಾದ ರಾಜ ಹೇಗಿರಬೇಕು..? ಎಂದು ಸಮಾಜಕ್ಕೆ ತಿಳಿಸಿ ಕೊಟ್ಟದ್ದು ನನ್ನ ಹಿಂದುತ್ವ.
# 'ಸತ್ಯಂ ಶಿವಂ ಸುಂದರಂ' ಎನ್ನುತ್ತಾ ಸತ್ಯವೆಂದರೆ ಬೇರಲ್ಲ ಸಾಕ್ಷಾತ್ ಶಿವನೇ ಶಿವನೆಂದರೆ ಬೇರೆಯಲ್ಲ ಅದು ಜಗತ್ತಿನಲ್ಲೇ ಸುಂದರವಾದ ಸತ್ಯ ಎನ್ನುತ್ತಾ ಸತ್ಯಕ್ಕೆ ಶಿವನನ್ನೇ ಹೋಲಿಸಿದ್ದು ನನ್ನ ಹಿಂದುತ್ವ.
# ಪ್ರತಿ ನಿತ್ಯ ಆಲಯ ಮಂದಿರಗಳಲ್ಲಿ ಮೊಳಗುವ ವೇಧ ಘೋಷಣೆಗಳಲ್ಲಿ ಸಕಲ ಸೃಷ್ಟಿಗೂ ಸoನ್ಮಗಳವನ್ನ ಭಗವಂತನಲ್ಲಿ ಕೋರುವುದು ನನ್ನ ಹಿಂದುತ್ವ.
"ಆತ್ಮದೀಪೋಭವ" ಎನ್ನುವ ಬುದ್ಧನ ವಾಣಿಯಂತೆ ಇಷ್ಟು ಆದರ್ಶಗಳನ್ನ ಜಗತ್ತಿಗೆ ಸಾರಿ ನರನ ಆತ್ಮವನ್ನು ಜಗತ್ತಿನ ಹಿತಕ್ಕಾಗಿ ಅಣಿಗೊಳಿಸಿ ನರನನ್ನೇ ನಾರಾಯಣನನ್ನಾಗಿಸಬಲ್ಲ ತಾಕತ್ತಿರುವ ಏಕೈಕ ತತ್ವ ನನ್ನ ಹಿಂದುತ್ವ.
ಈಗ ಹೇಳಿ ಜಗತ್ತಿನಲ್ಲಿ ಮತ್ಯಾವುದಾದರೂ ಧರ್ಮಗಳಲ್ಲಿ ಈ ಶ್ರೇಷ್ಠಗುಣಗಳು ಇರಲು ಸಾಧ್ಯವೇ...?
ಅಹರ್ನಿಷಿ ಜಗತ್ತಿನ ಕಲ್ಯಾಣ ಕೋರುವ ಈ ನೆಲದ ಅಸ್ಮಿತೆಯಾದ ಹಿಂದುತ್ವದ ಸಮರ್ಥಕರಾದ ನಮ್ಮನ್ನು ನೀವು ಕೋಮುವಾದಿಗಳು ಎಂದರೆ ಅದು ನಿಮ್ಮ ದೌರ್ಭಾಗ್ಯ.
ನಮಗೆ ಹೆಮ್ಮೆಯಿದೆ ಜಾತ್ಯಾತೀತತೆಯ ಸೋಗಿನಲ್ಲಿ ನಾಟಕವಾಡುವ ಬದಲಿಗೆ ಸ್ವಂತಿಕೆಯ ಸಮರ್ಥಕರಾಗಿದ್ದೇವೆ ಎಂದು ಹೇಳಿಕೊಳ್ಳಲು.
ಜೈ ಹಿಂದ್🚩
✍️ಅಭಿಲಾಷ್ ಪಂಡ್ರಳ್ಳಿ
No comments:
Post a Comment