Sunday, October 31, 2021

CUBBON PARK - SUNDAY MORNING

 Sunday 31 October 2021

CUBBON PARK, BENGALURU


It's just another Sunday. Rishi calls in the morning 6 am, and says come to Cubbon Park, we are going there.

I wake up amma and said get ready, we are going to Cubbon Park.






So we are there by 7.45am and Rishi, Kavitha, Atharv and Seena came after some time.

Little Atharv (Agugu) was excited seeing us and so also seena.

In the mean time, mummy narrated one story.


There was a nice garden like yard with a room, probably was a NAGA BANA one time, now closed. Outside yard with lot of handing creepers and a nice shaded place to spend time.



We also had some time on our way back.


By 11 am we were out from the Park and then Nisarga Grand for breakfast.




It was nice quality time spent and we were back home by 12 noon.

written on 1st November 2021




Saturday, October 30, 2021

80 yrs CELEBRATION SRINIVASA TANTRY

 ಶನಿವಾರ, 30 ಅಕ್ಟೋಬರ, 2021 

ಸುಬ್ರಮಣ್ಯ ಮಠ, ಬಸವನಗುಡಿ, ಬೆಂಗಳೂರು.


80 ವರ್ಷಗಳ ಸಾರ್ಥಕ ಜೀವನವನ್ನು ಕಳೆದ ಸಂಭ್ರಮ.

ಸಹಸ್ರ ಚಂದ್ರ ದರ್ಶನ - ಕಾರ್ಯಕ್ರಮದ ಹೆಸರು. 

ಶ್ರೀನಿವಾಸ ತಂತ್ರಿ, ಸರೋಜಿನಿ (ಅತ್ತಿಗೆಯ ತಂಗಿ) - ದಂಪತಿಗಳು.


ವಿದ್ಯಾ, ಪ್ರವೀಣ ಹಾಗೂ ಪ್ರಶಾಂತ ಅವರ ಮಕ್ಕಳು.

ಚಿಕ್ಕಂದಿನಿಂದಲೇ ಪರಿಚಯ, ಒಡನಾಟ. ಉಡುಪಿಯ ಆರೂರಿನಲ್ಲಿ ಸರೋಜಿನಿಯ ಹೆತ್ತವರು. ಆರೂರು ಮೀಸೆ  ಗುಂಡೂರಾಯರು, ಅವಳ ತಂದೆ. 



ಮೈಸೂರಿನಲ್ಲಿ ಹಲವಾರು ವರ್ಷಗಳ ಕಾಲ ಇದ್ದು, ಈಗ ಬೆಂಗಳೂರಿನಲ್ಲಿ ವಾಸ.



ವಿದ್ಯಾಳ ಗಂಡ ಪ್ರಕಾಶ್ ವೈಲಾಯ,  ಗದಗದಲ್ಲಿ ಮನೆ ವಾಸ, ಯಶಸ್ವಿ ಉದ್ಯಮಿಗಳು.

ನಾವು ಒಮ್ಮೆ ಅವರಲ್ಲಿಗೆ ಭೇಟಿ  ಇತ್ತು ಅವರ ಆತಿಥ್ಯವನ್ನು ಸ್ವೀಕರಿಸಿದ್ದೆವು.




ಬಸವನಗುಡಿಯಲ್ಲಿಯ ಸುಬ್ರಮಣ್ಯ ಮಠದಲ್ಲಿ ಕಾರ್ಯಕ್ರಮದ ಸಂಭ್ರಮ. ಸುಮಾರು ನೂರಕ್ಕೂ ಹೆಚ್ಚು ಬಂಧುಗಳು, ಸ್ನೇಹಿತರು, ಹಿತೈಷಿಗಳು ಸಂಭ್ರಮದಲ್ಲಿ ಭಾಗಿಯಾಗಿದ್ದರು.




ವಿಶೇಷ ಭೋಜನ, ಹೋಳಿಗೆ, ಜಹಾಂಗೀರ್ , ಪಾಯಸದ ಭರ್ಜರಿ ಊಟ.


ಊಟದ ನಂತರ ಬಂಧುಗಳ, ಸ್ನೇಹಿತರ ಕ್ಷೇಮ ಸಮಾಚಾರ, ವಿಚಾರ, ವಿನಿಮಯ.


ಒಳ್ಳೆಯ ಕಾರ್ಯಕ್ರಮ/

ಬರೆದಿರುವುದು 31 ಅಕ್ಟೋಬರ 2021 


Friday, October 29, 2021

ಪುನೀತ್ ರಾಜಕುಮಾರ್ - ಶ್ರದ್ಧಾಂಜಲಿ

ಶುಕ್ರವಾರ, 29 ಅಕ್ಟೋಬರ, 2021 

ಕನ್ನಡ ಚಿತ್ರರಂಗದ ಮೇರು ನಟ, ಅಪಾರ ಅಭಿಮಾನಿಗಳನ್ನು ಹೊಂದಿದ 46 ವರ್ಷದ ತರುಣ, 

( born 17 ಮಾರ್ಚ್ 197 5 )  ಪುನೀತ್  ರಾಜಕುಮಾರ್ ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿರುವುದು ಅತ್ಯಂತ ದುಖದ ಸಂಗತಿ.



ನಟಸಾರ್ವಭೌಮ ಡಾ ರಾಜಕುಮಾರ್ ಅವರ ಕಿರಿಯ ಪುತ್ರನಾಗಿದ್ದು, ಬಾಲ್ಯದಿಂದಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಹೆಸರನ್ನು ಗಳಿಸಿದವನಾಗಿದ್ದು ಈ ವಯಸ್ಸಿನಲ್ಲಿ ಹಠಾತ್ ನಿಧನರಾಗಿರುವುದು ನಂಬಲಾರದ, ಅರಗಿಸಿಕೊಳ್ಳಲಾರದ ಸುದ್ದಿಯಾಗಿದೆ.

ಸದಾ ನಗುಮುಖದ, ಎಲ್ಲರೊಡನೆ ಸ್ನೇಹದಿಂದ ಬೆರೆಯುವ ಸ್ನೇನಜೀವಿ, ಮಾನವೀಯ ಮೌಲ್ಯಗಳಿಗೆ ಅಪಾರ ಗೌರವ ನೀಡುವ, ಸಮಾಜ  ಸೇವೆಯ ಮೂಲಕ ಜನರ ಹೃದಯವನ್ನು ಗೆದ್ದ ನಟ ಪುನೀತ್ ರಾಜಕುಮಾರ  ಇನ್ನಿಲ್ಲವಾಗಿರುವುದು, ತುಂಬಲಾರದ ನಷ್ಟವಾಗಿದೆ. 

ಈ ಸಮಯದಲ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ,  ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ  ಎಂದು ಪ್ರಾರ್ಥನೆ.

ಬಾಲ ಪ್ರತಿಭೆ ಪುನೀತ್ 

ನಮನಗಳು:

ಶ್ರೀಕಾಂತ ಪ್ರಸಾದ್
ನಿನ್ನ ನೆನಪೇ ಅಮರ ನಮ್ಮ ಪುನೀತ
ಬಣ್ಣದಾ ಬದುಕಲ್ಲಿ ಕಾಲಿಟ್ಟ ಗಳಿಗೆಯದು
ಬಣ್ಣನೆಗೂ ಸಿಗದಿಂದು ಕೊನೆಯ ದಿವಸದಲಿ
ಅಣ್ಣಂದಿರಿರುವಾಗ ತಮ್ಮನಿಗೆ ಸೂಳಾಯ್ತೆ
ಕಣ್ಣ ಮುಂದಿನ ಬೊಂಬೆ ಇಲ್ಲವಾಯ್ತೆ||
ಅಕ್ಕರೆಯ ಮಗನಾಗಿ ಸಕ್ಕರೆಯ ಸವಿ ನೀಡಿ
ಕಕ್ಕುಲತೆಯಿಂದೆಲ್ಲ ಮಾತನಾಡುತಲಿ
ಬಿಕ್ಕು ತಾ ಬರುವಂತೆ ಮಾಡಿ ಹೋದೆಯ ಅಪ್ಪು
ದಿಕ್ಕೆಟ್ಟ ಅಭಿಮಾನಿಗಳದೇನು ತಪ್ಪು||
ಪ್ರೇಮದಾ ಕಾಣಿಕೆಯೊ ಭಕ್ತ ಪ್ರಹ್ಲಾದನೋ
ಭೂಮದಲಿ ಕಂಡೆ ನಾ ಬೆಟ್ಟದಾ ಹೂವು
ರಾಮನಂತೆಯೆ ಬದುಕಿ ಭೀಮನಂತೆಯೆ ಬಾಳಿ
ಶಾಮನಂತೆಯೆ ಎಲ್ಲಿ ಕಾಣದಾದೆ||
ಕುಡಿದ ಹಾಲದು ತುಟಿಯ ಮೇಲಿನ್ನೂ ಮಾಸದಿಹ
ಮಿಡಿದ ನಗುವದು ಮೊಗದಿ ಬಾಡಿಲ್ಲವಿನ್ನೂ
ಕುಡಿಯ ಕಡೆ ಬಾಡಿತದು ಏಕೊ ಅರಿವಾಗದಿದೆ
ಕಡೆಯ ಮಗ ಮೊದಲಾದ ಸಾವ ಮನೆಗೆ||
ಎಷ್ಟೊಂದು ಶಾಲೆಗಳು ವೃದ್ಧಾಶ್ರಮಗಳಿವೆಯೊ
ಅಷ್ಟೇ ಅನಾಥರಿಗೆ ಬಡವರಿಗೆ ದಾನಿ
ಎಷ್ಟು ಮಾಡಿದರೇನು ಅಷ್ಟು ಪುಣ್ಯದ ಜೊತೆಗೆ
ಇಷ್ಟೇಕೆ ಬೇಗ ತೆರಳಿದೆಯೊ ನೀನು||
ರಾಜಣ್ಣನಿದ್ದಾಗ ಬೇರೇನೂ ಬೇಕಿಲ್ಲ
ರಾಜನಳಿದಂದು ನೀ ಯುವರತ್ನವಾದೆ
ರಾಜನಂತೆಯೆ ಬದುಕಿ ರಾಜಿಸಿದೆ ಕೀರ್ತಿಯಲಿ
ರಾಜನಿಗು ಬರಬಹುದೆ ಬೇಗ ಸಾವು||
ನಿನ್ನ ನೆನಪಲಿ ಸಿನಿಮ ಕತೆಗಳನು ಹೇಳುತಿವೆ
ನಿನ್ನ ಅಗಲಿಕೆಯಲ್ಲಿ ಪಾತ್ರಗಳು ಉಳಿದು
ನಿನ್ನ ವ್ಯಕ್ತಿತ್ವವದು ಜನರಮನದಲಿ ತಾನು
ಚಿನ್ನವಾಗುಳಿಯುವುದು ಅಪ್ಪಿನಿಂದು||
ಹೋಗಿ ಬಾ ಲೋಹಿತನೆ ಹರಿಶ್ಚಂದ್ರಕಥೆಯಲಿ
ಸಾಗಿ ಬಂದಂತೆ ಜೀವವದು ಬರಬಹುದೆ
ಕೂಗಿ ಕರೆದರು ನೀನು ಬಾರದಿಹ ಲೋಕಕ್ಕೆ
ಸಾಗಿದೆ ಪುನೀತನೊಲು ಪುಣ್ಯವಾಗಿ||
ಅಗಲಿದ ಪುನೀತ್ ರಾಜ್ ಕುಮಾರ್ ಗೆ ಕಾವ್ಯ ನಮನ.
ಭಾವಪೂರ್ಣ ಶ್ರದ್ಧಾಂಜಲಿ.
© ತನಾಶಿ.




ಶ್ರದ್ಧಾಂಜಲಿ:
ನಗುಮೊಗದ ಸರದಾರ
ನಗುವ ಹಂಚಿದ ಧೀರ
ಪ್ರತಿಭೆಗಳ ಮಹಾ ಆಗರ
ಸೇವೆಯಲಿ ಅಗ್ರೇಸರ
ನೀನೇಕೆ ಸಾಗಿದೆ ಬಲುದೂರ?!!

ಹಮ್ಮಿಲ್ಲದ ವಿನಯ ಸೌಜನ್ಯ
ನಿನ್ನ ಹಡೆದ ಪಡೆದವರೆಷ್ಟು ಧನ್ಯ
ಕರುನಾಡ ಕಣ್ಮಣಿ ಮಾನ್ಯ
ನೀನೆಲ್ಲ ನಾಯಕರಲಿ ಅನನ್ಯ
ಪದಗಳು ಸಾಲದು ಬಣ್ಣಿಸಲು ಗಣ್ಯ!

ಕೋಟಿ ಜನಮನ ಗೆದ್ದವ
ಮಾನವೀಯತೆ ಮೆರೆದವ
ಶುದ್ಧ ಅಂತಃಕರಣದವ
ಜನಮಾನಸದಿ ನೆಲೆನಿಂತವ
ಭಗವಂತಗೆ ಅತಿಪ್ರಿಯನಾದವ!!

ಪುನೀತ ಹೆಸರಿಗೆ ಅನ್ವರ್ಥಕ
ಬಾಳಿ ನಡೆದೆ ಅವಸರದಿ ಪರಲೋಕ
ಅನಂತದಲಿ ಲೀನವಾಗುತ ನಾಕ
ಪದಗಳಿಲ್ಲ ಪ್ರಕಟಿಸಲು ಈ ಶೋಕ
ಹುಟ್ಟಿ ಬಾ ಮತ್ತೊಮ್ಮೆ ಅಪ್ಪು** ಜನ ನಾಯಕ!!

ಯಶೋದಾ ಭಟ್ಟ ದುಬೈ





ಶ್ರೀ ಗಣೇಶ್ ರೈ ಅವರಿಂದ ಅಂತಿಮ ನಮನ 


ಓಂ ಶಾಂತಿ, ಓಂ  ಸದ್ಗತಿ ....

ಬರೆದಿರುವುದು ಶನಿವಾರ, 30 ಅಕ್ಟೋಬರ 

Thursday, October 28, 2021

ಮಾತಾಡ್ ಮಾತಾಡ್ ಕನ್ನಡ

 ಗುರುವಾರ, 28 ಅಕ್ಟೋಬರ 2021 

ವಿಧಾನ ಸೌಧ, ಬೆಂಗಳೂರು.





ಅದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರಕಾರದ ಕನ್ನಡ ಮತ್ತು ಸಂಸ್ಕೃತಿ ವಿಭಾಗವು ಆಯೋಜಿಸಿದ "ಮಾತಾಡ್ ಮಾತಾಡ್ ಕನ್ನಡ " ಕಾರ್ಯಕ್ರಮ.

ವಿಧಾನ ಸೌಧದ ಮುಂಭಾಗದಲ್ಲಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ನಾವೂ ಹೋಗಿದ್ದೆವು.





"ಲಕ್ಷ ಕಂಠಗಳ ಗೀತ ಗಾಯನ" - ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಗೂ ಮನೆಮನೆ ಗಳಲ್ಲಿ ಸಾಮೂಹಿಕವಾಗಿ ಕನ್ನಡದ ಪ್ರಸಿದ್ಧ ಮೂರು ಹಾಡುಗಳನ್ನು ಹಾಡುವುದು. "ಗೀತ ಗಾಯನ" 

1. ರಾಷ್ಟ್ರಕವಿ "ಕುವೆಂಪು" ಅವರ "ಬಾರಿಸು ಕನ್ನಡ ಡಿಂಡಿಮವ "

2. ಕೆ ಎಸ್. ನಿಸಾರ್ ಅಹ್ಮದ್ ಅವರ "ಜೋಗದ ಸಿರಿ ಬೆಳಕಿನಲ್ಲಿ"

3. ಡಾ. ಹಂಸ ಲೇಖ ಅವರ "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು"

ನಾವೂ ಈ ಹಾಡುಗಳನ್ನು ಹಾಡಿ ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆವು.


ಅದೂ ಒಂದು ಆಸಕ್ತಿಯಿಂದ ಮಾಡಿದ ವೀಡಿಯೋ. ಅಷ್ಟು ಚೆನ್ನಾಗಿ ಬಂದಿರಲಾರದು. ಆದರೂ ಒಂದು ಪ್ರಯತ್ನ.


ಅಭಿಯಾನದಲ್ಲಿ ಭಾವಹಿಸಿದ ಸಂಭ್ರಮ.

ಬರೆದಿರುವುದು ಶುಕ್ರವಾರ 29 ಅಕ್ಟೋಬರ 



Saturday, October 23, 2021

WEDDING BEEGARA OUTHANA - DHEERAJ

 Saturday, 23rd October 2021

Krishna Vadiraja Mandira, Chamarajapete, Bengaluru.


That was Satyanarayana Pooje and Beegara Outhana of Dheeraj, s/o Raghavendra Rao who is Nalini's Atte Maga.



The wedding took place in Mangalore on 18th October,which we didn't attend.


We were on time for the gathering, pooja. After the pooja and prasada, it was time for grand lunch (Feast) as usual.




There were more than 100 people, all seated orderly on chair and tables Feast was with usual items, sweet with Badam Puri, Badam Halva and Payasa.



After lunch, socializing and bye-bye.

Written on Sunday, 24th Oct. 2021




Thursday, October 21, 2021

HAPPY BIRTHDAY - SHAMA

Tuesday, 12th October 2021

Birthi, Salekeri

"Shama" beautiful girl from the family, celebrating her Birthday.

As we were in Birthi, Salekeri, we tried to make her Birthday Happy by bringing a Cake, and cutting it.





Only me, Nalini and Dodda were there. Abhilasha, was away attending to her mother.



It was heavy rain day, we managed to look for cake in Udupi and small gift for her.



Shama working as software engineer for last three years.


Sadaram,Sandhya, Shivara, Meera on 15thOct at Birthi

God Bless her and wish her many many more Happy Returns of the day.


Posted on Friday, 22nd Oct.2021