Thursday, October 28, 2021

ಮಾತಾಡ್ ಮಾತಾಡ್ ಕನ್ನಡ

 ಗುರುವಾರ, 28 ಅಕ್ಟೋಬರ 2021 

ವಿಧಾನ ಸೌಧ, ಬೆಂಗಳೂರು.





ಅದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರಕಾರದ ಕನ್ನಡ ಮತ್ತು ಸಂಸ್ಕೃತಿ ವಿಭಾಗವು ಆಯೋಜಿಸಿದ "ಮಾತಾಡ್ ಮಾತಾಡ್ ಕನ್ನಡ " ಕಾರ್ಯಕ್ರಮ.

ವಿಧಾನ ಸೌಧದ ಮುಂಭಾಗದಲ್ಲಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ನಾವೂ ಹೋಗಿದ್ದೆವು.





"ಲಕ್ಷ ಕಂಠಗಳ ಗೀತ ಗಾಯನ" - ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಗೂ ಮನೆಮನೆ ಗಳಲ್ಲಿ ಸಾಮೂಹಿಕವಾಗಿ ಕನ್ನಡದ ಪ್ರಸಿದ್ಧ ಮೂರು ಹಾಡುಗಳನ್ನು ಹಾಡುವುದು. "ಗೀತ ಗಾಯನ" 

1. ರಾಷ್ಟ್ರಕವಿ "ಕುವೆಂಪು" ಅವರ "ಬಾರಿಸು ಕನ್ನಡ ಡಿಂಡಿಮವ "

2. ಕೆ ಎಸ್. ನಿಸಾರ್ ಅಹ್ಮದ್ ಅವರ "ಜೋಗದ ಸಿರಿ ಬೆಳಕಿನಲ್ಲಿ"

3. ಡಾ. ಹಂಸ ಲೇಖ ಅವರ "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು"

ನಾವೂ ಈ ಹಾಡುಗಳನ್ನು ಹಾಡಿ ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆವು.


ಅದೂ ಒಂದು ಆಸಕ್ತಿಯಿಂದ ಮಾಡಿದ ವೀಡಿಯೋ. ಅಷ್ಟು ಚೆನ್ನಾಗಿ ಬಂದಿರಲಾರದು. ಆದರೂ ಒಂದು ಪ್ರಯತ್ನ.


ಅಭಿಯಾನದಲ್ಲಿ ಭಾವಹಿಸಿದ ಸಂಭ್ರಮ.

ಬರೆದಿರುವುದು ಶುಕ್ರವಾರ 29 ಅಕ್ಟೋಬರ 



No comments:

Post a Comment