ಭಾನುವಾರ, 5 ದಶಂಬರ 2021
ಅಂಬಲಪಾಡಿ, ಉಡುಪಿ.
ಸಂಗೀತ ವಿದೂಷಿ ಶ್ರೀಮತಿ ವಸಂತಿಅಕ್ಕ ನವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಪಿಟೀಲು ವಾದನದಲ್ಲಿ ವಿದ್ವತನ್ನು ಗಳಿಸಿದ್ದವರು.ಅವರ ಪತಿ ಶ್ರೀ ರಾಮಭಟ್ ಅವರು, ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದರು.
ಡಾ ಸತೀಶ್ ಪತ್ನಿ ಜ್ಯೋತಿ ಯವರೊಡನೆ ವಸಂತಿ ಅಕ್ಕ |
ಇಂದು ಅವರು ರಾಗಧನ ಬಳಗದವರು ಅಂದಂತೆ "ರಾಗದಲ್ಲಿ ಲೀನವಾದ ನಮ್ಮ ವಿದೂಷಿ ವಸಂತಿ ಅಕ್ಕ"
ನಾದದಲ್ಲಿ ಲೀನರಾದ ವಿದುಷಿ ವಸಂತಿಯಕ್ಕ
ತನ್ನ ಮೆಚ್ಚಿನ ಶಿಷ್ಯ ಪ್ರಮಥ ಭಾಗವತ್ (ಮೃದಂಗ ವಿದ್ವಾನ್ ಬಾಲಚಂದ್ರ ಭಾಗವತರ ಪುತ್ರ) ನಿಗೆ ಈ ದಿನ ಸಂಜೆ ಕಾಂಭೋಜೀ ರಾಗದಲ್ಲಿ ವಯೊಲಿನ್ ನುಡಿಸಾರಿಕೆಯನ್ನು ಹೇಳಿ ಕೊಡುತ್ತಿದ್ದ ವಿದುಷಿ ವಸಂತಿ ರಾಮ ಭಟ್ (ರಾಗಧನದ ಹಿರಿಯ ಸದಸ್ಯೆ, ನಮ್ಮೆಲ್ಲರ ಪ್ರೀತಿಯ ವಸಂತಿಯಕ್ಕ) ತುಸು ಆಯಾಸಗೊಂಡು ಅಲ್ಲೇ ವಿರಮಿಸಿದರಂತೆ.. ಅವರು ಅಸೌಖ್ಯದಲ್ಲಿರುವುದನ್ನು ಗಮನಿಸಿ, ಅವರನ್ನು ಸಮೀಪದ ಹೈಟೆಕ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದ ವಸಂತಿಯಕ್ಕ, ನಾದಸರಸ್ವತಿಯಲ್ಲಿ ಲೀನವಾದ ವಿಷಯ ಇದೀಗ ತಿಳಿದು ಬಂತು...
ಮೊನ್ನೆಯಷ್ಟೇ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿದ ೪೩ನೆಯ ವಾದಿರಾಜ ಕನಕದಾಸ ಸಂಗೀತೋತ್ಸವ - ೨೦೨೧ರ ಶುಕ್ರವಾರ ಸಂಜೆ ಕುಮಾರಿ ಭಾಮಿನಿ ಭಟ್ ಪುತ್ತೂರು ಇವರಿಗೆ ವಯೋಲಿನ್ ಸಹವಾದನ ನೀಡಿ, ಆಶೀರ್ವದಿಸಿದ್ದರು ವಸಂತಿಯಕ್ಕ...
ಮಧೂರು ಮಾಧುರ್ಯದ ವತಿಯಿಂದ ವಿದ್ವಾನ್ ಮಧೂರು ಸರ್ ಜತೆಗೂಡಿ ವಿದುಷಿ ವಸಂತಿಯಕ್ಕನವರಿಗೆ ಕಳೆದ ವರ್ಷ ಸನ್ಮಾನ ಮಾಡಿದ್ದೆವು.... ಅವರು ಇಂದು ನಮ್ಮೊಂದಿಗಿಲ್ಲ... 😔.
ವಸಂತಿಯಕ್ಕನವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವ ರಾಗಧನ ಬಳಗ...
82 ವರ್ಷಗಳ ತಮ್ಮ ಸಾರ್ಥಕ ಜೀವನವನ್ನು ನಡೆಸಿ, ಸಾಕಷ್ಟು ವಿಧ್ಯಾರ್ಥಿಗಳಿಗೆ ಸಂಗೀತ, ಪಿಟೀಲು ನಾದವನ್ನು ಹರಸಿ, ಹೃದಯಾಘಾತದಿಂದ, ಏಕಾಏಕಿ, ಯಾರಿಗೂ ತೊಂದರೆ ಕೊಡದೇ ಇಹ ಲೋಕ ತ್ಯಜಿಸಿರುವುದು ಅವರು ಮಾಡಿದ ಪುಣ್ಯ ಕೆಲಸದಿಂದಾಗಿಯೂ ಇರಬಹುದೇನೋ??2012 ಸಂಗೀತ ಮಾಲಿಕೆ ಕಾರ್ಯಕ್ರಮದಲ್ಲಿ |
ಅವರ ಆತ್ಮಕ್ಕೆ ಚಿರಶಾಂತಿ, ಸದ್ಗತಿಯನ್ನು ಮತ್ತು ಅವರ ಕುಟುಂಬ, ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಎಂದು ನಮ್ಮೆಲರ ಪ್ರಾರ್ಥನೆ.
ಓಂ ಶಾಂತಿ, ಓಂ ಸದ್ಗತಿ ......
ಬರೆದಿರುವುದು, ಮಂಗಳವಾರ ಡಿಸೆಂಬರ 7, 2021
ಓಂ ಶಾಂತಿ.... ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಮತ್ತು ಕುಟುಂಬದವರಿಗೂ, ಶಿಷ್ಯ ವೃಂದ, ಒಡನಾಡಿ ಬಳಗಕ್ಕೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
ReplyDeleteಉತ್ತಮ ಬರಹ ಹಾಗೂ ಸಂಕಲನ.
ಧನ್ಯವಾದಗಳು.
ನಿಮ್ಮ ಪ್ರತಿಸ್ಪಂದನಕ್ಕೆ ಧನ್ಯವಾದಗಳು ರಾಮಚಂದ್ರ ಉದುಪರೆ...
ReplyDeleteOm Shanthi
Delete