Sunday, 24th September 2023
Kamadhenu Kshetra, Kammasandra main road, Lakshmipura post , Dasanapura Hobli , Bengaluru North 562123
ಅದ್ಭುತವಾದಂತಹ " ಶ್ರೀ ಗುರುರಾಯರ" ಸಾಲಿಗ್ರಾಮ ಶಿಲಾ ಮೃತಿಕಾ ಬೃಂದಾವನ ಸನ್ನಿಧಾನವು ಮಹತ್ತರವಾಗಿ ಮೂಡಿಬಂದಿದ್ದು ,ಇದರೊಂದಿಗೆ ಸುಮಾರು 70 - 80 ಲಕ್ಷ ಶ್ರೀ ರಾಯರ ಮಹಾಪ್ರಸಾದವನ್ನು ಸ್ವೀಕರಿಸಿದ್ದಾಗಿ " ಶ್ರೀ ಗುರುರಾಯರ " ಅನುಗ್ರಹ ಈ ಮಹಾಪ್ರಸಾದದ ಪಾತ್ರೆ ಅಕ್ಷಯ ವಾಗಿಯೇ ಇರುವುದು ಶ್ರೀ ಗುರುರಾಯರ ಮಾತೃ ಹೃದಯಕೆ ಸಾಕ್ಷಿ .ಎಷ್ಟು ಜನಸ್ತೋಮ ಜನಸಾಗರ ಬಂದಾಗ (ಪ್ರತಿ ಗುರುವಾರ ಭಾನುವಾರ 15ರಿಂದ 20 ಸಾವಿರ ಜನ) ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿರುವ ಮಹಾತ್ಮರು ಶ್ರೀ ರಾಘವೇಂದ್ರ ತೀರ್ಥರು.ಈ ಅಮೃತಗಳಿಗೆ ಯಾರು ನಿರೀಕ್ಷಿಸಿದ ರೀತಿಯಲ್ಲಿ ಭಕ್ತ ಜನಕೋಟಿಯನ್ನು ಬರಮಾಡಿಕೊಂಡರು .ಇದು ಹೇಗೆ ಎಂದರೆ, ಶ್ರೀನಿವಾಸನ ದರ್ಶನ ಕಾಂಕ್ಷಿಯಾಗಿ ಹೋದಾಗ ಆ ಭಕ್ತ ಜನ ಸಾಗರವನ್ನು ಕಂಡು ಹೀಗೆಂದು ನೋಡಿದಿದ್ದಾರೆ- ಅವರು ಹಾಡಿನಲ್ಲಿ ನಿನ್ನ ದರ್ಶನಕ್ಕೆ ಬಂದವನಲ್ಲ ನಾನು ಈ ಹಾಡಿನಲ್ಲಿ ಹೇಳುತ್ತಾರೆ .ಎಷ್ಟು ಜನ್ಮದಲ್ಲಿ ಜ್ಞಾನ ಸಂಪಾದಿಸಿದರೆ , ಎಷ್ಟು ಹವನ - ಹೋಮ ಮಾಡಿದರೆ, ಎಷ್ಟು ಜಪ - ತಪ ಮಾಡಿದರೆ, ಇಷ್ಟು ಜನರು ಸೇರಲಿಕ್ಕೆ ಸಾಧ್ಯ ಏ ! ಶೀನಿವಾಸ ನೀನಿರುವ ಸ್ಥಳವೇ ಪವಿತ್ರ ಸ್ಥಳ , ನೀನಿರುವ ಜಾಗವೇ ಸರ್ವತೀರ್ಥದ ಫಲ, ನಿನ್ನ ದರ್ಶನವೇ ಸರ್ವ ಯಾತ್ರೆಯ ಫಲ ಎಂದು ಹೇಳಿದಂತೆ, ಕಾಮಧೇನು ಕ್ಷೇತ್ರವು " ಶ್ರೀ ಗುರುರಾಯರ" ಪವಿತ್ರ ಸನ್ನಿಧಾನವಾಗಿದ್ದು ಅವರ ದರ್ಶನವೇ ಸರ್ವ ಪಾಪ ಗಳ ಪರಿಹಾರ ಅವರ ಪಾದೋದಕವೇ ಸರ್ವ ರೋಗ - ರುಜಿನಗಳ ನಿವಾರಣೆ - ಅವರ ಫಲಮಂತ್ರಾಕ್ಷತೆಯೇ ಸರ್ವಾಭಿಷ್ಟ ಅವರ ಸೇವೆಯೇ ಜೀವನದ ಪರಮ ಜ್ಯೋತಿ - ಹೀಗೆ ಇರುವ "ಶ್ರೀ ಗುರುರಾಯರ" ವಿಶೇಷ ಸನ್ನಿಧಾನವೇ ಕಾಮಧೇನು ಕ್ಷೇತ್ರ.
Link address:
https://www.kamadhenu-kshetra.com/
ಸುಂದರ ವಾತಾವರಣದಲ್ಲಿ ಇರುವ ಶ್ರೀ ಕಾಮಧೇನು ಕ್ಷೇತ್ರ ಸಾವಿರಾರು ದಿನಂಪ್ರತಿ ಸಾವಿರಾರು ಜನರನ್ನು ಆಕರ್ಷಿಸುತ್ತದೆ.
ಬೆಂಗಳೂರಿನಿಂದ ಸುಮಾರು 50 ಕಿ.. ಮೀ. ನಲ್ಲಿರುವ ಈ ಸ್ಥಳ, ನೆಲಮಂಗಲದ ಹತ್ತಿರ ತಿರುಗಿ ಸುಮಾರು 10 ಕಿ.ಮೀ ದೂರದಲ್ಲಿ ಈ ಜಾಗ ಸಿಗುತ್ತದೆ.
ಭಕ್ತಾದಿಗಳು ಶ್ರೀ ಗುರು ರಾಯರಿಗೆ ದೀಪ ಸೇವೆಯನ್ನು ಮಾಡಿ, ದರ್ಶನವನ್ನು ಮಾಡಿ, ಧ್ಯಾನ ಮಾಡಿ, ಪ್ರಸಾದ (ಮೊಸರು ಗಂಜಿ) ಯನ್ನು ಸ್ವೀಕರಿಸಿ ಕ್ರತಾರ್ಥರಾಗಬಹುದು
No comments:
Post a Comment