ಮಂಗಳವಾರ, 19 ನೇ ಸಪ್ಟಂಬರ 2023
ಗಣೇಶ ಚತುರ್ಥಿ ಸಂಭ್ರಮ - ಶೃಂಗೇರಿ ಶಂಕರ ಮಠ
|| ಪ್ರಣಾಮ್ಯ ಶಿರಸಾ ದೇವಂ ಗೌರಿಪುತ್ರಂ ವಿನಾಯಕಂ |
ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ||
ಎಲ್ಲೆಲ್ಲೂ ಗಣೇಶ ಚತುರ್ಥಿಯ ಸಂಭ್ರಮಾಚರಣೆ
ಶೃಂಗೇರಿ ಶಂಕರ ಮಠದಲ್ಲಿ ಅದ್ದೂರಿಯ ಪೆಂಡಾಲ್ ಗಳು, ಪೂಜೆ, ಸೇವೆ, ಸಂಗೀತ, ನೃತ್ಯಗಳ ಕಾರ್ಯಕ್ರಮಗಳು.
ಭಾರತದಲ್ಲಿ ಯಾವುದೇ ಜಾತಿ, ಮತ, ಪಂಥಗಳ ಬೇಧಭಾವವಿಲ್ಲದೆ ಅತ್ಯಂತ ವೈಭವದಿಂದ ಆಚರಿಸುವ ಹಬ್ಬವೆಂದರೆ ಗಣೇಶ ಚತುರ್ಥಿ ಹಬ್ಬವಾಗಿದೆ. ಸಕಲ ವಿಘ್ನಗಳನ್ನು ನಿವಾರಿಸುವ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ , ಆಯುಷ್ಯ ,ಆರೋಗ್ಯ , ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ.
ಬಿರ್ತಿಮನೆ, ಬೆಂಗಳೂರು, ಹತ್ತಿರದ ಮುಖ್ಯ ರಸ್ತೆಯಲ್ಲಿ ಗಣೇಶ ವಿಸರ್ಜನೆಯ ಸಂಭ್ರಮ 20/9/2023
ದಾಸಶ್ರೇಷ್ಟರುಗಳು ಗಣಪತಿಯ ದೇವರನಾಮಗಳನ್ನು ರಚಿಸಿ ಅವನನ್ನು ಹಲವಾರು ರೀತಿಯಲ್ಲಿ ವರ್ಣಿಸಿದ್ದಾರೆ. ಅವುಗಳಲ್ಲಿ ಕೆಲವು ಆಯ್ದ ಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ ;
ಅಂಬಾತನಯ; ಆದಿಪೂಜಿತ;ಅಂಬರಾದ್ವಯಭೂಷ; ಅಂಬರಾಧೀಶ್ವರ;ಅರವಿಂದನಯನ; ಇಭೇಂದ್ರಮುಖ;
ಇಂದುಮೌಳಿಜ; ಏಕದಂತ;ಏಕವಿಂಶತಿಪತ್ರಪೂಜಿತ ; ಕಮ್ಮಗೋಲನವೈರಿಸುತ; ಗಣನಾಥ ; ಗಜಮುಖ ;
ಗಜಾನನ; ಗೌರೀಪುತ್ರ;ಚಾರುದೇಷ್ಣಾಹ್ವಯ; ಪಾರ್ವತೀತನಯ ; ಪಾಶಾಂಕುಶಧರ; ಮಹಾಕಾಯ;
ಮಹೇಶಸಂಭವ;ಮೂಷಿಕ ವಾಹನ ;ಮೂಷಿಕಾಸನ ;ಮೂಷಕರೂಢಾ;ಮೂರುಕಣ್ಣನ ಸುತ;ದರ್ಪಭಂಜನ
ದಶನಮೋದಕ;ನಾಸಿಕಾಧರ; ಬೆನಕ ;ಹೇರಂಬ ; ಶಂಕರತನಯ; ಶಂಭುನಂದನ; ಶಂಬರಾರಿಪುತ್ರ;
ತಾರಕಾಂತಕನನುಜ;ಚಾಮೀರಕರವರ್ಣ; ಯೂಥಪವದನ ; ರಕ್ತವಸ್ರ್ತಧರ ;ರಕ್ತಾಂಬರಧರ;
ರಕ್ತವಾಸದ್ವಯಭೂಷಣ;ಲಂಬಕರ್ಣ; ಲಂಬೋದರ, ವ್ಯಾಸಕರುಣಾಪಾತ್ರ;ವಕ್ರತುಂಡ; ಶೂರ್ಪಕರ್ಣ ;
ಶಂಕರತನಯ; ಷಣ್ಮುಖನನುಜ ; ಸಿದ್ಧಿವಿನಾಯಕ ;ಸ್ವರ್ಪಿತಾಂಕುಶಪಾಶಕರ;ಸಿದ್ಧಿ ಬುದ್ಧಿ ಪ್ರಿಯ;
ಸರ್ಪವರಕಟಿಸೂತ್ರ;ವಿಘ್ನನಾಶನ ; ವೈಕೃತಗಾತ್ರ;
ಪೋಸ್ಟ್ ಮಾಡಿರುವುದು 21/8.2023
No comments:
Post a Comment