ಶನಿವಾರ, ಸಪ್ಟಂಬರ್ 2, 2023
ಕೆ. ಎಚ್. ಕಲಾ ಸೌಧ, ಹನುಮಂತ ನಗರ, ಬೆಂಗಳೂರು.
ಕಲಾವಿದರು |
ಸಂಧ್ಯಾ ಕಲಾವಿದರು ಅಭಿನಯಿಸಿದ ಹೊಸ ನಾಟಕ -‘ ಮುಖವಾಡ’
ಕಳೆದ 46 ವರ್ಷಗಳಿಂದ ಕನ್ನಡ ನಾಟಕರಂಗದಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ''ಸಂಧ್ಯಾ ಕಲಾವಿದರು'' ಹವ್ಯಾಸೀ ನಾಟಕ ತಂಡವು ದಿ. 2-9-2023 ಶನಿವಾರದಂದು ಸಂಜೆ 7.30 ಗಂಟೆಗೆ ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ ಹಿರಿಯ ನಾಟಕಕಾರ ಶ್ರೀ ಎಸ್. ವಿ ಕೃಷ್ಣ ಶರ್ಮ ವಿರಚಿತ ‘’ ಮುಖವಾಡ’ – ನಿಗೂಢ ಕಥನದ ನಾಟಕದ ಪ್ರದರ್ಶನವನ್ನು ನೀಡುತ್ತಿದೆ. ನಿರ್ದೇಶನ – ಪ್ರದೀಪ್ ಅಂಚೆ. ನಿರ್ವಹಣೆ- ವೈ.ಕೆ.ಸಂಧ್ಯಾ ಶರ್ಮ.
ಮನುಷ್ಯ ತನ್ನ ಅಂತರಂಗದಲ್ಲಿ ಹುದುಗಿರುವ ಆಸೆ-ಅಭೀಪ್ಸೆಗಳ ಈಡೇರಿಕೆಗಾಗಿ, ಯಾವ ಹಂತಕ್ಕೂ ಹೋಗಬಲ್ಲ, ಯಾವ ಹೇಯ ಕೃತ್ಯ-ಕ್ರೌರ್ಯಕ್ಕೂ ಹಿಂಜರಿಯಲಾರ ಎಂಬ ಅಂಶವನ್ನು, ಬರಹಗಾರನೊಬ್ಬನ ಜೀವನದ ಕಥೆಯ ಸನ್ನಿವೇಶಗಳಲ್ಲಿ ಅನ್ವೇಷಿಸಲಾಗಿದೆ. ಲೇಖಕನೊಬ್ಬನ ಬರಹಕ್ಕೂ, ಆತನ ನಿಜ ಸ್ವಭಾವಕ್ಕೂ ಇರುವ ಅಂತರದ ವಿಡಂಬನಾತ್ಮಕ ಸತ್ಯಕ್ಕೆ ಕನ್ನಡಿ ಹಿಡಿಯುವ ‘ಮುಖವಾಡ’ ನಾಟಕ ಆಸಕ್ತಿಕರವಾಗಿದ್ದು, ಕೌತುಕತೆಯೊಂದಿಗೆ ಸ್ವಾರಸ್ಯವನ್ನು ಕಾಯ್ದಿಟ್ಟುಕೊಂಡಿದೆ.
ಮುಖವಾಡ - ಒಂದು ಸಾಮಾಜಿಕ ನಾಟಕ, ಬುದ್ದಿ ಜೀವಿಗಳು, ಚಿಂತಕರು, ಬರಹಗಾರರು ಅನುಭವಿಸುವ ದ್ವಂದ್ವ, ಮಾನಸಿಕ ತುಮುಲ, ನಿಜ ಸ್ವಭಾವ ರಂಗದಲ್ಲಿ ತೋರಿಸಿರುವ ಕಥನ....
ಆನಂದ್ ಒಬ್ಬ ಹಿರಿಯ ಬರಹಗಾರ, (ರಾಘವೇಂದ್ರ ನಾಯಕ್), ಕವಿ. ಸಾಹಿತಿ, ತನ್ನ ಬರವಣಿಗೆ ಯಲ್ಲಿ ಮುಳುಗಿರುವವ. ಸಮಾಜದಲ್ಲಿ ಗಣ್ಯ ವ್ಯಕ್ತಿ....
ಕಾವ್ಯಶ್ರಿ, ಮದುವೆಯಾದವಳು, ಓರ್ವ ಕಿರಿಯ, ಮಹತ್ವಕಾಂಕ್ಷಿಯ ಕವಿ, ಆನಂದನ ಅಭಿಮಾನಿ.
ಕಾವ್ಯಶ್ರಿ, ತನ್ನ ಒಂದು ಪುಸ್ತಕದ ಮುನ್ನುಡಿ ಬರೆಯಲು ಆನಂದನ ಬಳಿಗೆ ಬಂದಾಗ, ಮೊದಲಿಗೆ ನಿರಾಕರಿಸಿದೂ, ನಂತರ ಅದಕ್ಕೆ ಒಪ್ಪಿ, ಬರೆದು ಕೊಡುವನು.
ಆನಂದ್ ನಿಗೆ ಕಾವ್ಯಾಳ ಮೇಲೆ ಪ್ರೇಮಾಂಕುರವಾಗಿ, ಗಂಡನೊಡನೆ ವಿಚ್ಚೇದನ ಪಡೆದು ತನ್ನನ್ನು ಮದುವೆಯಾಗಲು ಕೇಳುವನು.
ಇದನ್ನು ತಿರಸ್ಕರಿಸಿದ ಅವಳು ತನ್ನ ಗಂಡ ಶ್ರೀಧರ್ (ಬ್ಯಾಂಕ್ ಉದ್ಯೋಗಿ) ನೊಡನೆ ಗೌಹಾಟಿಗೆ ತೆರಳುವಳು.
ಇದರಿಂದ ಬೇಸತ್ತು ಖಿನ್ನತೆಗೆ ಒಳಗಾಗಿ, ಅವಳ ಗಂಡನನ್ನು ಕೊಲ್ಲಿಸುವ ಸಂಚು ರೂಪಿಸಿ, ಸುಪಾರಿ ಕಿಲ್ಲರ್ ಗೆ ಹಣ ಕೊಟ್ಟು, ಕೆಲಸ ಮುಗಿಸಲು ಸಂಚು ಮಾಡುವನು.
ನಂತರ ನಡೆದಿರುವುದು ನಿಗೂಡ ...... ಬರಹಗಾರನ ಮುಖವಾಡ ಬಯಲು.....
ನಾಟಕದಲ್ಲಿ ಸಂಭಾಷಣೆ, ಅಭಿನಯ, ಸಂಗೀತ, ಬೆಳಕು, ವೇದಿಕೆ, ರಂಗ ಸಜ್ಜಿಕೆ, ನಿರ್ವಹಣೆ ಎಲ್ಲವೂ ಚೆನ್ನಾಗಿತ್ತು.
ಒಮ್ಮೆ ನೋಡಬಹುದಾದ ನಾಟಕ, ಕಥಾ ಹಂದರ ಬಹಳಷ್ಟು ಮನವರಿಕೆಯಾಗುವುದಿಲ್ಲ.
ಅರ್ಚನಾ ಶ್ಯಾಮ್, ಸಂಧ್ಯಾ ಶರ್ಮ ಅವರೊಂದಿಗೆ |
ಕ್ರಷ್ಣ ಶರ್ಮ ಒಳ್ಳೆಯ ನಾಟಕಕಾರ, ರಾಮಾಯಣ, ಮಹಾಭಾರತ, ಐತಿಹಾಸಿಕ ದಲ್ಲಿಯ ಸನ್ನಿವೇಷ ಗಳನ್ನು ನಾಟಕಗಳಲ್ಲಿ ಅದ್ಭುತವಾಗಿ ಸ್ರಷ್ಟಿಸಿದವರು.
ಬರೆದಿರುವುದು 3/9/2023
No comments:
Post a Comment