Thursday, September 7, 2023

ಸುಭಾಷಿತಗಳು - ನುಡಿಮುತ್ತುಗಳು - 4

 8th September 2023



1. ಕೆಲವೊಂದು ಪರಿಚಯಗಳು ಪ್ರಾರಂಭದಲ್ಲಿ ಎಷ್ಟು ಸಂತೋಷ ಕೊಡುತ್ತೋ ಕೊನೆಗೆ ಅಷ್ಟೇ ನೋವನ್ನು ಕೊಟ್ಟು ಹೋಗುತ್ತದೆ. 

*****************************************

2. ತಾವರೆ ಹೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ ಅರ್ಪಿಸುತ್ತಾರೆ, ಪಾಪಾಸಿ ಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ. ಹುಟ್ಟು ಮುಖ್ಯವಲ್ಲ, ಬದುಕುವ ರೀತಿ ಮುಖ್ಯ. 

**********************************

3. ಮೀನುಗಳ ಹಿಡಿಯಲು, ಗಾಳ ಹಾಕಲು ಬಲ್ಲೆ 

ಹಕ್ಕಿಗಳ ಬಂಧಿಸಲು, ಬಲೆಯ ಹರಡಲು ಬಲ್ಲೆ

ಮುಗ್ದತೆ ಬಲಿಗೆಡವಲು, ಜಾಲ ಹೆಣೆಯಲು ಬಲ್ಲೆ

ಬಲದಲ್ಲಿ ಬೀಗುತ ಸತ್ಯಕೆ, ಕೋಳ ತೊಡಿಸಲು ಬಲ್ಲೆ

ಕಾಲನಾಟದೆದುರು ಸೋಲುವ, ಹುಲುಜೀವಿ ನೀನು ಮನವೇ

*********************************

4. ನಮ್ಮನ್ನು ಯಾರೂ ಗೌರವಿಸುವುದಿಲ್ಲ ಎಂದು ನೋವು ಪಡಬೇಡ. ಬಟ್ಟೆಗಳ ಅಂಗಡಿಯಯಲ್ಲಿ ಒಬ್ಬರಿಗೆ ಇಷ್ಟವಾಗದೆ ಬಿಟ್ಟು ಹೋದ ಬಟ್ಟೆಗಳು ಮತ್ತೊಬ್ಬರಿಗೆ ಬಹಳ ಇಷ್ಟವಾಗುತ್ತದೆ.. 

ಜೀವನ ಕೂಡ ಅಷ್ಟೇ. 

**********************************

5. ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ಅದು ಕರ್ತವ್ಯ ಅಲ್ಲ, ಅದು ನಿಮ್ಮ ಆತ್ಮ ಸಂತೋಷಕ್ಕಾಗಿ ಮಾಡಿಕೊಳ್ಳುವುದು. ಆತ್ಮ ಸಂತೋಷಕ್ಕಾಗಿ ಮಾಡುವ ಯಾವುದೇ ಕಾರ್ಯವಿರಲಿ, ಅದು ನಿಮಗೆ ಅತೀವ ಸಂತಸ ಮತ್ತು ಸಮಾಧಾನವನ್ನು ಕೊಡುತ್ತದೆ... 

*****************************

6. ಪರದೆ ಸರಿದಾಗಲೇ ಪಾತ್ರದ ಅರಿವು, ಬಣ್ಣ ತೊಳೆದಾಗಲೇ ವ್ಯಕ್ತಿಯ ಅರಿವು.

ಸುಖವಿದ್ದಾಗ ಲೆಕ್ಕ ಸಿಗದು ಸ್ನೇಹಿತರು ಎಷ್ಟೆಂದು, ಕಷ್ಟ ಬಂದಾಗಲೇ ತಿಳಿಯುವುದು ಸ್ನೇಹಿತರು ಯಾರೆಂದು.*

ಆದರೆ ಇದೆಲ್ಲವನೂ ಮೀರಿದವನು ಇರುವನು ನಮ್ಮೊಡನೆ ಎಂದೆಂದೂ.

*******************************

7. ಯಾರಲ್ಲಿ ಒಳ್ಳೇತನ ಇರುತ್ತದೆಯೋ ಅವರನ್ನು ದೇವರು ತುಂಬಾ ಪರೀಕ್ಷಿಸುತ್ತಾನೆ. ಆದರೆ ಎಂದಿಗೂ ಕೈ ಬಿಡುವುದಿಲ್ಲ. ಭಗವಂತನಲ್ಲಿ ನಂಬಿಕೆ ಇರಲಿ, ಅಪನಂಬಿಕೆ ಬೇಡ. 

******************************

8. ನಾವು ಎಷ್ಟೇ ಜೋಪಾನ ಮಾಡಿದರೂ ಮಾಡದೇ ಇದ್ದರೂ 40 ವರ್ಷದ ನಂತರ ಕಳೆದು ಕೊಳ್ಳುವಂತಹದ್ದು ಸೌಂದರ್ಯ.... 

ನಾವು ಜೋಪಾನ ಮಾಡಿದರೂ ಮಾಡದೆ ಇದ್ದರೂ ಕಳೆದು ಕೊಳ್ಳಲು ಆಗದೇ ಇರುವಂಥದ್ದು ನಮ್ಮ ವ್ಯಕ್ತಿತ್ವ ಮತ್ತು ಗುಣ... 

***********************************

9. ಮಾತುಗಳು ಮುಳ್ಳಿನಂತಿದ್ದರೂ ಅವು ಮತ್ತೊಬ್ಬರನ್ನು ಎಚ್ಚರಿಸುವ ಗಡಿಯಾರದ ಮುಳ್ಳುಗಳಾಗಬೇಕೆ ವಿನಃ ಮನಸ್ಸನ್ನು ಚುಚ್ಚುವ ಮುಳ್ಳಾಗಬಾರದು. 

*********************************

10. ನಾವು ಸಂಪಾದಿಸಿದ ಒಡವೆ, ವಸ್ತ್ರ, ಕಾಂಚಾಣ ಆಸ್ತಿ, ಸಂಪತ್ತು ಇವೆಲ್ಲಕ್ಕೂ ನಾವೇ ಕಾವಲುಗಾರ ರಾಗಿರಬೇಕು. ಆದರೆ ನಾವು ಸಂಪಾದಿಸಿದ ಸ್ನೇಹ, ವಿದ್ಯೆ, ದಾನ ಧರ್ಮ ಮಾಡಿ ಸಂಪಾದಿಸಿದ ಪುಣ್ಯ, ಇವೆಲ್ಲವೂ ನಮಗೆ ಕಾವಲಾಗಿರುತ್ತವೆ. 

*******************************

11. ಪ್ರೀತಿಗೆ ರೂಪವಿಲ್ಲ ಸ್ನೇಹಕ್ಕೆ ಭೇದವಿಲ್ಲ, ಆತ್ಮವಿಶ್ವಾಸಕ್ಕೆ ಸೋಲಿಲ್ಲ,. ಪ್ರೀತಿ ಮತ್ತು ಸ್ನೇಹ ವಿಲ್ಲದ ಬದುಕಿನಲ್ಲಿ ಅರ್ಥವೇ ಇಲ್ಲ ಅಲ್ವಾ.... 

*********************************

12. ಎಲ್ಲರಿಂದಲೂ ನಮಗೆ ಪ್ರಯೋಜನ ವಿದೆ. ಒಳ್ಳೆಯ ವರಿಂದ ಸಂತೋಷವೂ ಕೆಟ್ಟ ವರಿಂದ ಪಾಠವೂ  ದೊರೆಯುತ್ತದೆ. ಪಾಠ ಕಲಿಯುತ್ತಲೇ ಸಂತೋಷದಿಂದ ಸಾಗೋಣ. 

**********************************

13. ಸಮುದ್ರ ಎಲ್ಲರಿಗೂ ಒಂದೇ... ಆದರೇ ಈಜು ಬಂದವನಿಗೆ ಮುತ್ತುಗಳು ಸಿಗುತ್ತವೆ, ಬಲೆ ಹಾಕಲು ಬಂದ ವನಿಗೆ ಮೀನು ಸಿಗುತ್ತವೆ ನಿಂತು ನೋಡು ವವನಕಾಲು ಮಾತ್ರ ಒದ್ದೆ ಯಾಗುತ್ತವೆ ಪ್ರಯತ್ನವೇ ನಮ್ಮ ಬಲ ಆಗಿರುತ್ತದೆ... 

***********************************

14. ಶುದ್ಧ ಹಾಲಿನಲ್ಲಿ ನೊರೆ ಜಾಸ್ತಿ, ಶುದ್ಧ ಹೃದಯದಲ್ಲಿ ಪ್ರೀತಿ ಜಾಸ್ತಿ, ಶುದ್ಧ ಸ್ನೇಹದಲ್ಲಿ ಜಗಳ ಜಾಸ್ತಿ. ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ. 

*******************************

15. ಮಾತಾಡಿ ದಂತೆ ಜೀವಿಸಲು ಆಗೋದಿಲ್ಲ, ಬರೆದಿಟ್ಟಂತೆ ಬದುಕಲೂ ಆಗುವುದಿಲ್ಲ ನಮ್ಮಿಂದ ಬೇರೆಯವರಿಗೆ ತೊಂದರೆಯಾಗದಂತೆ ಬದುಕಿದರೆ ಸಾಕು ಅದೇ ಸಂತೃಪ್ತ ಬದುಕು. 

*********************************

16. ಮನುಷ್ಯನ ನಿಜವಾದ ಆಸ್ತಿ ಬ್ಯಾಂಕ್ ನಲ್ಲಿರುವ ಸಂಪತ್ತಲ್ಲ, ತಲೆಯಲ್ಲಿರುವ ಜ್ಞಾನವೂ ಅಲ್ಲ. ಪ್ರೀತಿ ತುಂಬಿದ ಹೃದಯ, ಆಲಿಸುವ ಕಿವಿಗಳು ಮತ್ತು ಸಹಾಯ ಮಾಡುವ ಕೈಗಳು... 

**********************************

17. ಒಂದು ಬೀಜವು ಶಬ್ದ ವಿಲ್ಲದೆ ಬೆಳೆಯುತ್ತದೆ, ಆದರೆ ಮರವು ದೊಡ್ಡ ಶಬ್ದದಿಂದ ಬೀಳುತ್ತದೆ. ವಿನಾಶಕ್ಕೆ ಶಬ್ದವಿದೆ, ಆದರೆ ಸೃಷ್ಟಿ ಶಾಂತ ವಾಗಿದೆ. ಇದೇ ಮೌನದ ಶಕ್ತಿ... ಮೌನವಾಗಿ ಬೆಳೆಯಿರಿ. ಯಾರೂ ನಿಮ್ಮನ್ನು ತಡೆಯಲಾರರು.

********************************

18. ತಪ್ಪು ಮಾಡುವಾಗ ಮನುಷ್ಯನಿಗೆ ಅರಿವಿರುವುದಿಲ್ಲ ಆದರೆ ಮೋಸ ಮಾಡುವಾಗ ಅರಿವಿರುತ್ತದೆ ಹಾಗಾಗಿ ತಪ್ಪನ್ನು ಮನ್ನಿಸಬಹುದು. ಮೋಸವನ್ನಲ್ಲ....

***************************************

19. ಎಷ್ಟೇ ದೊಡ್ಡ ವರಾಗಿ ಎಷ್ಟೇ ಪ್ರಭಾವ ಶಾಲಿ ಆಗಿ ರಾಜನಂತೆ ಜೀವಿಸಿ ದರೂ ಸಂತೋಷ ಅನ್ನೋದು ಸುಲಭವಾಗಿ ಸಿಗಲಾರದು. ಅದು ನಿಷ್ಕಲ್ಮಷ ಮತ್ತು ಸರಳ ಪ್ರಾಮಾಣಿಕ ಮನುಷ್ಯನಿಗೆ ಮಾತ್ರ ಲಭ್ಯ

*************************************

20. ಜೀವನ ವೆಂದರೆ ಬಗೆಹರಿಸಬೇಕು ಸಮಸ್ಯೆಯಲ್ಲ, ಅನುಭವಿಸಬೇಕಾದ ವಾಸ್ತವ. 

**************************************

21. ಮನಸ್ಸಿಗೆ ಆಸೆ ಜಾಸ್ತಿ. ನೋಡಿದ್ದೆಲ್ಲವನ್ನೂ ಬೇಕು ಅಂತ ಬಯಸುತ್ತೇನೆ..  ಕಾಲಕ್ಕೆ ಕ್ಲಾರಿಟಿ ಜಾಸ್ತಿ. ಯಾರಿಗೆ ಏನು ಕೊಡಬೇಕೋ ಅದನ್ನೇ ಕೊಡುತ್ತೆ...

**************************************

22. ಯಶಸ್ವೀ ವ್ಯಕ್ತಿಗಳು ಯಾವಾಗಲೂ ತಮ್ಮ ತುಟಿಗಳಲ್ಲಿ ಎರಡು ವಿಷಯಗಳನ್ನು ಹೊಂದಿರುತ್ತಾರೆ, ಮೌನ ಮತ್ತು ನಗು. ಸಮಸ್ಯೆಗಳನ್ನು ಪರಿಹರಿಸಲು ನಗು ಮತ್ತು ಸಮಸ್ಯೆಗಳನ್ನು ತಪ್ಪಿಸಲು ಮೌನ. 

*************************************

23. ಜೀವನದಲ್ಲಿ ಅತಿ ಕಠಿಣ ಸಂದರ್ಭಗಳು ಎದುರಾದಾಗ ಮನಸ್ಸಿನ ಯಾವುದೋ ಮೂಲೆಯಲ್ಲಿ "ಎಲ್ಲವೂ ಒಳ್ಳೆಯದಾಗುತ್ತದೆ" ಎಂಬ ಧ್ವನಿ ಬರುತ್ತದೆ. ಆ ಧ್ವನಿಯ ಮೂಲ ಸ್ವಯಂ ಭಗವಂತನೇ ಆಗಿರುತ್ತಾನೆ. 

*************************************

24. ಬದುಕೆಂಬುದು ಕಷ್ಟ ಸುಖ ನೋವು ನಲಿವು ಸಮಸ್ಯೆಗಳ ಸಾಗರದಲ್ಲಿ ಚಲಿಸುವ ದೋಣಿ ಬೇರಾರೂ ಚಲಾಯಿಸಿ ದಡ ಸೇರಿಸುವ ರೆಂಬ ಭ್ರಮೆ ಬೇಡ. ನಮ್ಮ ದೋಣಿಗೆ ನಾವೇ ನಾವಿಕರು... 

**************************************

25. ವಿದ್ಯೆ ಇದೆ ಎಂದು ಗರ್ವ ಪಡಬೇಡ, ವಿದ್ಯೆ ಇಲ್ಲ ಎಂದು ದುಃಖ ಪಡಬೇಡ ವಿದ್ಯೆ ಇದ್ರೂ... ಇಲ್ಲದೆ ಇದ್ರು ಸಂಸ್ಕಾರ ಒಂದ್ ಇದ್ರೆ, ಜೀವನದಲ್ಲಿ ಯಶಸ್ಸು ನಿನ್ನದಾಗುತ್ತೆ..... 

**************************************

26. ಹೃದಯ ಅತ್ಯಂತ ಫಲವತ್ತಾದ ಜಾಗ. ಅಲ್ಲಿ ನೀವು ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ. ಅದರಲ್ಲಿ ಬಿಡುವ ಫಲವನ್ನು ನಾವು ತಿನ್ನಲೇಬೇಕಿರುವುದು ಕಡ್ಡಾಯ. ಆದ್ದರಿಂದ ಬಿತ್ತುವಾಗಲೇ ಫಲದ ಬಗ್ಗೆಎಚ್ಚರವಿರಲಿ.

***********************************

27. ಸಮಾಧಾನಕ್ಕೆ ನಮಗಿಂತ ಕೆಳಗಿನವರನ್ನು  ನೋಡಬೇಕು"

"ಸಾಧನೆಗೆ ನಮಗಿಂತ ದೊಡ್ಡವರನ್ನು ನೋಡಬೇಕು "

"ತೃಪ್ತಿಗಾಗಿ ಮನದ ಮಾತು ಕೇಳಬೇಕು"

**********************************

28. ಬೀಗದ ಕೀ ಇಲ್ಲದೆ ಬೀಗಗಳು ತಯಾರಾಗುವುದು ಇಲ್ಲ. ಪರಿಹಾರ ವಿಲ್ಲದ ಕಷ್ಟಗಳು ಇಲ್ಲ. ತೊಂದರೆಗಳನ್ನು ನಿವಾರಿಸಿಕೊಳ್ಳಲು ತಾಳ್ಮೆ ಬೇಕು ಅಷ್ಟೇ... 

**********************************

29. ನಗುವಾಗ ಚಿಂತೆ ಇರುವುದಿಲ್ಲ, ಚಿಂತಿಸುವಾಗ ನಗು ಬರೋದಿಲ್ಲ... 

ನಾವು ನಕ್ಕರೂ, ಅತ್ತರೂ ಸಮಯ ನಿಲ್ಲದು. ಹಾಗಾಗಿ ನಮ್ಮೆಲ್ಲರ ಬದುಕಿನಲ್ಲಿ ನಗುವಿಗೆ ಜಾಸ್ತಿ ಜಾಗವಿರಲಿ.

*****************************************

30. ಓಡಲು ಸಾಧ್ಯವಾಗದಿದ್ದಲ್ಲಿ ನಿಧಾನವಾಗಿ ನಡೆದರೂ ಗುರಿ ಮುಟ್ಟಬಹುದಾದ. ಆದರೆ ಹಿತುರಬೇಡಿ. 

*************************************

31. ಮಾಡಿದ ಸತ್ಕಾರ್ಯ, ಮೆರೆದ ಔದಾರ್ಯ, ಆನಂದಿಸಿ ಅನುಭವಿಸಿದ ನೆನಪುಗಳ ಮಾಧುರ್ಯ ಎಂದಿಗೂ ಅಮರಾಮರ. 

*******************************

32. ಪ್ರಾಮಾಣಿಕರಾಗಿರುವುದರಿಂದ ನಮಗೆ ಹೆಚ್ಚು ಸ್ನೇಹಿತರು ಸಿಗದಿರುವುದು. 

ಆದರೆ ಸಿಗುವ ಕೆಲವ ಮಿತ್ರರು ಸರಿಯಾದವರಾಗಿರುತ್ತಾರೆ. ಸಂಖ್ಯೆ ಮುಖ್ಯವಲ್ಲ...ಗುಣ ಮುಖ್ಯ..

***********************************

33. ಜೀವನ ಅನ್ನೋದು ಪೈಪೋಟಿ ಯಲ್ಲ. ನಮ್ಮ ಬದುಕನ್ನು ನಾವೇ ಅನುಭವಿಸುತ್ತಾ ಖುಷಿ ಪಡಬೇಕು ವಿನಃ ಇನ್ನೊಬ್ಬರಿಗೆ ಹೋಲಿಸಿಕೊಂಡು ಇರುವ ಸುಖ ಕಳೆದು ಕೊಳ್ಳಬಾರದು. 

************************************

34. ಬೆಲೆ ಕಟ್ಟಲಾಗದ ವಸ್ತು ಅಂತ ಏನಾದ್ರು ಭೂಮಿ ಮೇಲೆ ಇದ್ರೆ ಅದು, ಒಳ್ಳೆಯತನ ಮಾತ್ರ. ಅದೊಂದೇ ನಾವು ಉಳಿಸಿಟ್ಟು ಹೋಗುವ ಬೆಲೆಕಟ್ಟಲಾಗದ ಆಸ್ತಿ. 

************************************

35. ಸಂಪತ್ತು ಎಷ್ಟೇ ಇದ್ದರೂ, ಸರಳತೆ ಮಾತ್ರ ಮನುಷ್ಯನಿಗೆ ಒಳ್ಳೆಯ ಗೌರವ ತಂದು ಕೊಡುತ್ತೆ. ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟಬಹುದು, ಆದರೆ ಸರಳತೆಗೆ ಬೆಲೆ ಕಟ್ಟಲಾಗದು... 

*************************************

36. ಜ್ಞಾನದಲ್ಲಿ ಹೂಡಿದ ಬಂಡವಾಳಕ್ಕೆ ಸದಾ ಉತ್ತಮ ಬಡ್ಡಿ ದೊರೆಯುತ್ತದೆ.

***********************************

37. ನೀನು ನನ್ನನ್ನು ಪ್ರೀತಿಸು ಅಥವಾ ದ್ವೇಷಿಸು, ಆದರೆ ಆ ದೇವರಿಗೆ ಮಾತ್ರ ನಾನು ಏನು ಎಂಬುದು ತಿಳಿದಿದೆ, ಅವನು ಮಾತ್ರ ನನ್ನನ್ನು ತೀರ್ಮಾನಿಸಲು ಸಾಧ್ಯ. 

*************************************

38. ಮರದ ಬುಡಕ್ಕೆ ಹಾಕಿದ ನೀರು ಮರದ ತುದಿಯಲ್ಲಿರುವ ಎಲೆಯ ವರೆಗೂ ಹೇಗೆ ತಲಪುತ್ತದೆಯೋ ಹಾಗೆಯೇ ಪ್ರೀತಿ ಪೂರ್ವಕವಾಗಿ ಮಾಡಿದ ಎಲ್ಲಾ ಕೆಲಸಗಳು ಭಗವಂತನಿಗೆ ತಲುಪುತ್ತವೆ. 

*************************************

39. ಜ್ಞಾನವಳ್ಳವನಿಗೆ ಬೇರೆ ಸಂಪತ್ತು ಬೇಡ...!!!! 

ಕೋಪ ಇದ್ದವನಿಗೆ ಬೇರೆ  ಶತ್ರುವೇ ಬೇಡ...!!! 

ಕರುಣೆ ಉಳ್ಳವರಿಗೆ ಬೇರೆ ಯಾವ ರಕ್ಷಣೆಯೂ ಬೇಡ..!!

*************************************

40. ಜೇನು ತುಪ್ಪದಂತ ಸಿಹಿಯನ್ನು ಪಡೆಯಬೇಕೆಂದರೆ ಜೇನುನೊಣಗಳಂತೆ ಒಟ್ಟಿಗೆ ಇರುವುದನ್ನು ಕಲಿಯಬೇಕು.

************************************

41. ಬದುಕಿನಲ್ಲಿ ಭಯ ಬಲ ವಾದಾಗ ಬದುಕು ಭಾರವಾಗುತ್ತದೆ. ಬದುಕಿಗೆ ಭರವಸೆ ಬಲವಾದಾಗ ಬದುಕು ಬಂಗಾರ ವಾಗುತ್ತದೆ. 

**********************************

42. ಅದೆಷ್ಟೇ ಬಾರಿ ದೇವರ ಜೊತೆ ಮುನಿಸಿಕೊಂಡರು, ಕಷ್ಟ ಬಂದಾಗ ಮೊದಲು ನೆನಪಾಗುವುದು ದೇವರು. ಕಷ್ಟಗಳ ಕೊಡುವ ಸೂತ್ರಧಾರಿಯೂ ಅವನೇ, ಕಷ್ಟಗಳ ಎದುರಿಸಲು ಜೊತೆ ಯಾಗುವ ಪಾತ್ರ ದಾರಿಯೂ ಅವನೇ

***********************************

43. ನಾವು ಎಲ್ಲಿಯಾದರೂ ಯಾರಿಗಾದರೂ ಒಳ್ಳೆಯದನ್ನು ಮಾಡುತಿದ್ದರು ನಮಗೂ ಕೂಡಾ ಎಲ್ಲೋ ಯಾರಿಂದಲೋ ಒಳ್ಳೆಯದಾಗುತ್ತದೆ. 

*********************************

44. "ಪ್ರತಿಭೆ ಮತ್ತು ರೂಪ ದೇವರ ಕೊಡುಗೆ. ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ. ವ್ಯಕ್ತಿತ್ವ ಮತ್ತು ಅಹಂಕಾರ ನಾವೇ ರೂಪಿಸಿ ಕೊಂಡಿದ್ದು. ಆಲೋಚಿಸಿ  ಮುಂದೆ ನಡೆಯಿರಿ... "

**********************************

45. ಸತ್ಯ, ನಿಸ್ವಾರ್ಥತೆ  ಮತ್ತು ಅಂತರಿಕ ಪರಿಶುದ್ಧತೆ ಯಾರಲ್ಲಿ ಈ ಮೂರು ಶೃೇಷ್ಟ ಗುಣಗಳಿರುತ್ತವೆಯೋ.. 

ಅಂತವರನ್ನು ಈ ಬ್ರಹ್ಮಾಂಡದ ಯಾವ ಶಕ್ತಿಯೂ ಅಲುಗಡಿಸಲಾರದು.

***********************************

46. ಬದಲಿಸಲಾಗದ ಮನುಷ್ಯನ ವ್ಯಕ್ತಿತ್ವವನ್ನು ಪ್ರಕೃತಿ ಬದಲಿಸುತ್ತದೆ. ಇದೇ ಮನುಷ್ಯನಿಗೂ ಪ್ರಕೃತಿಗೂ ಇರೊ ವ್ಯತ್ಯಾಸ.. ... ಕಾಲಾಯ ತಮ್ಮದೇ ನಮಃ

********************************************

47. ಯಾರಿಗಾದರೂ ಏನಾದರೂ ನೀಡಿ, ನೀಡಿದ ನೆಂದು ಅಹಂಕಾರ ಪಡೆದಿರು. 

ಏಕೆಂದರೆ, ನೀನು ನೀಡಿರುವುದು ದಾನವೋ, ಇಲ್ಲವೇ ಹೋದ ಜನ್ಮದ ಸಾಲವೋ, ಅದು ಭಗವಂತನಿಗೆ ಗೊತ್ತು.

***************************************

48. ಹೂವಿನ ಹಾರ ಎಲ್ಲರಿಗೂ ಕಾಣುತ್ತದೆ. ಆದರೆ ಅದರೊಳಗಿನ ದಾರ ಯಾರ ಕಣ್ಣಿಗೂ ಕಾಣುವುದಿಲ್ಲ.. 

ಹಾಗೆ ಯೇ ನಮ್ಮ ಚಿಕ್ಕ ತಪ್ಪುಗಳು ಎಲ್ಲರಿಗೂ ಬೇಗ ಕಾಣುತ್ತದೆ. 

ಆದರೆನಮ್ಮೊಳಗಿರುವ ಒಳ್ಳೆಯತನ ಯಾರಿಗೂ ಕಾಣುವುದಿಲ್ಲ..!! 

*******************************************

49. ನಾವು ಯಾವಾಗ ದೊಡ್ಡ ದೊಡ್ಡ ಮಾತುಗಳನ್ನು ಆಡಲು ಪ್ರಾರಂಬಿಸುತ್ತೇವೋ ಅದು ಪ್ರಬುದ್ಧತೆ ಅಲ್ಲ... 

ಬದಲಾಗಿ ಯಾವಾಗ ನಾವು ಸಣ್ಣ ಸಣ್ಣ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಬಿಸುತ್ತೇವೋ ಅದು ಪ್ರಬುದ್ಧತೆ ಆಗುತ್ತದೆ.... 

******************************************

50. ಈ ಸುಂದರವಾದ ಮುಂಜಾನೆಯಲ್ಲಿ ನಿಮ್ಮ ಸುಂದರವಾದ ಮುಖದಲ್ಲಿ ಇರಲಿ ಚಿಕ್ಕದೊಂದು ಮುಗುಳ್ನಗೆ. 

******************************************

51. ಬಳಸಿ ಕೊಳ್ಳುವವರ ಹತ್ತಿರ ಹೋಗಬೇಡಿ. ಬೆಳೆಸುವ ವರಿಗೆ ಹತ್ತಿರ ಹೋಗಿ.. ಜೀವನದಲ್ಲಿ ಉದ್ಧಾರ ಆದ್ರೂ ಆಗ್ತಿರಾ. 

*******************************************

52. ಅಳುವಾಗ ಒಬ್ಬನೇ ಅಳಬೇಕು, ನಗುವಾಗ ಗುಂಪಿನಲ್ಲಿ ನಗಬೇಕು. 

ಗುಂಪಿನಲ್ಲಿ ಅತ್ತರೆ ನಾಟಕ ಅಂತಾರೆ. ಒಬ್ಬನೇ ನಕ್ಕರೆ ಹುಚ್ಚು ಎನ್ನುತ್ತಾರೆ .

******************************************

53. ನೀನು ಏನು ಸಂಪಾದನೆ ಮಾಡಿದ್ದೀಯ ಅಂತ ಯಾರಾದ್ರೂ ಕೇಳಿದರೆ ಕೋಟಿ  ರೂಪಾಯಿ ಸಂಪಾದಿಸಿದ್ದೇನೆ ಅಂತ ಹೇಳುವವ ನಿಗಿಂತ ತಂದೆ ತಾಯಿ ಕಣ್ಣಲ್ಲಿ ಕಣ್ಣೀರು ಬರದ ಹಾಗೆ ನೋಡಿಕೊಂಡಿದ್ದೀನಿ ಅಂತ ಹೇಳುವವನೇ ನಿಜವಾದ ಶೃೀಮಂತ... 

*****************************************

54. ಸುಳ್ಳನ್ನು ಹೇಳೋಕೆ ಐಡಿಯಾಗಳು ಬೇಕು.. ಅದೇ ನಿಜನ ಹೇಳೋಕೆ ಧೈರ್ಯ ಬೇಕು.. 

ಸುಳ್ಳು ಸಿಹಿಯಂತೆ ಇರುತ್ತೆ. ಸತ್ಯ ಖಾರ ದಂತೆ ಇರುತ್ತೆ ಅಲ್ವಾ.. 

*****************************************

55. ನಿಲ್ಲದೇ ಬರುವ ನೋವುಗಳು ನಿಲ್ಲದೇ ಹೋಗುವ ನಲಿವುಗಳು ನಿಲುಕದ ನಿರೀಕ್ಷೆಗಳು, ನಿಲುಕುವ ನಿರಾಶೆ ಗಳು, ಪ್ರತಿ ದಿನ ಎದುರಿಸುವ ಪರೀಕ್ಷೆಗಳು, ಪ್ರತಿ ಕ್ಷಣ ಕಾಡುವ ಪರಿಸ್ಥಿತಿಗಳು ಇವೆಲ್ಲವೂ ನಮ್ಮ ಬದುಕಿಗೆ ಅದ್ಬುತ ಪಾಠಗಳು. 

*****************************************


No comments:

Post a Comment