ಭಾನುವಾರ, 20 ನೆ ಅಕ್ಟೋಬರ, 2024
ವಿನಾಯಕ ದೇವಸ್ಥಾನ, ಅರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ ವಾರ್ಷಿಕ ಮಹಾ ಸಭೆ ವಿನಾಯಕ ದೇವಸ್ಥಾನದ ಪಾಂಚ ಜನ್ಯ ಹಾಲ್ ನಲ್ಲಿ ಅಕ್ಟೋಬರ 20 ನೆ ದಿನಾಂಕ 2024 ರಂದು ಸಂಪನ್ನ ಗೊಂಡಿತು.
ಸಂಸ್ಥಾಪಕ ಅಧ್ಯಕ್ಷರು ಪಾ. ಚಂದ್ರಶೇಖರ ಚಡಗ, ಅಧ್ಯಕ್ಷೆ ಡಾ. ದೀಪ ಫಡ್ಕೆ, ಕಾರ್ಯದರ್ಶಿ ಮಂಜುಳಾ ಭಾರ್ಗವಿ ಹಾಗೂ ಉಪಾಧ್ಯಕ್ಷ ವೀರಶೇಖರ ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಿಳುವಳಿಕೆ ಪತ್ರದ ಕಾರ್ಯಸೂಚಿಯಂತೆ, ಅಧ್ಯಕ್ಷರಿಂದ ಸ್ವಾಗತ, ನೂತನವಾಗಿ ನೇಮಕ ಗೊಂಡ ಕಾರ್ಯದರ್ಶಿ, ಮಂಜುಳಾ ಭಾರ್ಗವಿ ಅವರು 2023 - 24 ವರ್ಷದ ವಾರ್ಷಿಕ ವರದಿ ಯನ್ನು ಮಂಡಿಸಿದರು.
ಶಿವರಾಮ ಕಾರಂತ ವೇದಿಕೆ (ರಿ)
ರವೀಂದ್ರನಾಥ ಟಾಗೋರ್ ನಗರ,
ಬೆಂಗಳೂರು-560032
ನಮ್ಮ ಸಂಸ್ಥೆಯ ವಾರ್ಷಿಕ ಮಹಾಸಭೆಯು ಇಂದು ದಿನಾಂಕ 20-10-2024 ಭಾನುವಾರ, ವಿನಾಯಕ ದೇವಸ್ಥಾನ, ಆರ್.ಟಿ.ನಗದ ಪಾಂಚಜನ್ಯ ಹಾಲ್ ನಲ್ಲಿ ನಡೆಯಿತು.ಇದರಲ್ಲಿ ಕೆಲವು ಸದಸ್ಯರು ಉಪಸ್ಥಿತಿಯಲ್ಲಿದ್ದು, ಸಭೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.ಅವರಿಗೆಲ್ಲಾ ಧನ್ಯವಾದಗಳನ್ನು ತಿಳಿಸುತ್ತಾ , ಕಾರಣಾಂತರಗಳಿಂದ ಬರದೇ ಉಳಿದ ಸದಸ್ಯರಿಗಾಗಿ ಇಂದಿನ ಕಾರ್ಯಕ್ರಮದ ಕುರಿತು ಈ ಒಂದು ವರದಿ.
ಮೊದಲಿಗೆ, ನಮ್ಮ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು ಮಾತನಾಡಿ, ಕೆಲವು ಸದಸ್ಯರುಗಳು ನಮ್ಮ ಕಾರ್ಯಕ್ರಮಗಳ ಕುರಿತು ನೀಡಿರುವ ಹೇಳಿಕೆಗಳನ್ನು ಸಭೆಯ ಮುಂದಿಟ್ಟರು. ಕಾರ್ಯಕ್ರಮದ ವಿಷಯವಾಗಿ ಜನ ಬದಲಾವಣೆಯನ್ನು ಕೇಳುತ್ತಿರುವುದಾಗಿಯೂ, ಹಾಗು ”ಸಾಹಿತ್ಯಿಕ ವಿಷಯದಲ್ಲೂ ಮತ್ತು ಸಂಗೀತ, ನೃತ್ಯ, ನಾಟಕಗಳಲ್ಲೂ,ಇನ್ನೂ ಹೆಚ್ಚು ಸದಭಿರುಚಿಯ , ವೈವಿದ್ಯಮಯವಾದ ಕಾರ್ಯಕ್ರಮಗಳನ್ನು ಮಾಡಿದರೆ ಹೊಸ ಜನರು ಬರುತ್ತಾರೆ” ಎಂದು ಸಭೆಗೆ ಸೂಚಿಸಿದರು. ಮತ್ತು ವೇದಿಕೆಯೊಂದಿಗಿನ ತಮ್ಮ ಪಯಣ ಹಾಗು ತಮ್ಮ ಹಲವು ಅನುಭವಗಳನ್ನು ಮೆಲುಕು ಹಾಕಿದರು.
ನಂತರ ವೇದಿಕೆಯ ಸಂಸ್ಥಾಪಕರಾದ ಪಾ.ಚಂದ್ರಶೇಖರ ಚಡಗರವರು ಈ ಕುರಿತು ಮಾತನಾಡಿ, ತಮ್ಮ ಕಾರ್ಯಕ್ರಮಗಳ ಬಗ್ಗೆ ಸ್ಪಷ್ಟನೆಗಳನ್ನು ಕೊಡುತ್ತಾ, ಉಪಾಧ್ಯಕ್ಷರ ಕೆಲವು ಮಾತುಗಳನ್ನು ಅನುಮೋದಿಸುತ್ತಾ, ಹೊಸ ಕಾರ್ಯದರ್ಶಿಗಳು ಅನುಸರಿಸಬೇಕಾದ ಕೆಲವು ಸೂಚನೆಗಳನ್ನು,ಮಾಡಬೇಕಾದ ಕೆಲಸಗಳನ್ನು, ಹೇಳುತ್ತಾ ನಮ್ಮ ವೇದಿಕೆಯು ಬೆಳೆದು ಬಂದ ಹಾದಿಯನ್ನು ಕುರಿತು ಮಾತನಾಡಿದರು. ನಂತರ ಸಭೆಗೆ ಬಾರದ ಸದಸ್ಯರುಗಳಿಗೆ ದೂರವಾಣಿ ಕರೆಗಳ ಮೂಲಕ ಸಂಪರ್ಕಿಸಿ ,ಕಾರ್ಯಕ್ರಮದ ಮುಂಚಿತವಾಗೇ ಒಂದು ಸಂದೇಶ ಅಥವ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಕುರಿತು ತಿಳಿಸಬೇಕಾಗಿ, ವಿವರಿಸಿದರು.
ನಂತರ ಕಾರ್ಯದರ್ಶಿಗಳಿಂದ ವಾರ್ಷಿಕ ವರದಿಯನ್ನು ಓದಲಾಯಿತು. ವಾರ್ಷಿಕ ವರದಿಯ ವಿವರ,
ಸನ್ಮಾನ್ಯ ಅಧ್ಯಕ್ಷರೇ,
ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳೆ ,ನೆರೆದಿರುವ ಸಕಲ ಸದಸ್ಯರೇ, ಸನ್ಮಿತ್ರರೇ,
ಮೂರು ದಶಕಗಳ ಇತಿಹಾಸವಿರುವ ನಮ್ಮ ಶಿವರಾಮ ಕಾರಂತ ವೇದಿಕೆ(ರಿ) ,ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಕಲೆ ,ಸಂಸ್ಕೃತಿಗಳ ವರ್ಧನೆಗೂ ಮೀಸಲಿಟ್ಟಿದೆ. ಸಂಸ್ಥೆಯು ಸತತವಾಗಿ ಉಪನ್ಯಾಸ, ನಾಟಕ, ಯಕ್ಷಗಾನ, ಮಕ್ಕಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಬೆಂಗಳೂರಿನ ಪ್ರತಿಷ್ಠಿತ ಸಾಹಿತ್ಯಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು, ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ.
ನಮ್ಮ ಸಂಸ್ಥೆಯ ಕಳೆದ ವಾರ್ಷಿಕ 2023-24ನೇ ಸಾಲಿನ ಮಹಾಸಭೆ ದಿನಾಂಕ 10 ಅಕ್ಟೋಬರ್ ನಾಲ್ಕರ ಭಾನುವಾರ , ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ವಿನಾಯಕ ದೇವಸ್ಥಾನ, ಆರ್. ಟಿ. ನಗರ ,ಬೆಂಗಳೂರು-32 ಇಲ್ಲಿ ನಡೆಯಿತು.
2023-24 ರ ವಾರ್ಷಿಕ ವರದಿಯ ವರ್ಷದಲ್ಲಿ ಕೆಳಗೆ ಕಾಣಿಸಿದವರು ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ.
ಸಂಸ್ಥಾಪಕರು - ಶ್ರೀ ಪಾ.ಚಂದ್ರಶೇಖರ ಚಡಗ ರವರು
ಅಧ್ಯಕ್ಷರು - ಡಾ. ದೀಪಾ ಫಡ್ಕೆ
ಗೌರವಾಧ್ಯಕ್ಷರು - ಶ್ರೀ ಎಸ್.ಆರ್. ವಿಜಯಶಂಕರ
ಉಪಾಧ್ಯಕ್ಷರು - ಡಾ. ಆರ್ .ಆರ್. ಪಾಂಗಾಳ್ ಮತ್ತು ವೀರಶೇಖರ ಸ್ವಾಮಿ
ಕಾರ್ಯದರ್ಶಿ - ಶಶಿಕಲಾ
ಕೋಶಾಧಿಕಾರಿ - ಶ್ರೀ. ಬಿ. ಜಯರಾಮ ಸೋಮಯಾಜಿ
ಸಹ ಕಾರ್ಯದರ್ಶಿ- ಶ್ರೀಮತಿ ಮಂಜುಳಾ ಭಾರ್ಗವಿ.
ಕಾರ್ಯಕಾರಿ ಸಮಿತಿಯ ಸದಸ್ಯರು
ಶ್ರೀ ಕೆ. ರಮೇಶ್ ಗೋಟ
ಶ್ರೀಮತಿ ಸತ್ಯಭಾಮ ರಂಗೇಗೌಡ
ಶ್ರೀಮತಿ ಕೈವಲ್ಯ
ಶ್ರೀಮತಿ ಉಮಾದೇವಿ
ಶ್ರೀ ಗಿರೀಶ್ ಶಂಕರ್.
ಯಕ್ಷಗಾನ ಮತ್ತು ನಾಟಕ ಸಮಿತಿ - ಶ್ರೀ ಕೆ. ಕೃಷ್ಣ ಪ್ರಸಾದ .ಸಂಪನ್ಮೂಲ ಸಮಿತಿ- ಶ್ರೀ ಬಿ.ಎಚ್. ಎಂ. ವೀರಶೇಖರ ಸ್ವಾಮಿ ಮತ್ತು ಶ್ರೀ. ಬಿ.ಜಯರಾಮ ಸೋಮಯಾಜಿ.
ಕಾರ್ಯಕಾರಿ ಸಮಿತಿಯ ಸಮಯೋಜಿತ ಸಭೆಗಳ / ಸಂದರ್ಭಕ್ಕನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮೇಲ್ಕಂಡ ಅವಧಿಯ ಕಾರ್ಯಕ್ರಮಗಳನ್ನು ರೂಪಿಸಿ , ನಡೆಸಿ ಯಶಸ್ವಿಯಾಗಿರುತ್ತದೆ.
1. ದಿನಾಂಕ 23.4.23 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ
ವಿ.ಕೃ. ಗೋಕಾಕ್ ಸಂಸ್ಮರಣೆ .ಮುಖ್ಯ ಅತಿಥಿಗಳಾಗಿ ಅನಿಲ್ ಗೋಕಾಕ್ ಮತ್ತು ಸಂಧ್ಯಾ ಹೆಗಡೆ ದೊಡ್ಡಹೊಂಡ ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
2. ದಿನಾಂಕ 18.6.23 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ
ಸ್ವಾತಂತ್ರ ಉದ್ದೀಪನ.ಬೇಂದ್ರೆ ಕಾವ್ಯವನ್ನು ಕುರಿತು .ಮುಖ್ಯ ಅತಿಥಿಗಳಾಗಿ ಜಿ.ಕೃಷ್ಣಪ್ಪ, ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
3. ದಿನಾಂಕ 19. ಆಗಸ್ಟ್ .2023 ಶನಿವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ
ಭಕ್ತಿ ಸಾಹಿತ್ಯ, ವಿವಿಧ ಪರಿಕಲ್ಪನೆಗಳು .ಈ ವಿಷಯವಾಗಿ ಹಿರಿಯ ಕತೆಗಾರರು ಹಾಗು ವಿಮರ್ಶಕರಾದ ಕೇಶವ ಮಳಗಿ ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
4. ದಿನಾಂಕ 15.ಅಕ್ಟೋಬರ್ .2023 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ
ಕಾರಂತರ 122 ನೇ ಹುಟ್ಟುಹಬ್ಬ .ಕಾರಂತರು ಮತ್ತು ಜೀವನ ಶ್ರದ್ಧೆಯ ಬಗ್ಗೆ ಡಾ. ನಾ. ಸೋಮೇಶ್ವರ್ ಸಾಹಿತಿ, ಥಟ್ ಅಂತ ಹೇಳಿ ಕಾರ್ಯಕ್ರಮದ ನಿರ್ದೇಶಕರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
5. ದಿನಾಂಕ 15 ಅಕ್ಟೋಬರ್ .23 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ
ಕಾರಂತರ ವೇದಿಕೆಯ ಮಹಾಸಭೆ ನಡೆದಿರುತ್ತದೆ.ಇದರಲ್ಲಿ ಕಾರ್ಯಕಾರಿ ಸಮಿತಿ ಡಾ.ದೀಪಾ ಫಡ್ಕೆ ,ವೀರಶೇಖರ ಸ್ವಾಮಿ,ಶಶಿಕಲಾ,ಜಯರಾಮ ಸೋಮಯಾಜಿ ಇವರುಗಳು ಸಮ್ಮುಖದಲ್ಲಿ ನಡೆದಿರುತ್ತದೆ.
6. ದಿನಾಂಕ 24. ನವಂಬರ್2023 ಶನಿವಾರ .ದಿನಾಂಕ 23.4.23 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಕನ್ನಡ ರಾಜ್ಯೋತ್ಸವ 2023 ಕನ್ನಡ ತೇರು ,ವಿಶೇಷ ಉಪನ್ಯಾಸ .ಸುಧಾಕರನ್ ರಾಮಂತಳಿ ಎಸ್.ಆರ್. ವಿಜಯಶಂಕರ್, ಡಾ.ಕೆ ಶರೀಫಾ ಅವರಿಗೆ ಗೌರವ ಸಮರ್ಪಣೆ.
7. ದಿನಾಂಕ 28.ಜನವರಿ .2024 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ
31 ನೇ ವಾರ್ಷಿಕೋತ್ಸವ ಭಾವಯಾಮಿ ರಘುರಾಮಂ ಕೃಪಾ ಫಡ್ಕೆ ತಂಡದವರಿಂದ ನೃತ್ಯರೂಪಕ . ಎಲ್ .ಜಿ ಮೀರಾ ರವೀಂದ್ರ ಭಟ್ ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
8. ದಿನಾಂಕ 18.ಫೆಬ್ರವರಿ 2023 ಭಾನುವಾರ ಕಾರ್ಯಕ್ರಮ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ
ಗಂಗಾಧರ ಚಿತ್ತಾಲ -ನೂರರ ನೆನಪು . ಆರ್ .ಲಕ್ಷ್ಮಿನಾರಾಯಣ ಎಸ್.ಆರ್. ವಿಜಯ ಶಂಕರ್ ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
ವರದಿ ಮುಕ್ತಾಯದ ಬೆನ್ನಲ್ಲೇ, ಸಭೆಯ ಕೆಲವು ಹಿರಿಯ ಸದಸ್ಯರುಗಳು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಾ,ಕೆಲವು ಅಮೂಲ್ಯವಾದ ಸಲಹೆಗಳನ್ನು ಕೂಡ ಕೊಟ್ಟರು. ಮೃತ್ಯುಂಜಯ ಎಂಬುವವರು ,ನಮ್ಮ ಶಿವರಾಮ ಕಾರಂತ ವೇದಿಕೆಯ ವಾಟ್ಸಾಪ್ ಗ್ರೂಪ್ ನಲ್ಲಿ ಕಾರಣಾಂತರಗಳಿಂದ ಕೆಲವು ಮೆಸೇಜ್ ಗಳು ಬರುತ್ತಿರಲಿಲ್ಲ,ತಾಂತ್ರಿಕ ದೋಷಳಿಂದಾಗಿ ಕೆಲವು ಕಾರ್ಯಕ್ರಮಗಳ ಕುರಿತು ಗೊತ್ತಾಗಲಿಲ್ಲ, ನಂತರ ಪಟ್ಟು ಬಿಡದೆ,ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತೆ ಗ್ರೂಪ್ ನಲ್ಲಿ ಸೇರಿಸಲಾಯಿತು.ಅಲ್ಲಿಗೆ ನಮ್ಮ ವೇದಿಕೆಯ ಕಾರ್ಯಕ್ರಮಗಳಿಗೆ ಮತ್ತೆ ಬರಲು ತಮಗೆ ಸಿಕ್ಕ ಅವಕಾಶಕ್ಕೆ ಸಂತಸ ವ್ಯಕ್ತ ಪಡಿಸಿದರು.
ನಂತರ ಅಧ್ಯಕ್ಷರಾದ ಶ್ರೀಮತಿ ದೀಪಾ ಫಡ್ಕೆರವರು ಮಾತನಾಡಿ ,ಮೊದಲಿಗೆ ನೂತನ ಕಾರ್ಯದರ್ಶಿಗಳ ಹೆಸರನ್ನು ಸಭೆಗೆ ತಿಳಿಸುತ್ತಾ, ಅನುಮೋದನೆಯನ್ನೂ ಕೂಡ ಮಾಡುವಂತೆ ಸಭೆಯನ್ನುದ್ದೇಶಿಸಿ ಕೇಳಿದರು. ಆಗ ನಮ್ಮ ಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಸತ್ಯಭಾಮ ರಂಗೇಗೌಡರವರೂ ಮತ್ತು ಶ್ರೀ ಸುಧೀಂದ್ರರವರು ಅನುಮೋದನೆಯನ್ನು ಮಾಡಿದರು.ತುಂಬು ಸಭೆಗಾಗಿ,ಜನರನ್ನು ಕರೆತರುವುದರ ಬಗ್ಗೆ ನಮ್ಮ ವೇದಿಕೆಯು ಕೈಗೊಂಡ ಕ್ರಮಗಳ ಬಗ್ಗೆ ,ಮತ್ತು ಕಾರಂತ ವೇದಿಕೆಯು ಅತ್ಯುತ್ತಮ ಅಪ್ಪಟ ಸಾಹಿತ್ಯ ಸೇವೆಗಾಗಿಯೇ ಮೀಸಲಿದೆ, ಎಂದು ಹೇಳುತ್ತಾ, ವೇದಿಕೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ,ಕಾರ್ಯಕ್ರಮಕ್ಕೆ ಹೊಸ ಜನರನ್ನು ಸೇರ್ಪಡೆ ಮಾಡುವ ಕುರಿತು, ಕೂಲಂಕುಷವಾಗಿ ಚರ್ಚಿಸಲಾಯಿತು. ಆರ್.ಟಿ ನಗರದ ಸುತ್ತಮುತ್ತಲಿನ ಶಾಲೆಗಳಿಗೂ ಕೂಡ ಕಾರ್ಯಕ್ರಮದ ಬಗ್ಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.ಶಿವ ಸುಬ್ರಮಣ್ಯರವರ ಹಾಗು ಸುಧೀಂದ್ರರವರ ಪ್ರಶ್ನೆಗಳಿಗೆ ಅತ್ಯಂತ ತಾಳ್ಮೆಯಿಂದ,ಮತ್ತು ಸೌಜನ್ಯತೆಯಿಂದ ಉತ್ತರಿಸುತ್ತಾ, ಮುಂದಿನ ದಿನಗಳಲ್ಲಿ ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ನಂತರ 2023-24 ನೇ ಸಾಲಿನ ವರ್ಷದ ಪರಿಶೋಧಿತ ಲೆಕ್ಕಪತ್ರಗಳ ಮಂಡನೆ ಮತ್ತು ಅನುಮೋದನೆಯನ್ನು ವೇದಿಕೆಯ ಕೋಶಾಧಿಕಾರಿಗಳಾದ ಶ್ರೀ ಸೋಮಯಾಜಿ ರವರು ಮಾಡಿದರು.
ಕಡೆಯದಾಗಿ, ಧನ್ಯವಾದ ಸಮರ್ಪಣೆಯನ್ನು ಕಾರ್ಯದರ್ಶಿಗಳಿಂದ ಮಾಡಲ್ಪಡಲಾಯಿತು.
ಆತ್ಮೀಯರೇ .
ಮೇಲ್ಕಂಡ ವಾರ್ಷಿಕ ಅವಧಿಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಯಶಸ್ಸಿನ ಘನತೆಯ ಗರಿ ಮುಡಿದಿವೆ. ,ಯಶಸ್ಸಿನ ಕೊಂಡಿಗಳು ಮಾತ್ರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಎಂಬ ಹೆಮ್ಮೆಯನ್ನು ವೇದಿಕೆಯ ಪರವಾಗಿ ವ್ಯಕ್ತಪಡಿಸುತ್ತಾ,
ಮೂರು ದಶಕಗಳ ಈ ಸಂಭ್ರಮಾಚರಣೆಯಲ್ಲಿ ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಆಶಯ,ಅಪ್ಪಣೆ, ಆದರ್ಶ ಮತ್ತು ಸತತ ಮಾರ್ಗದರ್ಶನದಲ್ಲಿ ,ಹಾಗು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿರುವ ಡಾ.ದೀಪಾಫಡ್ಕೆ ಅವರಿಗೂ, ಗೌರವಾಧ್ಯಕ್ಷರಾದ ಶ್ರೀ ಎಸ್. ಆರ್. ವಿಜಯಶಂಕರ್ ರವರಿಗೂ , ಉಪಾಧ್ಯಕ್ಷರಾದ ವೀರಶೇಖರ ಸ್ವಾಮಿಯವರಿಗೂ, ಎಂದಿನಂತೆ ವೇದಿಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಯಾವುದೇ ರೀತಿಯ ಶುಲ್ಕ ಪಡೆಯದ ಶರತ್ ಅಂಡ್.ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಇವರಿಗೆ ವೇದಿಕೆ ಅಭಾರಿಯಾಗಿದೆ.
ವೇದಿಕೆಯ ಲೆಕ್ಕಪತ್ರಗಳ ಜವಾಬ್ದಾರಿ ನಿರ್ವಹಿಸುವ ಖಜಾಂಚಿ ಶ್ರೀ ಜಯರಾಮಸೋಮಯಾಜಿ ಸರ್ ರವರಿಗೂ, ಮತ್ತು ಯೂಟ್ಯೂಬ್ ,ಫೇಸ್ಬುಕ್ ಮಾಧ್ಯಮಗಳ ಮೂಲಕವೂ ವೇದಿಕೆಯ ಕಾರ್ಯಕ್ರಮ ವೀಕ್ಷಿಸಲು ತಾಂತ್ರಿಕ ಸಹಕಾರ ಜವಾಬ್ದಾರಿ ನಿರ್ವಹಿಸಿದ ಪತ್ರಿಕೋದ್ಯಮಿ ಶ್ರೀ ಶಿವ ಸುಬ್ರಮಣ್ಯರವರು, ಸಮಿತಿ ಸದಸ್ಯರು ಶ್ರೀ ಸುಧೀಂದ್ರ ರವರು,ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಅಷ್ಟೇ ಅಲ್ಲದೇ ತರಳಬಾಳು ಗ್ರಂಥಾಲಯದಿಂದ ಶ್ರೀ ವಿನಾಯಕ ದೇವಸ್ಥಾನ ಸಭಾಂಗಣದ ಆಡಳಿತ ಮಂಡಳಿಯ ಸದಸ್ಯರೂ ಹಾಗು ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು.ತನು ಮನ ಧನಗಳಿಂದ ವೇದಿಕೆಯಲ್ಲಿ ಅದ್ಧೂರಿ ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವ ಡಾ. ಪಾಂಗಾಳ್ ಸರ್ ರವರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
” ಐದು ಬೆರಳು ಕೂಡಿ ಒಂದು ಮುಷ್ಟಿಯು ಹಲವು ಮಂದಿ ಸೇರಿ ಈ ಸಮಷ್ಠಿಯು ”ಎನ್ನುವಂತೆ ನೀವಿಲ್ಲದೇ ಯಾವ ಕಾರ್ಯಕ್ರಮಗಳಿಗೂ ಕಳೆ ಇರುವುದಿಲ್ಲ .ಪ್ರತಿ ಕಾರ್ಯಕ್ರಮದ ಹಿಂದೆ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಯೊಬ್ಬರ ಪಾತ್ರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದ್ದುದ್ದನ್ನು ನಾವು ಕಾಣಬಹುದು.ಸಮಿತಿಯ ಪ್ರತಿ ಸದಸ್ಯರಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ.
ಹುಟ್ಟು ಹುಟ್ಟಿಗೆ ಕಾರಣ, ಹಾಗೆ ಸಾವು ಮರು ಹುಟ್ಟಿಗೆ ಕಾರಣ. ಈ ವರ್ಷವೂ ಕೆಲವು ಅಮೂಲ್ಯರನ್ನು ವೇದಿಕೆ ಕಳೆದು ಕೊಂಡಿತು .ಅಂಥವರಲ್ಲಿ ನಮ್ಮ ವೇದಿಕೆಯ ಸಂಸ್ಥಾಪಕರಾದ ಚಡಗರ ಸಹೋದರರಾದ ಪಾ.ವಾದಿರಾಜ ಚಡಗರವರೂ ಕೂಡ ಒಬ್ಬರು.ಅವರಿಗೆ ನಮ್ಮ ಶ್ರದ್ಧಾಂಜಲಿಗಳು.
ಬೇಂದ್ರೆಯವರ ನುಡಿಯಂತೆ ”ಇದ್ದಷ್ಟು ದಿನವಾದರೆ ಇರುವಷ್ಟು ಪ್ರೀತಿಯ ಇನ್ನಷ್ಟೂ ರುಚಿಮಾಡಿ ತೆರಳುವುದು” ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಬೇಕು.
ವರದಿ :ಮಂಜುಳಾಭಾರ್ಗವಿ
ಕಾರ್ಯದರ್ಶಿ
Posted 22 / 10 / 2024
No comments:
Post a Comment