Wednesday, March 19, 2025

ಆಪ್ ನ ಹಾವಳಿ( INFLUENCE OF AAP's)


 
ಒಬ್ಬಂಟಿಯಾಗಿ ಹೋಗುತ್ತಿದ್ದಾನೆ ಮನುಷ್ಯ !!

 ಹೆಣಗಾಟಕ್ಕೊಳಪಡುತ್ತಾನೆ ಯಾವುದೋ ಒಂದು ದಿನ...!

ಮುಂಜಾನೆಯಲ್ಲೇ ಎಬ್ಬಿಸಲು ಅಮ್ಮ ಬೇಕಾಗಿಲ್ಲ  Alaram app ಇದೆ.

ನಡೆಯುವ ವ್ಯಾಯಾಮ ಮಾಡಲಿಕ್ಕೆ ಗೆಳೆಯನ ಸಾಂಗತ್ಯ ಬೇಕಾಗಿಲ್ಲ Step Counter ಇದೆ.

ಅಡಿಗೆ ಮಾಡಿ ಬಡಿಸಲು ಅಮ್ಮನು ಬೇಕಾಗಿಲ್ಲ Zomoto, Swiggy app  ಗಳಿವೆ.

ಪ್ರಯಾಣ ಮಾಡಲು ಬಸ್ಸು ಬೇಕಾಗಿಲ್ಲ Uber, Ola app ಗಳಿವೆ

ವಿಳಾಸ ತಿಳಿದುಕೊಳ್ಳಲು ಟೀ ಅಂಗಡಿಯವನೋ ಆಟೋ ಡ್ರೈವರೋ ಬೇಕಾಗಿಲ್ಲ Google map ಇದೆ.

ದಿನಸಿ ಸಾಮಾನು ಕೊಳ್ಳಲು ಕಿರಾಣಿ ಅಂಗಡಿ ಬೇಕಾಗಿಲ್ಲ Big Basket ಇದೆ

ಬಟ್ಟೆ ಕೊಳ್ಳಲು ಶೋರೂಂ ಗೆ ಹೋಗಬೇಕಾಗಿಲ್ಲ Amazon Flipkart app ಗಳಿವೆ

ಹೋಗಿ ಪ್ರತ್ಯಕ್ಷವಾಗಿ ಬೇಟಿಯಾಗಿ ನಗುನಗುತಾ ಮಾತನಾಡಿಕೊಳ್ಳಲು ಸ್ನೇಹಿತರು ಬೇಕಾಗಿಲ್ಲ 

Whatsapp, Facebook ಇದ್ದೇಇದೆ

ಸಾಲ ಬೇಕೆಂದು ಕೇಳಲು ಸನ್ನಿಹಿತಾನೋ ಹತ್ತಿರದ ನೆಂಟನೋ ಇರಬೇಕಿಲ್ಲಾ. Paytm app ಇದೆ

ಮತ್ತಷ್ಟು ವಿಷಯಗಳನ್ನು ತಿಳಿದು ಕೊಳ್ಳಲು Google ಇದ್ದೇಇದೆ

ಹೀಗೇ

ಒಬ್ಬಂಟಿಯಾಗಿ ಬದುಕುವುದಕ್ಕೆ ಎಲ್ಲಾ ಬಗೆಯ ಸೌಕರ್ಯ ಸೌಲಭ್ಯ ಗಳಿವೆ,

app ಎನ್ನುವ ಭೂತದ ರೂಪದಲ್ಲಿ

ಸಿಕ್ಕಿಹಾಕಿಕೊಳ್ಳುತ್ತಿದ್ದೇವೇ...app ನಾ ಬಲೆಯಲ್ಲಿ ಹೊರಗೆ ಬರಲಾಗದಷ್ಟೂ.

ಆಗಾಗಲಾದರೂ ಸನ್ನಿಹಿತ ರನ್ನು ಗೆಳೆಯರನ್ನು ಬೇಟಿಯಾಗಲೂ ಹರಟೇ ಹೊಡೆಯಲು 

ಮನತುಂಬಾ ನಗುವುದಕ್ಕಾಗಲೂ ಬೀದಿಗೆ ಬರೋಣವೇ....

app ರಾಕ್ಷಸಿಯ ಹಿಡಿತದಿಂದ ಹೊರಗೆ ಬಂದು ಸ್ವಲ್ಪ ಸಮಯವಾದರೂ ನಾಲ್ಕು ಜನರ ನಡುವೆ

ಖುಷಿ ಖುಷಿ ಯಾಗಿ ಕಳೆಯೋಣವೇ.


ಮೂಲ ತೆಲುಗಿನ ಲೇಖಕರು

ಕನ್ನಡಕ್ಕೆ ಅನುವಾದ ಮಾಡಿರುವುದು *ನಾರಾಯಣ ಮೂರ್ತಿ ಬೂದುಗೂರು, ಬೆಂಗಳೂರು)


WhatApp Forwarded 20/3/2025

No comments:

Post a Comment