Saturday, March 8, 2025

MITHYA (ಮಿಥ್ಯಾ) - KANNADA MOVIE

Saturday, 8th March 2025

INOX, Mantri Mall, Malleshwara, Bengaluru. 

MITHYA - KANNADA MOVIE

ಇಂದು ಸುಮಂತ್ ಭಟ್ ನಿರ್ದೇಶನದ "ಮಿಥ್ಯ" ಕನ್ನಡ ಸಿನೆಮಾವನ್ನು ನೋಡಲು ಮಲ್ಲೇಶ್ವರದ ಮಂತ್ರಿ ಮಾಲ್ ನ ಐನೊಕ್ಷ್ ಥಿಯೇಟರ್ ಗೆ ಹೋಗಿದ್ದೆವು.



ಸಿನೆಮ ಆದ ನಂತರ ಸ್ವಲ್ಪ ಸಮಯ ನಿರ್ದೇಶಕ, ಸುಮಂತ್ ಭಟ್  ಅವರೊಂದಿಗೆ ಸಂವಾದವೂ ಇತ್ತು. ಅದೂ ಅವರ ಸಿನೆಮಾದ ಪ್ರೊಮೋಷನ್ ಗೆ ಆಗಿತ್ತು. 


ಮಿಥ್ಯಾ- ಒಂದು ಭಾವನಾತ್ಮಕವಾದ ಕಥೆಯ ಸಿನೆಮ. ಮಿಥುನ್ (ಮಿಥ್ಯಾ) , 11 ವರ್ಷದ ಬಾಲಕ ಮುಂಬೈ ಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಊರಿಗೆ ಬರುತ್ತಾನೆ. ಅಲ್ಲಿ ಚಿಕ್ಕಮ್ಮ, ಅವರ ಕುಟುಂಬದೊಡನೆ ಅವನ ವಾಸ, ಜೀವನ. ಆವರು ಅವನನ್ನು ತುಂಬಾ ಚೆನ್ನಾಗಿ ನೋಡಿಕೊಂಡರೂ ಮಿಥ್ಯಾಗೆ ನಿಗೆ ತಂದೆ ತಾಯಿಯ ನೆನಪು ನಿರಂತರವಾಗಿ ಕಾಡುತ್ತಿರುತ್ತದೆ.

ಚಿಕ್ಕಮ್ಮ ನಿಗೆ ಎರಡು ಹೆಣ್ಣು ಮಕ್ಕಳು, ಗಂಡ ಓಟೋ ರಿಕ್ಷಾ ಚಾಲಕ, ಮದ್ಯಮ ವರ್ಗದ ಪರಿವಾರ, ಅವರಿಗೆ ಗಂಡು ಮಗ ಇಲ್ಲ ಎನ್ನುವ ಚಿಂತೆ, ಮಿಥ್ಯಾ ನನ್ನು ತಮ್ಮ ಮಗನ ಹಾಗೆ ನೋಡಿಕೊಂಡರೂ, ಮನಸಿನ ತುಮುಲ.


ಉಡುಪಿ ಆಸುಪಾಸಿನಲ್ಲಿ ನಡೆದ ಚಿತ್ರೀಕರಣ, ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಮಿಥ್ಯಾನ ಭಾವನೆಗಳನ್ನು ತೋರಿಸುವುದರಲ್ಲಿ ಪ್ರಥಮದಲ್ಲಿ ನಿಧಾನಿಸಿದರೂ , ನಂತರ ಆಂತರಿಕವಾಗಿ ಸಿನೆಮಾವು ಮನಸ್ಸನ್ನು ಮುಟ್ಟುತ್ತದೆ..




ನೂರು ನಿಮಿಷಗಳ ಕಾಲದ ಸಿನೆಮಾವು ಸಿನೆಮಟೋ ಗ್ರಫಿ, ಸಂಗೀತ, ಅಭಿನಯ ಎಲ್ಲವೂ ಚೆನ್ನಾಗಿದೆ.


ಶುಭ ಹಾರೈಕೆಗಳು.....

Posted 9/3/2025



No comments:

Post a Comment