Tuesday, 6th October 2026
Facebook Post
ಈಗೆರಡು ತಿಂಗಳುಗಳ ಕೆಳಗೆ ಕಣ್ಣಿನ ಪರೀಕ್ಷೆಗೆ ಆಸ್ಪತ್ರೆಗೆ ಹೋಗಿದ್ದೆ. ಅದೊಂದು ವಾರ್ಷಿಕ ರುಟೀನ್ ಚೆಕ್ ಅಪ್ ಆಗಿತ್ತು. ಆಸ್ಪತ್ರೆ ಎಂದ ಮೇಲೆ ಕಾಯುತ್ತಾ ಕುಳಿತುಕೊಳ್ಳಬೇಕಲ್ಲಾ? ಹಾಗೆ ಕಾಯುತ್ತಾ ಕುಳಿತಾಗ ‘ಟೈಂ ಪಾಸ್’ ಮಾಡಲು ಅಲ್ಲಿ ಬಂದವರನ್ನೆಲ್ಲಾ ನೋಡುತ್ತಾ ಕುಳಿತೆ. ಹರಹರಾ ಎಂದು ನನ್ನ ಎದುರಿನ ಕುರ್ಚಿಯಲ್ಲಿ ಒಬ್ಬರು ‘ಟಿಪಿಕಲ್’ ಹಳ್ಳಿಯ ಹೆಂಗಸು(ನಾನೂ ಹಳ್ಳಿಯವಳೇ, ಆದರೆ ಆ ‘ಟಿಪಿಕಲ್ ನೆಸ್’ ಇಲ್ಲದವಳಷ್ಟೇ) ಕುಳಿತರು. ಎಣ್ಣೆ ಹಾಕಿ ಕೀಸಿ ಬಾಚಿದ ತಲೆಗೂದಲು ಹಾಗೂ ಅದರ ಹಿಂದೆ ಒಂದು ‘ಪಿಳ್ಳೆ ಗಂಟು’! ಆ ಗಂಟು ನೋಡಿದ ಕೂಡಲೇ ನನ್ನ ತಾಯಿಯ ತಾಯಿ ಸರಸ್ವತಮ್ಮನವರ ನೆನಪಾಯಿತು. ಅವರ ತಲೆಯಲ್ಲಿ ಕೂಡಾ ಹೀಗೆಯೇ ಒಂದು ಪುಟಾಣಿ ಗಂಟು ಇರುತ್ತಿತ್ತು. ವಯಸ್ಸಾದ ಮೇಲೆ, ತಲೆಗೂದಲು ಉದುರಿ-ಉದುರಿ ಬಾಕಿ ಇರುವ ಕೂದಲಲ್ಲಿ ಜಡೆ ಹೆಣೆಯಲಾಗದೆ ಈ ರೀತಿಯ ಗಂಟು ತಲೆಯಿಂದ ಹೊರಹೊಮ್ಮುತ್ತಿತ್ತು.
ಆಕೆ ಸುಮಾರು ನನ್ನ ವಯಸ್ಸಿನವರೇ ಇರಬಹುದು. ಅವರ ಬಾಳುವೆ ಅವರನ್ನು ಗ್ರಾಮೀಣ ಬದುಕಿನ ಸಂಸ್ಕೃತಿಗೆ ಕಟ್ಟಿ ಹಾಕಿ ಅದನ್ನು ಪಾಲಿಸುವಂತೆ ಮಾಡಿದೆ. ಅದೇನು ತಪ್ಪಲ್ಲ ಬಿಡಿ. ಅದು ಅವರವರ ಆಯ್ಕೆ ಹಾಗೂ ಕೆಲವೊಮ್ಮೆ ಅನಿವಾರ್ಯತೆ ಕೂಡಾ?! ಅದರಲ್ಲೇ ಬದುಕಿನ ಸಂತೋಷ ಸಿಗುವುದಾದರೆ ಆ ಬಾಳುವೆಯನ್ನು ಧಿಕ್ಕರಿಸುವ ಅಗತ್ಯ ಹುಟ್ಟುವುದಿಲ್ಲ. ಒಂದು ರೀತಿಯಲ್ಲಿ ನಾವು ‘ಅದನ್ನೂ ಪಾಲಿಸದೆ, ಇದನ್ನೂ ಅನುಸರಿಸದೆ ‘ ನಮ್ಮದೇ ಆದ ರೀತಿಯಲ್ಲಿ ಬದುಕುತ್ತಿದ್ದೇವೆ. ನಮಗೆ ನಮ್ಮ ಬಾಳುವೆಯ ಬಗ್ಗೆ ತೃಪ್ತಿ ಇದ್ದರೆ ನಮ್ಮ ಬದುಕಿನ ಕ್ರಮವನ್ನು ಬದಲಿಸಿಕೊಳ್ಳುವ ಅಗತ್ಯವಿರುವುದಿಲ್ಲವಲ್ಲವೆ? ಎಲ್ಲವೂ ಅವರವರು ಕಂಡಂತೆ ಹಾಗೂ ಅಂದುಕೊಂಡಂತೆ. ಹೀಗಾಗಿ ಅವರದು ಪಿಳ್ಳೆ ಗಂಟಾದರೆ ನಮ್ಮದು ಪಿಳ್ಳೆ ಜುಟ್ಟು, ಅಷ್ಟೇ ವ್ಯತ್ಯಾಸ!

Posted 8/10/2026

No comments:
Post a Comment