ಭಾನುವಾರ, 18 ಒಕ್ಟೋಬರ 2020
ಬೇರೆ ದಿನಗಳು ಭಾನುವಾರದಂತೆ ಇದ್ದರೂ ಭಾನುವಾರ ಯಾವಾಗಲೂ ಶುದ್ಧವಾದ ರಜ ದಿನದಂತೆ. ನಮ್ಮ ದುಬೈ ವರುಷಗಳಲ್ಲಿ ಶುಕ್ರವಾರವು ವಾರದ ರಜ ದಿನವಾಗಿತ್ತು. ಹತ್ತು ವರ್ಷಗಳ ಹಿಂದೆ ಮರಳಿ ಭಾರತಕ್ಕೆ, ಬೆಂಗಳೂರಿಗೆ ಬಂದ ನಂತರ ಅದು ಭಾನುವಾರ ರಜ, ಮನಸ್ಸಿಗೂ, ದೇಹಕ್ಕೂ ಏನೋ ಒಂದು ತರದ ಆಹ್ಲಾದ.
ಕೊರೋನ ಪರ್ವದ ಹಿಂದಿನ ದಿನಗಳಲ್ಲಿ ಭಾನುವಾರವು ಇನ್ನಷ್ಟು ಚಟುವಟಿಕೆಯ ದಿನವಾಗಿತ್ತು. ನಾಟಕ, ಸಂಗೀತ, ಯಕ್ಷಗಾನ ಇತ್ಯಾದಿ ಹತ್ತು ಹಲವಾರು ಕಾರ್ಯಕ್ರಮಗಳಿಗೆ ನಮ್ಮ ಹಾಜರಿ. ಕೆಲದಿನ ಸಂಬಂದಿಕರ ಹೋಮ ಶಾಂತಿ, ನಾಮಕರಣ, ಸೀಮಂತ ಇತ್ಯಾದಿ ಕಾರ್ಯಕ್ರಮಗಳಿಗೆ ನಮ್ಮ ಹಾಜರಿ.
ನಿನ್ನೆಯ ಭಾನುವಾರ ಎಂದಿನಂತೆ ಬೆಳಗ್ಗಿನ ಚಟುವಟಿಕೆ, ಯೋಗ, ಗಿಡಗಳಿಗೆ ನೀರು, ಬೆಳಗ್ಗಿನ ಫಲಾಹಾರ, ಸ್ನಾನ, ಪೂಜೆ ಇತ್ಯಾದಿ. ಬಟ್ಟೆ ಒಗೆಯುವ ಕಾರ್ಯಕ್ರಮವೂ ಇತ್ತು.
ರಿಶಿಕಾಂತನ ಸ್ನೇಹಿತ, ಸಹೋದ್ಯೋಗಿ ಸುಜನ್ ನ ಚಿಕ್ಕ ಭೇಟಿ, ಮಾತುಕತೆ, ಮತ್ತೆ ಮಧ್ಯಾಹ್ನದ ಊಟ.
ಒಂದು ಗಂಟೆಯ ಕಾಲ ವಿಶ್ರಾಂತಿ, ನಿದ್ರೆ.
ಸಂಜೆ ಸೀನ, ಅಮ್ಮ, ಕವಿತಾ ರಿಶಿಕಾಂತ ನೊಡನೆ ಕಬ್ಬನ್ ಪಾರ್ಕಿಗೆ, ಅಲ್ಲಿ ಸುತ್ತಾಟ, ಅಲ್ಲಿ ಅಮ್ಮನ "ಕಥೆ ಕೇಳಿ" ಚಟುವಟಿಕೆಯ ಒಂದು ಭಾಗ. ಹಾಗೇ ವಾಪಸ್ಸು ಮನೆಗೆ.
ಡಾ.ಪಾಂಗಲ್ ವಿರಚಿತ "ಆಚಾರ್ಯ ದ್ರೋಣ" ಯಕ್ಷಗಾನ ಯು ಟ್ಯೂಬ್ ನಲ್ಲಿ ವೀಕ್ಷಣೆ. ಅದು ಹಿಂದೆ ಆದ ಕಾರ್ಯಕ್ರಮದ ಮರು ಪ್ರಸಾರ. ಸುಮಾರು ನಾಲ್ಕು ಗಂಟೆಗಳ ಕಾಲದ ಕಾರ್ಯಕ್ರಮ. ಮಹಾಭಾರತ ಕುರುಕ್ಷೇತ್ರ ಯುದ್ಧದಲ್ಲಿ ಮಹಾ ಬಲಶಾಲಿ ದ್ರೋಣನು ಹೇಗೆ ತನ್ನ ಶಿಷ್ಯರಾದ ಪಾಂಡವರಿಂದ ಸಾವನ್ನು ಅಪ್ಪುತ್ತಾನೆ ಎಂಬ ಕಥೆ.
ಮನೆಯಲ್ಲಿ ಪನೀರ್ ನ ಮೇಲೋಗರದ ಒಡನೆ ಚಪಾತಿಯ ಊಟ.
ಹೀಗೆ ಇದೊಂದು ದಿನಚರಿ.
ಬರೆದಿರುವುದು ಸೋಮವಾರ, 19/10/2020
No comments:
Post a Comment