ನವರಾತ್ರಿ ಹಬ್ಬ
ಬಿರ್ತಿಮನೆ, ಬೆಂಗಳೂರು, ಶನಿವಾರ 24 ಅಕ್ಟೋಬರ 2020
ಒಂಬತ್ತು ದಿನಗಳ ನವರಾತ್ರಿಯ ಹಬ್ಬವು ಹಿಂದೂಗಳ ವಿಶೇಷ ದಿನಗಳು. ದೇವಿಯ ಆರಾಧನೆ, ಪೂಜೆ, ಪುನಸ್ಕಾರ, ಉಪವಾಸ, ಊಟ, ಇತ್ಯಾದಿ ಇತ್ಯಾದಿ.
ನವ ರಾತ್ರಿಯಲ್ಲಿ ನವ ದುರ್ಗೆಯರ ಆರಾಧನೆ ಮಾಡುವುದು ಹಿಂದೂ ಸಂಪ್ರದಾಯ. ಶಕ್ತಿ ದೇವತೆಯರ ಆರಾಧನೆ ಮಾಡುವುದರಿಂದ ದುಷ್ಟ ಶಕ್ತಿಗಳ ದಮನ ಮಾಡುವ ಸಾಮರ್ಥ್ಯವನ್ನು ತಾಯಿ ಕರುಣಿಸುತ್ತಾಳೆ ಅನ್ನೋದು ನಂಬಿಕೆ. ಅಕ್ಟೋಬರ್ 17 ಶನಿವಾರದಿಂದ ವಿಜಯ ದಶಮಿಯವರೆಗೂ ನವರಾತ್ರಿಯ ನವ ದುರ್ಗೆಯರ ಪೂಜೆ, ಪುನಸ್ಕಾರಗಳು ಆರಂಭ ಆಗಲಿವೆ.
ನವರಾತ್ರಿಯ ಮೊದಲ ದಿನ : ಶೈಲಪುತ್ರಿಯ ಆರಾಧನೆ
ನವರಾತ್ರಿಯ ಎರಡನೇ ದಿನ : ಬ್ರಹ್ಮಚಾರಿಣಿ ಆರಾಧನೆ
ನವರಾತ್ರಿಯ ಮೂರನೇ ದಿನ : ಚಂದ್ರಘಂಟಾದೇವಿ ಆರಾಧನೆ
ನವರಾತ್ರಿಯ ನಾಲ್ಕನೇ ದಿನ : ಕೂಷ್ಮಾಂಡಿನಿ ಆರಾಧನೆ
ನವರಾತ್ರಿಯ ಐದನೇ ದಿನ : ಸ್ಕಂದ ಮಾತೆ ಆರಾಧನೆ
ನವರಾತ್ರಿಯ ಆರನೇ ದಿನ : ಕಾತ್ಯಾಯಿನಿ ಆರಾಧನೆ
ನವರಾತ್ರಿಯ ಏಳನೇ ದಿನ : ದುರ್ಗಾ ಮಾತೆ ಆರಾಧನೆ
ನವರಾತ್ರಿಯ ಎಂಟನೇ ದಿನ : ಮಹಾಗೌರಿಯ ಆರಾಧನೆ
ನವರಾತ್ರಿಯ ಒಂಭತ್ತನೇ ದಿನ : ಸಿದ್ಧಿಧಾತ್ರಿ ಆರಾಧನೆ
ನವರಾತ್ರಿಯ ಹತ್ತನೇ ದಿನ ವಿಜಯ ದಶಮಿ
ಆದರೆ ಈ ಬಾರಿಯ ಸಂಭ್ರಮ ಬಹಳ ಸರಳ, ಕೊರೋನ ಮಹಾಮಾರಿ ಜನರ ಮನಸ್ತಿತಿಯನ್ನು ಬದಲಾಯಿಸಿದೆ. "ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ" ಎಂಬ ಅರೋಗ್ಯ ಮಂತ್ರದಿಂದಾಗಿ ಯಾರೂ ಯಾವ ಸಂಭ್ರಮ, ಸಮಾರಂಭಕ್ಕೆ ಹಾಜರಾಗಲು ಹಿಂಜರಿಯುತ್ತಾರೆ.
ಬೆಂಗಳೂರು ಬಿರ್ತಿಮನೆಯಲ್ಲಿಯ ಸಂಭ್ರಮ ಅತ್ಯ್ಯಂತ ಸರಳ, ಶುಭ,ರಾಘು,ಲಹರಿ ಮತ್ತು ರಾಘುವಿನ ಅಪ್ಪ, ಅಮ್ಮ ಮಧ್ಯಾಹ್ನಕ್ಕೆ ಆಗಮನ, ಮನೆಯಲ್ಲಿ ನಳಿನಿ, ಕವಿತಾರಿಂದ ತಯಾರಿಸಿದ ಭರ್ಜರಿ ಊಟ, ಹರಟೆ. ಟೆರೇಸಿನ ನೂತನ ಹಂಚಿನ ಮೇಲ್ಛಾವಣಿಯಲ್ಲಿ ಸ್ವಲ್ಪ ಹೊತ್ತು ಕಳೆಯುವಿಕೆ.
ಬೆಳಿಗ್ಗೆ ಮನೆಯ ದೇವರಿಗೆ ಪೂಜೆ, ನಳಿನಿಯಿಂದ ಮಹಿಳೆಯರಿಗೆ ಅರಸಿನ ಕುಂಕುಮ, ಉಡುಗೊರೆ.
ಹೀಗೆ ಈ ವರ್ಷದ ನವರಾತ್ರಿ ಸಂಭ್ರಮ.
ಬರೆದಿರುವುದು 25/10/2020
No comments:
Post a Comment