2-3-4-ಅಕ್ಟೋಬರ, 2020
ಅದೊಂದು ದಿಡೀರ್ (sudden) ನಿರ್ಧಾರ. ಊರಿಗೆ ಹೋಗುವ ಚಪಲ, ಅಸೆ.
ಹಾಸನ, ಸಕಲೇಶಪುರ, ಮಂಗಳೂರು ಮಾರ್ಗವಾಗಿ ಪಯಣ. ಹಾಸನದ ವರೆಗೆ ಒಳ್ಳೆಯ ರಸ್ತೆ, ಅನುಕೂಲಕರವಾದ ವಾತಾವರಣ, ಹವೆ.ದಾರಿಯಲ್ಲಿ ಮನೆಯಲ್ಲಿ ತಯಾರಿಸಿದ ಗುಳಿಯಪ್ಪ, ಚಿಪ್ಸ್ ಇತ್ಯಾದಿಗಳನ್ನು ಮಂಚಿ ಸುತ್ತ, ರಿಶಿಕಾಂತ್ ಸೋಮಯಾಜಿಯವರ ಡ್ರೈವಿಂಗ್, ಹಾಡುಗಳನ್ನು ಕೇಳುತ್ತ ಪಯಣ.
ಹಾಸನದಿಂದ ರಸ್ತೆಯು ಹಾಳಗಿರುವುದರಿಂದ ನಮ್ಮ ಓಡುವಿಕೆ ನಿಧಾನ ಗತಿಯಲ್ಲಿ ಸಾಗುತಿತ್ತು. ಸಕಲೇಶಪುರದ ನಂತರ ಅದು ಶಿರಾಡಿ ಘಾಟಿ. ಹಲವಾರು ಕಡೆ ಹೊಂಡಗಳು, ನೇರವಾಗಿ ಹೋಗಲು ಅಸಾಧ್ಯ. ಹಾಗಾಗಿ ನಮ್ಮ ವೇಗದ ಗತಿ ನಿಧಾನವಾಗಿ ಮಧ್ಯಾಹ್ನ 3.30 ಗಂಟೆಗೆ ಮಂಗಳೂರನ್ನು ತಲುಪಿ ಸ್ಮಿತಾ-ರಾಘವೇಂದ್ರ ಅವರ ಮನೆಯನ್ನೂ ತಲುಪಿ ಊಟ ಮಾಡಿದ್ದೂ ಆಯಿತು.
ಸುಜಾತ, ವಿಜಯ, ಸ್ಮಿತಾ, ನಳಿನಿ |
ನಂತರ ಅಲ್ಲಿಂದ ಉಡುಪಿಯತ್ತ ಪಯಣ, ಉದ್ಯಾವರ ಅಮ್ಮನ ತಂಗಿ ಸುಜಾತ ಅವರ ಮನೆಗೆ 6 ಗಂಟೆಗೆ. ಅಲ್ಲಿ ಒಂದಿಸ್ಟು ತಿಂಡಿಗಳು, ಕಡುಬು, ಹಾಲುಬಾಯಿ ಇತ್ಯಾದಿ...
ಅಭಿಲಾಷ, ಅನಿಷ, ಶಮ,ದೊಡ್ಡ, ರಿಷಿ,ನಳಿನಿ, ಜಯರಾಮ |
ಸುಮಂಗಲಿ, ಸುಶ್ರಾವ್ಯ, ನಳಿನಿ |
ನಂತರ ಅಲ್ಲಿಂದ ಹೊರಟು, ಊರಿನ ಕೇಂದ್ರ ಬಿರ್ತಿ ಸಾಲಿಕೇರಿಗೆ ಅರ್ಧ ಗಂಟೆಯ ಪಯಣ, ಮನೆ ಸೇರಿದ್ದಾಯಿತು.
ಮಣಿಪಾಲ, ಪೆರಂಪಳ್ಳಿಯ ಸೈಟಿನತ್ತ ಹೋಗಿ, ಅಲ್ಲಿಂದ ಕಡಿಯಾಳಿ ದೇವಸ್ತಾನದ ಮಂಗಳರಾತಿಯನ್ನು ವೀಕ್ಸಿಸಿ ಅಮ್ಮನ ತಂಗಿ ವಿಜಯಳ ಮನೆಗೆ ಭೇಟಿ. ನಂತರ ಅಲ್ಲಿಂದ ಉದ್ಯಾವರ ಸುಜಾತಳ ಮನೆಯಲ್ಲಿ ಭರ್ಜರಿ ಊಟ.
ಮಧ್ಯಾಹ್ನ ಸ್ವಲ್ಪ ಹೊತ್ತಿನ ವಿಶ್ರಾಂತಿಯ ನಂತರ ಸಂಜೆ ಮಟ್ಟು, ಪಿತ್ರೋಡಿ ಬೀಚಿನ ಕಡೆಗೆ. ನಿರಂತರವಾದ ಸಮುದ್ರದ ಅಲೆಗಳನ್ನು ನೋಡುತ್ತಾ, ಹೊಯಿಗೆಯಲ್ಲಿ ಸ್ವಲ್ಪಹೊತ್ತು ನಡಿಗೆ, ಕೂತು ಸಮಯ ಕಳೆದದ್ದಾಯಿತು.
ನಂತರ ಒಂದು ಮರೆಯಲಾಗದ ಘಟನೆ - ಹೊರಡುವಾಗ ಬೀಚಿನಲ್ಲಿ ಕೂತಿದ್ದು, ಅಮ್ಮನ ಹಾಗೂ ನನ್ನ ಮೊಬೈಲುಗಳನ್ನು ಜೇಬಿನಲ್ಲಿ ಹಾಕಿ ಎದ್ದು ವಾಪಸ್ಸು ಹೊರಟದ್ದಾಯಿತು. ಅಮ್ಮನ ಮೊಬೈಲ್ ಹೊಯಿಗೆಯಲ್ಲಿ ಬಿದ್ದಿದ್ದು ಗೊತ್ತಾಗಲಿಲ್ಲ. ಸುಮಾರು ಹತ್ತು ನಿಮಿಷಗಳ ಕಾಲ ಕಾರಿನಲ್ಲಿ ಹೊರಟು ಬರುವಾಗ ಯಾರೋ ಮೊಬೈಲ್ ಕೇಳಿದರು. ನನ್ನ ಕಿಸೆಯಲ್ಲಿದ್ದ ಎರಡರಲ್ಲಿ ಒಂದೇ ಮೊಬೈಲ್ ಇದೆ. ಒಮ್ಮೆ ಶಾಕ್. ಕೂಡಲೇ ಕಾರನ್ನು ಹಿಂದೆ ತಿರುಗಿಸಿ ಕೂತಿದ್ದ ಸ್ತಳಕ್ಕೆ ಧಾವಿಸಿ ಮೊಬೈಲ್ ಗೆ ಹುಡುಕಾಟ. ಅದೇ ಸಮಯ ಹೊಯಿಗೆಯಲ್ಲಿದ್ದ ಮೊಬೈಲನ್ನು ಹಿಡಿದುಕೊಂಡು ಮೂರು ಹುಡುಗರು/ಹುಡುಗಿಯರು ಬರುತಿದ್ದರು. ಅದನ್ನು ನೋಡಿ, ದೇವರು ದೊಡ್ಡವನು, ಅಂತೂ ಸಿಕ್ಕಿತಲ್ಲಾ ಎಂಬ ಸಮಾಧಾನದಿಂದ ವಾಪಸ್ಸು ಉದ್ಯಾವರಕ್ಕೆ ಬಂದು, ಊಟ ಮಾಡಿ ಬಿರ್ತಿಗೆ ವಾಪಸ್ಸು ಬಂದೆವು.
ಮಾರನೇ ದಿನ, ಭಾನುವಾರ, ವಾಪಸ್ಸು ಬೆಂಗಳೊರಿಗೆ ಹೊರಡಬೇಕು. ಬೆಳಿಗ್ಗೆ ಸ್ನಾನ, ಪೂಜೆ, ಉಪಹಾರವನ್ನು ಪೂರೈಸಿ ಸುಮಾರು 12 ಗಂಟೆಯ ವರೆಗೆ ಮಾತುಕತೆ. ಅಭಿಲಾಷ, ಅನಿಷ, ಶಮ, ದೊಡ್ಡ....
ಬೆಳಿಗ್ಗೆ ರಿಷಿ ಉದ್ಯಾವರಕ್ಕೆ ಹೋಗಿ ಅಮ್ಮನನ್ನು ಕರೆದುಕೊಂಡು ಬಂದು ನಂತರ ಸಾಲಿಗ್ರಾಮ ಬೀಚಿಗೆ ಪುನಃ ಹೋಗಿ ಬಂದದ್ದೂ ಆಯಿತು.
ಶ್ರಾದ್ಧ ಊಟ, ಹೆಬ್ರಿ |
ಮಧ್ಯಾಹ್ನ 1 ಗಂಟೆಗೆ ಹೆಬ್ರಿಯನ್ನು ತಲುಪಿ ಅಲ್ಲಿ ವಾಸುದೇವ ಆಚಾರ್ಯರ ಶ್ರಾಧ್ದದ ಊಟ. ಶುಭ, ರಾಘು, ಲಹರಿ ಸಹ ಬೆಂಗಳೂರಿನಿಂದ ಬಂದು ಅವರೂ ಮಾಡಿ, ಒಟ್ಟಿಗೆ ಎರಡು ಕಾರುಗಳಲ್ಲಿ ಆಗುಂಬೆ, ಚಿಕ್ಕಮಗಳೂರು, ಹಾಸನ ದಾರಿಯಾಗಿ ಬೆಂಗಳುರಿನತ್ತ ಪಯಣ, ರಾತ್ರಿ 10 ಗಂಟೆಗೆ ಮನೆಗೆ ಸೇರಿದ್ದಾಯಿತು. ರಿಶಿಕಾಂತನ ಅಮೋಘ ಡ್ರೈವಿಂಗ್.
ಸುಮಾರು 7 ತಿಂಗಳಿಂದ ಮನೆಯಲಿದ್ದು, ಒಂದು ಹೊರ ಸಂಚಾರ, ಊರ ಭೇಟಿಯು ಖುಷಿ ತಂದಿತು.
ಬರೆದಿರುವುದು, ಗುರುವಾರ, 8 ಅಕ್ಟೋಬರ, 2020
No comments:
Post a Comment