Sunday, October 25, 2020

ಆಯುಧ ಪೂಜೆ ನವರಾತ್ರಿ 2020

 ಬಿರ್ತಿಮನೆ, ಬೆಂಗಳೂರು.

ಆದಿತ್ಯವಾರ, 25 ಅಕ್ಟೋಬರ 2020 

ಆಯುಧ ಪೂಜೆಯು ನವರಾತ್ರಿ ಹಬ್ಬದ ಒಂಬತ್ತನೇ ದಿನವಾದ ಮಹಾ ನವಮಿಯಂದು ಆಚರಿಸಲಾಗುತ್ತದೆ.



ಮನೆಯಲ್ಲಿ ಇರುವ  ಉಪಯೋಗಕ್ಕೆ ಬರುವ ಸಾಧನಗಳಿಗೆ ಪೂಜೆ ಮಾಡಿ ಕೃತಾರ್ಥರಾಗುವ ಸಂಪ್ರದಾಯ.  



ಇಲ್ಲಿ ಬಿರ್ತಿಮನೆಯಲ್ಲಿರುವ ಸಂಗೀತ ಸಾಧನಗಳು: ಹಾರ್ಮೋನಿಯಂ, ಕೊಳಲು, ತಾಳ, ಕೀಬೋರ್ಡ್, ಪಿಟೀಲು, ಗಿಟಾರ್, ಡಮರು. ಇವುಗಳನ್ನು ಜೋಡಿಸಿ, ಹೂವು, ನೈವೇದ್ಯ, ಮಂಗಳಾರತಿಯನ್ನು ಮಾಡಿದ್ದಾಯಿತು.



ಇನ್ನು ವಾಹನಗಳು. ಗರಾಜಿನಲ್ಲಿ ಇರುವ ಕಾರುಗಳು, ಮೋಟರ್ ಸೈಕಲನ್ನು ಚೆನ್ನಾಗಿ ತೊಳೆದು, ಒರಿಸಿ ಶುದ್ಧ ಮಾಡಿದ್ದಾಯಿತು. ನಂತರ ಅದಕ್ಕೆ ಪೂಜೆ, ಪುನಸ್ಕಾರ, ಹೂವು, ಅರಸಿನ ಕುಂಕುಮ ವನ್ನು ಸಮರ್ಪಿಸಿ ಆರತಿಯನ್ನು ಮಾಡಿದ್ದಾಯಿತು.


ಸನಾತನ ಸಂಪ್ರದಾಯದಂತೆ ವಾಹನಗಳ ಚಕ್ರದ ಅಡಿಯಲ್ಲಿ ನಿಂಬೆ ಹಣ್ಣನ್ನು ಇರಿಸಿ ವಾಹನವನ್ನು ಮುಂದಕ್ಕೆ ಚಲಾಯಿಸಿ ಅವಕ್ಕೆ ಅರ್ಪಿಸುವ ಸಂಪ್ರದಾಯ. ಮುಂದಿನ ದಿನಗಳಲ್ಲಿ ಅವುಗಳಿಂದ ಯಾವ ತರದ ತೊಂದರೆಗಳು ಬರದಂತೆ ಪ್ರಾರ್ಥಿಸುವುದು.


ಹೀಗೆ ಇಂದಿನ ಆಯುಧ ಪೂಜೆಯ ಕೈಂಕರ್ಯವನ್ನು ಮುಗಿಸಿ ಆತ್ಮ ಸಂತೃಪ್ತಿಯಾಯಿತು ಎನ್ನುವ ಭಾವನೆ.

ಬರೆದುರುವುದು. ಸೋಮವಾರ, 26 ಅಕ್ಟೋಬರ 2020 


No comments:

Post a Comment