Sunday, February 14, 2021

ಸಂಕ್ರಾಂತಿ - ಕನ್ನಡ ನಾಟಕ

Sunday, 14 February 2021

Samsa Bayalu Rangamandira, Bengaluru.

SANKRANTHI  - KANNADA DRAMA

The Play Sankranti was written by well-known Playwright P. Lankesh. The plot involves religious and social disturbance during the 12th century due to which love between a girl and boy was breached. It includes Bijjala’s administration, social reformation by Basavanna and how this incidence caused chaos in common man’s mind.  







12 ನೇ ಶತಮಾನದ, ಬಿಜ್ಜಳ ಮಹಾರಾಜ, ಬಸವಣ್ಣನವರ ಕಾಲದ ಸಾಮಾಜಿಕ ನಾಟಕ. ಕಲಾ ಗಂಗೋತ್ರಿ ತಂಡದವರು ಪ್ರಸ್ತುತ ಪಡಿಸಿದ ಕನ್ನಡ ನಾಟಕ   
" ಸಂಕ್ರಾಂತಿ"
ಕೆಳ ವರ್ಗದ ಯುವಕ ರುದ್ರ, ಬ್ರಾಹ್ಮಣ ಯುವತಿಯನ್ನು ಪ್ರೀತಿಸಿ ಸರಸ ಸಲ್ಲಾಪವನ್ನು ಆಡಿ ಅತ್ಯಾಚಾರವೆಸಗುತ್ತಾನೆ. ಇದೊಂದು ಅತ್ಯಾಚಾರವೋ ಪ್ರೇಮ ಕಲಹವೋ  ಎಂದು ಸಾಬೀತು ಪಡಿಸಲು ಬಿಜ್ಜಳ ಮಹಾರಾಜನ ಆಸ್ಥಾನಕ್ಕೆ ತರಲಾಗುತ್ತದೆ 




ಇದೇ ಸಮಯದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿ, ಶರಣರ ನಂಬಿಕೆಗಳಿಂದಾಗಿ ರಾಜ್ಯದಲ್ಲಿ ಅಶಾಂತಿ, ಗಲಭೆ, ಅತ್ಯಾಚಾರ ಗಳು ನಡೆಯಲು ಪ್ರಾರಂಭವಾಗಿ ಬಿಜ್ಜಳ ಮಹಾರಾಜರು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಾರೆ.
ಬ್ರಾಹ್ಮಣ ಯುವತಿಯು, ಬಸವಣ್ಣನ ಶರಣರ ಗುಂಪಿಗೆ ಸೇರಿದ ರುದ್ರನು ಅತ್ಯಾಚಾರ ಮಾಡಿರುವನು ಎಂದು ಹೇಳಿದಾಗ , ಮಹಾರಾಜರ ಆಸ್ಥಾನದಲ್ಲಿ ರುದ್ರನಿಗೆ "ತಲೆದಂಡ"ದ ಶಿಕ್ಷೆಯನ್ನು ನೀಡಲಾಗುತ್ತದೆ. ರುದ್ರನ ತಂದೆ ಹುಚ್ಚ, ಮಹಾರಾಜರ ಆಸ್ಥಾನದಲ್ಲಿ ಹೆತ್ತ ಕರುಳಿನ ನೋವನ್ನು ತೋಡಿಕೊಂಡರೂ ಶಿಕ್ಷೆಯನ್ನು ವಿಧಿಸಲಾಗುತ್ತದೆ.




ಬಸವಣ್ಣನ ಕಾಲದ (12 ನೇ ಶತಮಾನ) ಜಾತಿ ಪದ್ದತಿಯ ಗೊಂದಲ, ಕ್ರಾಂತಿ, ಶಿವ ಶರಣರ ಕೂಡಲ ಸಂಗಮ ದೇವರಲ್ಲಿ ಬಲವಾದ ನಂಬಿಕೆ, ಪಿ. ಲಂಕೇಶ್ ರಚಿರಿಸಿರುವ ಈ ನಾಟಕದಲ್ಲಿ ಬರುವ ವಿಚಾರಗಳು. ಡಾ. ಬಿ ವಿ ರಾಜಾರಾಂ ಅವರು ಈ ನಾಟಕವನ್ನು ನಿರ್ದೆಶಿಸಿರುತ್ತಾರೆ.
ಹೊಲೆಯರ ಕೇರಿಯಲ್ಲಿ ಕುಡಿತ, ಕುಣಿತ, ಹಾಡುಗಳು ನೀರಸವಾಗಿದ್ದು ಸಂಭಾಷಣೆಯು ಅಧಿಕವಾಗಿತ್ತು. ಬಿಜ್ಜಳ ಮಹಾರಾಜ, ಬಸವಣ್ಣ, ಹುಚ್ಚ ಅವರುಗಳ ಅಭಿನಯ ಚೆನ್ನಾಗಿತ್ತು.
ಒಟ್ಟಿನಲ್ಲಿ ನಾಟಕ ಮುಗಿದಾಗ, ಮನಸ್ಸಿನಲ್ಲಿ ಏನೋ ಗೊಂದಲ, ಅಸಹನೆ ಬರುವಂತಿತ್ತು.

ಬಿ ವಿ ರಾಜಾರಾಂ ಅವರಿಗೆ ಸಮ್ಮಾನ 

ನಾವುಗಳು - ಬಯಲು ರಂಗಮದಿರ 






The play is directed by Dr. B.V.Rajaram.

  • Srinivas Mestru, Siddharth Bhat, Srinivas Kaiwar, Pavana Putra, Chandan Vasishta, Kiran, Kantavara, Srinath , Sushma S, Anannya Amar, Chandana Batni, Kodi Rajesh, Durga Das, Rajaram B.V., and others

ಬರೆದಿರುವುದು ಸೋಮವಾರ, 15 ಫೆಬ್ರುವರಿ 2021 

No comments:

Post a Comment